ನಾಪತ್ತೆಯಾಗಿದ್ದ ಅರುಣಾಚಲದ ಐವರು ಯುವಕರು ಸೆ.12 ರಂದು ಚೀನಾದಿಂದ ಭಾರತಕ್ಕೆ ಹಸ್ತಾಂತರ:ರಿಜಿಜು

ಗುವಾಹಟಿ,ಸೆ.11: ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್‌ಸಿರಿ ಎಂಬಲ್ಲಿಂದ ಸೆ.1ರಿಂದ ನಾಪತ್ತೆಯಾಗಿದ್ದ ಐವರು ಯುವಕರನ್ನು ಚೀನಾ ಸೆ.12ರಂದು ನಿಯೋಜಿತ ತಾಣವೊಂದರಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ ಎಂದು ಕೇಂದ್ರ ಸಚಿವ ಹಾಗೂ ಅರುಣಾಚಲ ಪ್ರದೇಶದ ಸಂಸದ ಕಿರಣ ರಿಜಿಜು ಅವರು ಶುಕ್ರವಾರ ಟ್ವೀಟಿಸಿದ್ದಾರೆ.
ಚೀನಿ ಸೇನೆಯು ಈ ವಿಷಯವನ್ನು ದೃಢಪಡಿಸಿದೆ. ಹಸ್ತಾಂತರ ಸೆ.12ರಂದು ಯಾವುದೇ ಸಮಯ ನಡೆಯಬಹುದು ಎಂದಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಗಡಿಪಾರು ಒಪ್ಪಂದವಿಲ್ಲ. ಆದರೆ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿರಬಹುದಾದ ಅಥವಾ ಆ ಪ್ರಕ್ರಿಯೆಯಲ್ಲಿರುವ ಸಿಬ್ಬಂದಿಗಳು,ಜಾನುವಾರುಗಳು,ವಾಹನಗಳು ಇತ್ಯಾದಿಗಳನ್ನು ಪತ್ತೆ ಹಚ್ಚಲು ಪರಸ್ಪರರಿಗೆ ಸಾಧ್ಯವಾಗುವಂತೆ ಒಡಂಬಡಿಕೆಯನ್ನು ಹೊಂದಿವೆ.
Next Story





