ಪಿ. ಉಸ್ಮಾನ್ ಹಾಜಿ ದರ್ಬೆ ನಿಧನ
ಪುತ್ತೂರು : ತಾಲೂಕಿನ ಮುಂಡೂರು ಗ್ರಾಮದ ಪಂಜಳ ನಿವಾಸಿ ದಿ. ಅಹಮ್ಮದ್ ಕುಂಞಿ ಅವರ ಪುತ್ರ ನಗರದ ದರ್ಬೆ ನಿವಾಸಿ ಪಿ. ಉಸ್ಮಾನ್ ಹಾಜಿ (62) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರ ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಯ್ದಿನ್ ಅರ್ಶದ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಪುತ್ತೂರು ಕೇಂದ್ರ ಜುಮಾ ಮಸೀದಿಗೊಳಪಟ್ಟ ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ಶುಕ್ರವಾರ ಸಂಜೆ ನಡೆಯಿತು.
Next Story