ಅಮೆರಿಕ: ಭಾರೀ ಕಾಡ್ಗಿಚ್ಚು; 15 ಸಾವು ; ಲಕ್ಷಾಂತರ ಮಂದಿ ಪಲಾಯನ

ವಾಶಿಂಗ್ಟನ್, ಸೆ. 11: ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಹಬ್ಬುತ್ತಿರುವ ಬೃಹತ್ ಕಾಡ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಬೃಹತ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾಡ್ಗಿಚ್ಚಿನಿಂದಾಗಿ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಕ್ಯಾಲಿಫೋರ್ನಿಯ, ಒರೆಗಾನ್ ಮತ್ತು ವಾಶಿಂಗ್ಟನ್ ರಾಜ್ಯಗಳ ಉದ್ದಗಲಕ್ಕೂ ಬೆಂಕಿ ಹಬ್ಬಿದ್ದು, ಅವುಗಳ ಹೆಚ್ಚಿನ ಭಾಗಗಳು ಬಾಹ್ಯ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಿವೆ.
Next Story





