Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಸ್ವಸ್ಥ ಯುವಕನಿಗೆ ಆಪತ್ಬಾಂಧವರಾದ...

ಅಸ್ವಸ್ಥ ಯುವಕನಿಗೆ ಆಪತ್ಬಾಂಧವರಾದ ಆಸಿಫ್: ಕುಟುಂಬ ಸೇರಿದ ಯುವಕ

ವಾರ್ತಾಭಾರತಿವಾರ್ತಾಭಾರತಿ10 Sept 2020 5:50 PM IST
share
ಅಸ್ವಸ್ಥ ಯುವಕನಿಗೆ ಆಪತ್ಬಾಂಧವರಾದ ಆಸಿಫ್: ಕುಟುಂಬ ಸೇರಿದ ಯುವಕ

ಮಂಗಳೂರು, ಸೆ.10: ಗೊತ್ತು ಗುರಿಯಿಲ್ಲದೆ, ಮಂಗಳೂರು ರಥಬೀದಿಯಲ್ಲಿ ಮೂರು ವರ್ಷಗಳಿಂದ ಜನರಿಗೆ ಕಲ್ಲೆಸೆದು ಓಡುತ್ತಿದ್ದ, ಅಂಗಡಿಗಳ ಮೇಲೆ ಕಲ್ಲೆಸೆದು ಗಾಜು ಪುಡಿ ಮಾಡುತ್ತಾ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ಯುವಕ ಕೊನೆಗೂ ಕುಟುಂಬ ಸೇರಿದ್ದಾರೆ.

ಮುಲ್ಕಿ ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಶನ್ ಸೆಂಟರ್‌ನ ಆಸಿಫ್ ರವರು ಯುವಕನ ಪಾಲಿನ ಆಪತ್ಬಾಂಧವರಾಗಿ ಚಿಕಿತ್ಸೆ ಒದಗಿಸಿ, ಯುವಕನ ಮೂಲ ನೆಲೆಯನ್ನು ಪತ್ತೆ ಹಚ್ಚಿ ಇದೀಗ ದ.ಕ. ಜಿಲ್ಲಾ ಆಂಜನಾ ಪಟೇಲ್ ಸಮಾಜ ಪದಾಧಿ ಕಾರಿಗಳಿಗೆ ಇಂದು ಹಸ್ತಾಂತರಿಸಿದರು.

32ರ ಹರೆಯದ ಯುವಕನ ಹೆಸರು ಮಹೇಶ್. ರಾಜಸ್ತಾನದ ಮೂಲದ ಮಹೇಶ್‌ನನ್ನು ಕರೆದುಕೊಂಡು ಹೋಗಲು ಕುಟುಂಬದ ಸದಸ್ಯರು ಬಂದಿದ್ದು, ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಗೋವಿಂದರಾಜು ಅವರ ಸಮ್ಮುಖದಲ್ಲಿ ಕುಟುಂಬ ಸದಸ್ಯರಿಗೆ ಬೀಳ್ಕೊಡಲಾಯಿತು.

ನಗರದ ಕಾರ್‌ಸ್ಟ್ರೀಟ್ ಪ್ರದೇಶದಲ್ಲಿ ಸುಮಾರು ಮೂರು ವರ್ಷಗಳಿಂದ ಅಂಗಿಯನ್ನೂ ಹಾಕಿಕೊಳ್ಳದೆ ಅಲೆಮಾರಿಯಂತೆ ಸುತ್ತುತ್ತಿದ್ದ ಮಾನಸಿಕ ಅಸ್ವಸ್ಥ ಜನಸಾಮಾನ್ಯರಿಗೆ ತೊಂದರೆಯನ್ನೂ ನೀಡುತ್ತಿದ್ದ. ಅನೇಕ ಬಾರಿ ಪೊಲೀಸರಿಗೆ ದೂರು ನೀಡಿ, ಪೊಲೀಸರು ಬರುವಾಗ, ತಪ್ಪಿಸಿ ಕೊಳ್ಳುತ್ತಿದ್ದ. ಜನರು ಏನಾದರೂ ಕೊಟ್ಟರೆ ತಿನ್ನುತ್ತಾ ದೇಸ್ಥಾನದ ಜಗಲಿಯಲ್ಲಿ ಮಲಗುತ್ತಿದ್ದ. ಆತನಿಗೆ ಏನಾದರೂ ವ್ಯವಸ್ಥೆ ಮಾಡಿ ಎಂದು ಸ್ಥಳೀಯ ಕಾಳಿಕಾಂಬ ಕೋಲ್ಡ್ ಹೌಸ್‌ನ ನಾರಾಯಣ ಎಂಬವರು ಬಂದರಿನ ಸಲಾಮ್ ಎಂಬವರಿಗೆ ತಿಳಿಸಿದ್ದರು.

ಸಲಾಮ್ ಅವರು ಆಸಿಫ್ ಆಪತ್ಬಾಬಂಧವ ಅವರಿಗೆ ಮಾಹಿತಿ ನೀಡಿದ್ದರು. ಆಸ್ಿ ಮತ್ತು ಆ್ತಾಬ್ ಆ.28ರಂದು ಕಾರ್‌ಸ್ಟ್ರೀಟ್‌ನಲ್ಲಿ ಆ ಯುವಕನನ್ನು ಹಿಡಿದು, ಸ್ಥಳೀಯರ ನೆರವಿನಿಂದ ಅಲ್ಲೇ ಗಡ್ಡ, ಕೂದಲು ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ತಮ್ಮ ಪುನರ್ವಸತಿ ಕೇಂದ್ರಕ್ಕೆ ಕರದೊಯ್ದಿದ್ದರು.

ಹೆಸರು, ವಿಳಾಸ ಗೊತ್ತಿಲ್ಲದ ಆ ವ್ಯಕ್ತಿಗೆ ಆಸ್ಿ ಅವರು ರಾಜು ಎಂಬ ನಾಮಕರಣ ಮಾಡಿದ್ದರು. ಎರಡು ದಿನ ತಮ್ಮ ಕೇಂದ್ರದಲ್ಲಿಟ್ಟ ಬಳಿಕ ನಿಯಮದಂತೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿತ್ತು. ಮಾನಸಿಕ, ದೈಹಿಕ ಚಿಕಿತ್ಸೆಯಿಂದ ಚೇತರಿ ಕೊಂಡ ರಾಜು, ನಿಧಾನವಾಗಿ ತನ್ನ ಹಳೆಯ ಕಥೆಯನ್ನೆಲ್ಲಾ ನೆನಪಿಸಿಕೊಂಡು, ಮನೆಯವರ ಬಗ್ಗೆ ಯೋಚಿಸತೊಡಗಿದ್ದ. ಕೇಂದ್ರದ ವಾರ್ಡನ್ ನೆರವಿನಿಂದ ಮೊಬೈಲ್ ಮೂಲಕ ತನ್ನ ಮನೆಗೆ ಫೋನ್ ಮಾಡುತ್ತಾನೆ.

ಆತನ ಇರುವಿಕೆ ಬಗ್ಗೆ ತಿಳಿದ ತಕ್ಷಣ, ಮನೆಯವರು ಮಂಗಳೂರಿನಲ್ಲಿರುವ ಪಟೇಲ್ ಸಮುದಾಯಕ್ಕೆ ಮಾಹಿತಿ ನೀಡಿದರು. ಅವರು ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಿಸಿದರು. ಅದು ರಾಜಸ್ತಾನದ ಜೋಧ್‌ಪುರದ ಲೋನಿ ತಾಲೂಕಿನ ಧವಾ ಎಂಬಲ್ಲಿಯ ಪ್ರತಿಷ್ಠಿತ ಕುಟುಂಬ. ಈ ರಾಜುವಿನ ಅಸಲಿ ಹೆಸರು ಮಹೇಶ್. ಪದವಿ ಶಿಕ್ಷಣ ಪಡೆದು, ರೈಲ್ವೇಯಲ್ಲಿ ಕೆಲಸಕ್ಕೆ ಆಯ್ಕೆಯಾಗಿದ್ದ. ಯಾವುದೋ ಸಣ್ಣ ವಿಚಾರದಿಂದ ಮಾನಸಿಕ ಖಿನ್ನತೆ ಗೊಳಲಾಗಿದ್ದ. ಹಾಗೆ ಮೂರು ವರ್ಷದ ಹಿಂದೆ ಮುಂಬೈಯಿಂದ ನಾಪತ್ತೆಯಾಗಿದ್ದ. ಆತನನ್ನು ಹುಡುಕಲು ಮನೆಯವರು ಬಹಳಷ್ಟು ಪ್ರಯತ್ನ ಮಾಡಿದರೂ, ಸಫಲರಾಗಿರಲಿಲ್ಲ.

ಆಸಿಫ್ ಆಪತ್ಬಾಂಧವ ಅವರ ಸಕಾಲಿಕ ಸಹಾಯ, ವೈದ್ಯಕೀಯ ಚಿಕಿತ್ಸೆಯಿಂದ ಮಹೇಶನೇ ಕರೆ ಮಾಡಿ ಹೇಳಿದ ತಕ್ಷಣ, ಬುಧವಾರವೇ ಮಹೇಶ್ ಪಟೇಲ್‌ನ ತಂದೆ ಮತ್ತು ಸಹೋದರ ಮಂಗಳೂರಿಗೆ ಬರಲು ಹೊರಟಿದ್ದರು. ಮುಂಬೈ ತನಕ ವಿಮಾನದಲ್ಲಿ ಬಂದ ಅವರಿಗೆ ಮಂಗಳೂರಿಗೆ ಸಂಪರ್ಕ ವಿಮಾನ ಸಿಗದ ಹಿನ್ನೆಲೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಈ ಮಧ್ಯೆ, ಆಂಜನಾ ಪಟೇಲ್ ಸಮಾಜದ ಅಧ್ಯಕ್ಷ ಪಾನ್ಸಾರಾಮ್ ಪಟೇಲ್, ಮಾಜಿ ಅಧ್ಯಕ್ಷ ಮೂಲಾರಾಮ್ ಪಟೇಲ್ ಮತ್ತು ಸದಸ್ಯ ಜಿತೇಂದ್ರ ಪಟೇಲ್ ಮೇಶ್‌ನನ್ನು ಇಂದು ಕರೆದೊಯ್ದರು.
ಆಸಿಫ್ ಆಪತ್ಬಾಂಧವ, ನಾರಾಯಣ ಮತ್ತಿತರರು ಮಹೇಶ್‌ನನ್ನು ಬೀಳ್ಕೊಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X