ಬೆಳ್ತಂಗಡಿ : ಬಾಲಕಿಗೆ ಕಿರುಕುಳ ಆರೋಪ ; ತೋಟದ ಮಾಲಕ, ಸಹಾಯಕ ಸೆರೆ
ಬೆಳ್ತಂಗಡಿ : ತಾಯಿಯೊಂದಿಗೆ ಕೆಲಸಕ್ಕೆಂದು ತೋಟಕ್ಕೆ ಬಂದ ಬಾಲಕಿಯ ಮೇಲೆ ತೋಟದ ಮಾಲಕ ಹಾಗೂ ಆತನ ಸಹಾಯಕ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ತೋಟದ ಮಾಲಕ ಕಳೆಂಜ ಗ್ರಾಮದ ನಿವಾಸಿ ರೆಜಿಮೋನು ಹಾಗೂ ಆತನ ಸಹಾಯಕ ಕೃಷ್ಣ ಎಂದು ಗುರುತಿಸಲಾಗಿದೆ.
ಚಾರ್ಮಾಡಿ ಮೂಲದ ದಲಿತ ಮಹಿಳೆ ತಾಲೂಕಿನ ಕಳಂಜ ಗ್ರಾಮದ ಬಳ್ಕಾಜೆ ರೆಜಿಮೋನು ಎಂಬವರ ತೋಟದ ಕೆಲಸಕ್ಕೆಂದು ಹೋಗುತ್ತಿದ್ದರು. ಕಳೆದ ಮೇ ತಿಂಗಳಿನಲ್ಲಿ ಆಕೆಯೊಂದಿಗೆ ಆಕೆಯ ಅಪ್ರಾಪ್ತ ವಯಸ್ಸಿನ ಮಗಳೂ ಈ ತೋಟಕ್ಕೆ ಹೋಗುತ್ತಿದ್ದು, ಇಲ್ಲಿ ತಾಯಿ ಯೊಂದಿಗೆ ಎರಡು ಮೂರು ದಿನ ತಂಗಿದ್ದು, ಈ ಸಂದರ್ಭ ರೆಜಿಮೋನು ಮತ್ತು ಆತನ ಸ್ನೇಹಿತ ಕೃಷ್ಣನ ಜೊತೆ ಸೇರಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Next Story