ವಡೋದರಾ ಆಸ್ಪತ್ರೆಯ ಬೆಂಕಿ ಅವಘಡಕ್ಕೆ ಮೇಡ್-ಇನ್-ಗುಜರಾತ್ ಧಮನ್-1 ವೆಂಟಿಲೇಟರ್ ಕಾರಣ?

Photo: twitter(@ahmedabadmirror)
ಅಹ್ಮದಾಬಾದ್: ಮಂಗಳವಾರ ಗುಜರಾತ್ ರಾಜ್ಯದ ವಡೋದರಾದ ಎಸ್ಎಸ್ಜಿ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಅಲ್ಲಿನ ಧಮನ್-1 ವೆಂಟಿಲೇಟರ್ ಕಾರಣವಾಗಿರಬಹುದೆಂದು ಅವಘಡದ ಕುರಿತಂತೆ 'Ahmedabad Mirror' ಪೋಸ್ಟ್ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದು ಬಂದಿದೆ.
ಧಮನ್-1 ವೆಂಟಿಲೇಟರ್ ಗೆ ಅಹ್ಮದಾಬಾದ್ನಲ್ಲಿರುವ ನ್ಯಾಷನಲ್ ಬೋರ್ಡ್ ಫಾರ್ ಟೆಸ್ಟಿಂಗ್ ಎಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ನಿಂದ ಪ್ರಮಾಣೀಕೃತವಾದ ಇಲೆಕ್ಟ್ರಾನಿಕ್ಸ್ ಎಂಡ್ ಕ್ವಾಲಿಟಿ ಡೆವಲೆಪ್ಮೆಂಟ್ ಸೆಂಟರ್ ನಿಂದ ಅಗತ್ಯ ಪ್ರಮಾಣಪತ್ರ ಲಭಿಸಿತ್ತು ಎಂದೂ ವರದಿ ತಿಳಿಸಿದೆ. ಅಷ್ಟೇ ಅಲ್ಲದೆ ಈ ಮೇಡ್-ಇನ್-ಗುಜರಾತ್ ವೆಂಟಿಲೇಟರ್ ಗಳಿಗೆ ಮುಖ್ಯಮಂತ್ರಿ ವಿಜಯ್ ರುಪಾನಿ ಅವರ ಬೆಂಬಲವೂ ಬಹಳಷ್ಟಿದ್ದರೂ ಆರಂಭದಿಂದಲೂ ಅವುಗಳು ವಿವಾದಕ್ಕೊಳಗಾಗಿವೆ. ರಾಜಕೋಟ್ ಮೂಲದ ಸಂಸ್ಥೆಯೊಂದು ರಾಜ್ಯ ಸರಕಾರಕ್ಕೆ ಇಂತಹ 1000 ವೆಂಟಿಲೇಟರ್ ಗಳನ್ನು ಒದಗಿಸಿದ್ದರೂ ಅವುಗಳು ಯಾಂತ್ರೀಕೃತ ಅಂಬು ಬ್ಯಾಗ್ಗಳು ಎಂದು ನಂತರ ತಿಳಿದು ಬಂದಿತ್ತು.
ಮಂಗಳವಾರದ ಬೆಂಕಿ ಅವಘಡಕ್ಕೆ ಈ ವೆಂಟಿಲೇಟರ್ ಕಾರಣವೇ ಅಥವಾ ಬೇರೇನಾದರೂ ಕಾರಣವೇ ಎಂದು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯ ತನಿಖೆ ನಡೆಸುತ್ತಿದೆ.
CCTV reveals that #ventilator, not short circuit caused SSG hospital fire pic.twitter.com/TBd0WOY6yj
— Ahmedabad Mirror (@ahmedabadmirror) September 10, 2020







