ಕಾಂಗ್ರೆಸ್ ಮುಖಂಡ ದುರ್ಗಾದಾಸ್ ಶೆಟ್ಟಿ ನಿಧನ

ಉಡುಪಿ, ಸೆ.11: ಕಾಂಗ್ರೆಸ್ ಮುಖಂಡ, ಸಮಾಜಸೇವಕ, ಶಿರಿಬೀಡು ಕಾಡಬೆಟ್ಟು ನಿವಾಸಿ ದುರ್ಗಾದಾಸ್ ಶೆಟ್ಟಿ(55) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಯುವ ಉದ್ಯಮಿ, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ನಗರಸಭೆ ಚುನಾವಣೆಯಲ್ಲಿ ಶಿರಿಬೀಡು ವಾರ್ಡಿ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವ ಕಂಡಿದ್ದರು. ಮಾರುತಿ ವೀಥಿಕಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story





