ಯೆಯ್ಯಡಿಯ ವೃದ್ಧ ನಾಪತ್ತೆ
ಮಂಗಳೂರು, ಸೆ.9: ವೃದ್ಧರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೆಯ್ಯಡಿಯ ರಾಮಣ್ಣ ಗೌಡ ಯಾನೆ ಗೋಪಾಲ (60) ನಾಪತ್ತೆಯಾದವರು. ಇವರು ಸೆ.5ರಂದು ಯೆಯ್ಯಡಿ ರಾಮಾಶ್ರಮ ಕಾಲೇಜಿನ ಎದುರುಗಡೆ ಇರುವ ಜೈನ್ ಹೌಸ್ನ ಮನೆಯಿಂದ ರಾತ್ರಿ ವೇಳೆ ಎದ್ದು ಹೋಗಿದ್ದಾರೆ. ಮನೆಗೆ ವಾಪಸಾಗದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: ಎತ್ತರ- 5 ಅಡಿ 7 ಇಂಚು, ಸಾಧಾರಣ ಸಪೂರ ಶರೀರ, ಬಿಳಿ ಮೀಸೆ, ಬಿಳಿ ಕೂದಲು. ನೀಲಿ ಬಣ್ಣದ ಚೌಕುಳಿಯ ಲುಂಗಿ ಹಾಗೂ ತಲೆಗೆ ಕೆಂಪು ಬಣ್ಣದ ಬೈರಸ್ ಕಟ್ಟಿಕೊಂಡಿದ್ದರು. ಕನ್ನಡ ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂ.ಸಂ.: 0824- 2220529, 9480805354 ಅಥವಾ ಜಿಲ್ಲಾ ಕಂಟ್ರೋಲ್ ದೂ.ಸಂ.:- 2220800ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story