ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆ ಬಹುಮಾನ ವಿತರಣೆ
ಉಡುಪಿ, ಸೆ.10: ಜೆಸಿಐ ಕಟಪಾಡಿಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆಯ ಬಹುಮಾನ ವಿತರಣೆಯು ಬುಧವಾರ ನಡೆದ ಜೇಸೀ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ನೆರವೇರಿತು.
ಜೆಸಿಐ ವಲಯ 15ರ ಉಪಾಧ್ಯಕ್ಷ ಆಶಾ ಅಲನ್ ವಾಝ್ ಹಾಗೂ ಮಾಜಿ ವಲಯಾಧ್ಯಕ್ಷ ಹರಿಶ್ಚಂದ್ರ ಅಮೀನ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸ್ಪರ್ಧೆಯ ತೀರ್ಪುಗಾರರನ್ನು ಸ್ಮರಣಿಕೆ ನೀಡಿ ಗೌರಸಲಾಯಿತು. ಜೆಸಿಐ ಕಟಪಾಡಿಯ ಅಧ್ಯಕ್ಷ ದಿನೇಶ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಗೀತ ಸ್ಪರ್ಧೆಯ ನಿರ್ದೇಶಕ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು.
Next Story





