ಸಾರಿಗೆ ಇಲಾಖೆಯ ಸಕಾಲ ಸೇವೆಗಳು ಸೇವಾ ಸಿಂಧು ಮೂಲಕ ನಿರ್ವಹಣೆ
ಬೆಂಗಳೂರು, ಸೆ.10: ಸಾರಿಗೆ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ 29 ಸಕಾಲ ಸೇವೆಗಳು ಹಾಗೂ ಸಾರಿಗೆ ಸಂಸ್ಥೆಗಳಾದ ಕೆಎಸ್ಸಾರ್ಟಿಸಿಯ 6, ಬಿಎಂಟಿಸಿಯ 2, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 6 ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 6 ಸಕಾಲ ಸೇವೆಗಳಿಗೆ ಸಂಬಂಧಿಸಿದಂತೆ ಆನ್‍ಲೈನ್ ತಂತ್ರಾಂಶದ ಮುಖಾಂತರ ಅರ್ಜಿ ಸ್ವೀಕರಿಸುವುದನ್ನು ಹಾಗೂ ಸೇವಾ ಸಿಂಧು ಪೋರ್ಟಲ್‍ನಲ್ಲಿ ಸಂಯೋಜಿಸಿ ಸಕಾಲ ಸೇವೆಗಳನ್ನು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸುವಂತೆ ಸರಕಾರ ಆದೇಶ ಹೊರಡಿಸಿದೆ.
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ: ಕಲಿಕಾ ಚಾಲನಾ ಪರವಾನಿಗೆ(ಎಲ್‍ಎಲ್), ಚಾಲನಾ ಪರವಾನಿಗೆ(ಡಿಎಲ್), ವಾಹನಗಳ ನೋಂದಣಿ, ನಕಲು ಪರವಾನಿಗೆ, ನಕಲು ನೋಂದಣಿ ಪ್ರಮಾಣಪತ್ರ, ಕಲಿಕಾ ಚಾಲನಾ ಪರವಾನಿಗೆಯ ನಕಲು ಪ್ರತಿ, ಕಲಿಕಾ ಚಾಲನಾ ಪರವಾನಿಗೆ ಹೊಸ ಭಾಗದ ಸೇರ್ಪಡೆ, ಕಲಿಕಾ ಚಾಲನಾ ಪರವಾನಿಗೆಯಲ್ಲಿ ವಿಳಾಸ ಬದಲಾವಣೆ.
ಚಾಲಕರಿಗೆ ಪಿಎಸ್‍ವಿ ಬ್ಯಾಡ್ಜ್ ವಿತರಣೆ, ಚಾಲಕರಿಗೆ ಪಿಎಸ್‍ವಿ ಬ್ಯಾಡ್ಜ್‍ನ ನಕಲು ವಿತರಣೆ, ನೂತನ ಚಾಲನಾ ತರಬೇತಿ ಶಾಲೆ ಆರಂಭಿಸಲು ಪರವಾನಿಗೆ ನೀಡುವುದು, ಚಾಲನಾ ತರಬೇತಿ ಶಾಲೆಯ ನವೀಕರಣ, ಕಂಡಕ್ಟರ್ ಪರವಾನಿಗೆಯಲ್ಲಿ ವಿಳಾಸ ಬದಲಾವಣೆ, ಕಂಡಕ್ಟರ್ ಪರವಾನಿಗೆ ಹಾಗೂ ಬ್ಯಾಡ್ಜ್‍ನ ನಕಲು ಪ್ರತಿ, ಅಂತರ್‍ರಾಷ್ಟ್ರೀಯ ಚಾಲನಾ ಪರವಾನಿಗೆ ಪರ್ಮಿಟ್.
ತಾತ್ಕಾಲಿಕ ನೋಂದಣಿ, ಅಂತರ್ ರಾಜ್ಯ ವಾಹನಗಳ ನೂತನ ನೋಂದಣಿ ಪ್ರಕ್ರಿಯೆ, ಮಾಲಕತ್ವದ ವರ್ಗಾವಣೆ, ವಾಹನ ಮಾಲಕನ ನಿಧನದ ಬಳಿಕ ಮಾಲಕತ್ವದ ಹಕ್ಕು ವರ್ಗಾವಣೆ, ರಾಜ್ಯದಲ್ಲಿ ಬಹಿರಂಗ ಹರಾಜು ಮೂಲಕ ಖರೀದಿಸಿದ ವಾಹನದ ಮಾಲಕತ್ವ ಬದಲಾವಣೆ, ಬಿ-ರಿಜಿಸ್ಟರ್, ಹೈಪೋಥಿಕೇಷನ್ ಎಂಟ್ರಿ/ಲೀಸ್ ಅಗ್ರಿಮೆಂಟ್, ಕ್ಲಿಯರೆನ್ಸ್/ರಿಲಿಸಿಂಗ್ ಸರ್ಟಿಫಿಕೇಟ್ ವಿತರಣೆ, ಬಿ-ಎಕ್ಸ್‍ಟ್ರಾಕ್ಟ್ ಖಾತಾ ಸೇವೆ, ಚಾಲನಾ ಪರವಾನಿಗೆಯ ನವೀಕರಣ, ನೋಂದಣಿ ಪ್ರಮಾಣಪತ್ರದ ನವೀಕರಣ(ಎನ್‍ಟಿ), ಸಾಮರ್ಥ್ಯ ಪ್ರಮಾಣಪತ್ರದ ನವೀಕರಣ(ಟಿಆರ್).
ಕೆಎಸ್ಸಾರ್ಟಿಸಿ: ಶಾಲಾ ಮಕ್ಕಳಿಗೆ ಬಸ್ ಪಾಸ್ ವಿತರಣೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ವಿಕಲಚೇತನರಿಗೆ ರಿಯಾಯಿತಿ ಬಸ್‍ಪಾಸ್, ಅಪಘಾತ ಪರಿಹಾರ ನಿಧಿ, ದೃಷ್ಟಿಹೀನರಿಗೆ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ, ವಿಧವೆಯರಿಗೆ 2000 ರೂ.ಗಳವರೆಗಿನ ಉಚಿತ ಪ್ರಯಾಣ ಕೂಪನ್ ವಿತರಣೆ.
ಬಿಎಂಟಿಸಿ: ಶಾಲಾ ಮಕ್ಕಳಿಗೆ ಬಸ್ ಪಾಸ್ ವಿತರಣೆ, ವಿಕಲಚೇತನರಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ.
ವಾಯವ್ಯ ರಸ್ತೆ ಸಾರಿಗೆ: ಶಾಲಾ ಮಕ್ಕಳಿಗೆ ಬಸ್ ಪಾಸ್ ವಿತರಣೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ವಿಕಲಚೇತನರಿಗೆ ರಿಯಾಯಿತಿ ಬಸ್ ಪಾಸ್, ಅಪಘಾತ ಪರಿಹಾರ ನಿಧಿ, ದೃಷ್ಟಿಹೀನರಿಗೆ ಉಚಿತ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ, ವಿಧವೆಯರಿಗೆ 2000 ರೂ.ಗಳವರೆಗಿನ ಉಚಿತ ಪ್ರಯಾಣ ಕೂಪನ್ ವಿತರಣೆ.
ಈಶಾನ್ಯ ಸಾರಿಗೆ ಸಂಸ್ಥೆ: ಶಾಲಾ ಮಕ್ಕಳಿಗೆ ಬಸ್ ಪಾಸ್ ವಿತರಣೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ವಿಕಲಚೇತನರಿಗೆ ರಿಯಾಯಿತಿ ಬಸ್ ಪಾಸ್, ಅಪಘಾತ ಪರಿಹಾರ ನಿಧಿ, ದೃಷ್ಟಿಹೀನರಿಗೆ ಉಚಿತ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ, ವಿಧವೆಯರಿಗೆ 2000 ರೂ.ಗಳವರೆಗಿನ ಉಚಿತ ಪ್ರಯಾಣ ಕೂಪನ್ ವಿತರಣೆ ಮಾಡುವ ಸೇವೆಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸುವಂತೆ ಸಾರಿಗೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.







