ಗುಂಡೀರ್ ಗುಡ್ಡೆಯಲ್ಲಿ ತಡೆಗೋಡೆ ಕುಸಿತ : ಅಪಾಯದಂಚಿನಲ್ಲಿ ಮನೆಗಳು

ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ಗುಂಡೀರ್ ಗುಡ್ಡೆಯಲ್ಲಿ ಮನೆಯೊಂದರ ಆವರಣಗೋಡೆ ಭಾರೀ ಮಳೆಗೆ ಕುಸಿದಿದ್ದು, ಎರಡು ಮನೆಗಳು ಅಪಾಯದಂಚಿನಲ್ಲಿದೆ.
ಮಯ್ಯದ್ದಿ ಅವರ ಜಾಗದ ಆವರಣಗೋಡೆ ಬಿದ್ದಿದ್ದು, ಪಕ್ಕದಲ್ಲಿರುವ ಸಿರಾಜುದ್ದೀನ್ ಎಂಬವರ ಮನೆ ಕೂಡ ಅಪಾಯದ ಅಂಚಿನಲ್ಲಿದೆ. ಮಳೆಯಿಂದ ಕೃಷಿ ಭೂಮಿಗೂ ಹಾನಿಯಾಗಿದೆ.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪೆÇಲೀಸ್ ಉಪನಿರೀಕ್ಷಕ ವಿನಾಯಕ, ಗ್ರಾಮಕರಣಿಕರಾದ ದೀಪಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರ : 11 ಮೂಡ್ ಗುಂಡೀರ್
.jpg)
Next Story





