ರಾಜ್ಯಾದ್ಯಂತ ಪಾರ್ಕ್ ಗಳಲ್ಲಿನ ರಸ್ತೆಗಳು ಸಾರ್ವಜನಿಕ ಬಳಕೆಗೆ ಅವಕಾಶ
ಬೆಂಗಳೂರು, ಸೆ.10: ಕೊರೋನ ಲಾಕ್‍ಡೌನ್‍ಗಳು ಎಲ್ಲ ಮುಗಿದು ಅನ್‍ಲಾಕ್-4 ಜಾರಿಯಲ್ಲಿದ್ದು, ಈ ಹಂತದಲ್ಲಿ ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ, ಉಳಿದ ವಲಯಗಳಲ್ಲಿ ಸಾರ್ವಜನಿಕ ಉದ್ಯಾನವನಗಳು, ಉದ್ಯಾನವನದೊಳಗಿನ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಕಲ್ಪಿಸಿ, ಸರಕಾರ ಆದೇಶ ಹೊರಡಿಸಿದೆ.
ಸದ್ಯಕ್ಕೆ ಕೊರೋನ ಹೆಚ್ಚಾಗಿದ್ದು ಕಂಟೈನ್‍ಮೆಂಟ್ ಝೋನ್‍ಗಳೆಂದು ಗುರುತಿಸಲ್ಪಟ್ಟ ಸ್ಥಳಗಳಲ್ಲಿರುವ ಉದ್ಯಾನವನಗಳು ಮುಚ್ಚಲಾಗಿರುತ್ತದೆ. ಉಳಿದೆಲ್ಲ ಕಡೆ ಲಾಕ್‍ಡೌನ್‍ಗೂ ಪೂರ್ವದಲ್ಲಿದ್ದಂತೆ ಉದ್ಯಾನವನಗಳಿಗೆ ಸಾರ್ವಜನಿಕರು ಇನ್ನು ಭೇಟಿ ಕೊಡಬಹುದಾಗಿದೆ. ಆದರೆ ಕೊವಿಡ್-19 ನಿಯಂತ್ರಣಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಕಡ್ಡಾಯ ಎಂದು ಸರಕಾರ ತಿಳಿಸಿದೆ.
Next Story





