ಕಾರ್ಕಳ, ಸೆ.10: ಕಾಲು ಗಂಟುನೋವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕುಕ್ಕುಂದೂರು ಗ್ರಾಮದ ನಕ್ರೆ ಚರ್ಚ್ ಬಳಿಯ ನಿವಾಸಿ ಕಿನ್ನಿಗ(65) ಎಂಬವರು ಮಾನಸಿಕವಾಗಿ ನೊಂದು ಸೆ.9ರಂದು ರಾತ್ರಿ ವೇಳೆ ಮನೆಯ ಸಮೀಪದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.