ಚೀನಾ ರಾಯಭಾರಿ ನೀಲಿಚಿತ್ರಕ್ಕೆ ‘ಲೈಕ್’ ಮಾಡಿದ ಪ್ರಕರಣ: ಟ್ವಿಟರ್ ಖಾತೆಗೆ ಕನ್ನ ಎಂದ ರಾಯಭಾರ ಕಚೇರಿ

ಲಂಡನ್, ಸೆ. 10: ಬ್ರಿಟನ್‌ಗೆ ಚೀನಾದ ರಾಯಭಾರಿಯ ಅಧಿಕೃತ ಟ್ವಿಟರ್ ಖಾತೆಯಿಂದ ನೀಲಿಚಿತ್ರವೊಂದಕ್ಕೆ ‘ಲೈಕ್’ ಮಾಡಿರುವ ಘಟನೆಗೆ ಕೋಪದಿಂದ ಪ್ರತಿಕ್ರಿಯಿಸಿರುವ ರಾಯಭಾರ ಕಚೇರಿಯು, ರಾಯಭಾರಿಯ ಖಾತೆಗೆ ಕನ್ನ ಹಾಕಲಾಗಿದೆ ಎಂದು ಆರೋಪಿಸಿದೆ ಹಾಗೂ ಈ ಬಗ್ಗೆ ತನಿಖೆ ನಡೆಸುವಂತೆ ಟ್ವಿಟರ್ ಕಂಪೆನಿಯನ್ನು ಒತ್ತಾಯಿಸಿದೆ.
ರಾಯಭಾರಿ ಲಿಯು ಕ್ಸಿಯಾವೊಮಿಂಗ್‌ರ ಟ್ವಿಟರ್ ಖಾತೆಯ ‘ಲೈಕ್ಡ್’ ವಿಭಾಗದಲ್ಲಿ ಈ ವೀಡಿಯೊ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ಇತ್ತು ಹಾಗೂ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳು ಬಂದಿದ್ದವು. ಬಳಿಕ ವೀಡಿಯೊವನ್ನು ತೆಗೆದುಹಾಕಲಾಗಿತ್ತು.
‘‘ಕೆಲವು ಚೀನಾ ವಿರೋಧಿ ಶಕ್ತಿಗಳು ರಾಯಭಾರಿ ಲಿಯು ಕ್ಸಿಯಾವೊಮಿಂಗ್‌ರ ಟ್ವಿಟರ್ ಖಾತೆಗೆ ಕನ್ನಹಾಕಿವೆ ಹಾಗೂ ಸಾರ್ವಜನಿಕರನ್ನು ವಂಚಿಸಲು ಅಸಹ್ಯ ವಿಧಾನಗಳನ್ನು ಬಳಸಿವೆ’’ ಎಂದು ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಹಾಕಲಾದ ಹೇಳಿಕೆಯೊಂದು ತಿಳಿಸಿದೆ.
ಚೀನಾದಲ್ಲಿ ಟ್ವಿಟರ್ ಮತ್ತು ನೀಲಿಚಿತ್ರಕ್ಕೆ ನಿಷೇಧ ಹೇರಲಾಗಿದೆ.
Next Story