ಮಾರಿಶಸ್: ತೈಲ ಸೋರಿಕೆ ಹಡಗಿನ ಮಾಲೀಕರಿಂದ ಪರಿಹಾರ

ಸಾಂದರ್ಭಿಕ ಚಿತ್ರ
ಟೋಕಿಯೊ (ಜಪಾನ್), ಸೆ. 11: ಮಾರಿಶಸ್ ಕರಾವಳಿಯಲ್ಲಿ ತೈಲ ಸೋರಿಕೆ ಮಾಡಿರುವ ಹಡಗಿನ ಜಪಾನಿ ಮಾಲೀಕರು, ಸೋರಿಕೆಯಿಂದಾಗಿ ಮಲಿನಗೊಂಡಿರುವ ಪ್ರದೇಶವನ್ನು ಸ್ವಚ್ಛಗೊಳಿಸುವುದಕ್ಕಾಗಿ 9.4 ಮಿಲಿಯ ಡಾಲರ್ (ಸುಮಾರು 69 ಕೋಟಿ ರೂಪಾಯಿ) ನೀಡುವ ಭರವಸೆಯನ್ನು ಶುಕ್ರವಾರ ನೀಡಿದ್ದಾರೆ.
ಸಮುದ್ರ ಪರಿಸರವನ್ನು ಮೂಲಸ್ಥಿತಿಗೆ ತರುವ ಪ್ರಯತ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ಸುಮಾರು ನೂರು ಕೋಟಿ ಜಪಾನೀ ಯೆನ್ ನೀಡುವುದಾಗಿ ಮಿಟ್ಸುಯಿ ಒಎಸ್ಕೆ ಲೈನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಂಪೆನಿಯ ಒಡೆತನದ ‘ಎಮ್ವಿ ವಕಶಿಯೊ’ ಹಡಗು ಮಾರಿಶಸ್ ಕರಾವಳಿಯಲ್ಲಿ ಜುಲೈ 25ರಂದು ಹವಳದ ದಿಬ್ಬಕ್ಕೆ ಢಿಕ್ಕಿಯಾಗಿ ನಿಂತಿತ್ತು. ಅದರಲ್ಲಿದ್ದ 4,000 ಟನ್ ಇಂಧನವು ಬಳಿಕ ದ್ವೀಪ ರಾಷ್ಟ್ರದ ಪರಿಶುದ್ಧ ಹವಳ ದಿಬ್ಬದ ನೀರಿಗೆ ಸೋರಿಕೆಯಾಗಿದೆ.
Next Story