ಕರಾವಳಿಯಲ್ಲಿ ಇನ್ನೆರೆಡು ದಿನ ಮಳೆ: ಹವಾಮಾನ ಇಲಾಖೆ

ಮಂಗಳೂರು, ಸೆ.10: ಹಲವು ದಿನಗಳ ಬಳಿಕ ಹಗಲು ಹೊತ್ತಿನಲ್ಲಿ ಕಾಣಿಸಿಕೊಳ್ಳದ ಮಳೆಯು ಗುರುವಾರ ಮತ್ತೆ ಸುರಿದಿದೆ. ದಿನವಿಡೀ ಮೋಡ ಕವಿದ ವಾತಾವರಣದ ಮಧ್ಯೆ ಸಾಧಾರಣ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಸೆ.11 ಮತ್ತು 12ರಂದು ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಸುಮಾರು 204.5 ಮಿ.ಮೀ. ಮಳೆಯಾಗಬಹುದು ಎಂದು ಅಂದಾಜಿಸಿದೆ.
ಮುಂಜಾಗರೂಕತಾ ಕ್ರಮವಾಗಿ ಸಾರ್ವಜನಿಕರು ನದಿ-ಸಮುದ್ರಕ್ಕೆ ಇಳಿಯಬಾರದು. ಅಪಾಯಕಾರಿ ಕಟ್ಟಡ, ಕಂಬಗಳು, ಮರಗಳ ಕೆಳಗೆ ನಿಲ್ಲಬಾರದು. ಅಧಿಕಾರಿಗಳು ಕೇಂದ್ರ ಸ್ಥಾನಬಿಟ್ಟು ತೆರಳಬಾರದು ಎಂದು ಸೂಚಿಸಲಾಗಿದೆ.
ಮಳೆ ಪ್ರಮಾಣ : ಬಂಟ್ವಾಳ: 15.1 ಮಿ.ಮಿ., ಬೆಳ್ತಂಗಡಿ 10.9 ಮಿ.ಮೀ., ಮಂಗಳೂರು 24.6 ಮಿ.ಮಿ.,ಪುತ್ತೂರು 5.1 ಮಿ.ಮೀ. ಸುಳ್ಯ 2.8 ಮಿ.ಮೀ.. ಸರಾಸರಿ 11.7 ಮಿ.ಮೀ.ಮಳೆಯಾಗಿದೆ.
Next Story





