Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಶರೀರದಲ್ಲಿಯ ಈ ಮೂರು ಸ್ಥಿತಿಗಳು...

ಶರೀರದಲ್ಲಿಯ ಈ ಮೂರು ಸ್ಥಿತಿಗಳು ಹಿಮೊಫಿಲಿಯಾ ಅಥವಾ ಕುಸುಮರೋಗವನ್ನು ಸೂಚಿಸಬಹುದು

ವಾರ್ತಾಭಾರತಿವಾರ್ತಾಭಾರತಿ12 Sept 2020 12:28 AM IST
share
ಶರೀರದಲ್ಲಿಯ ಈ ಮೂರು ಸ್ಥಿತಿಗಳು ಹಿಮೊಫಿಲಿಯಾ ಅಥವಾ ಕುಸುಮರೋಗವನ್ನು ಸೂಚಿಸಬಹುದು

 ಹಿಮೊಫಿಲಿಯಾ ಅಥವಾ ಕುಸುಮರೋಗ ಒಂದು ವಂಶವಾಹಿ ಕಾಯಿಲೆಯಾಗಿದೆ. ಅಪರೂಪದ ಈ ರಕ್ತಸ್ರಾವ ರೋಗವಿರುವವರಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಪ್ರೋಟಿನ್‌ಗಳು ಇರುವುದಿಲ್ಲವಾದ್ದರಿಂದ ರಕ್ತವು ಸಮರ್ಪಕವಾಗಿ ಹೆಪ್ಪುಗಟ್ಟುವುದಿಲ್ಲ. ಪರಿಣಾಮ ಅಂತಹವರಿಗೆ ಸಣ್ಣ ಗಾಯವಾದರೂ ವಿಪರೀತ ರಕ್ತಸ್ರಾವವಾಗುತ್ತದೆ. ಮಹಿಳೆಯರಲ್ಲಿ ರಕ್ತಸ್ರಾವ ಕಾಯಿಲೆಗಳು ವಾನ್ ವಿಲ್ಲೆಬ್ರಾಂಡ್ ಡಿಸೀಸ್ ಮತ್ತು ಕುಸುಮರೋಗವನ್ನು ಒಳಗೊಂಡಿದ್ದು ಇವೆರಡೂ ಆನುವಂಶಿಕವಾಗಿವೆ ಮತ್ತು ಕ್ಲೋಟಿಂಗ್ ಫ್ಯಾಕ್ಟರ್ ಅಥವಾ ರಕ್ತವನ್ನು ಹೆಪ್ಪುಗಟ್ಟಿಸುವ ಪ್ರೋಟಿನ್‌ಗಳ ಕೊರತೆಯಿಂದ ಉಂಟಾಗುತ್ತವೆ. ಮಹಿಳೆಯರು ಕುಸುಮರೋಗದ ವಾಹಕರಾಗಿರುತ್ತಾರೆ. ಪ್ರಮುಖ ಅಂಗಗಳಲ್ಲಿ ರಕ್ತಸ್ರಾವವಾಗುವವರೆಗೆ ಈ ರೋಗವು ಮಾರಣಾಂತಿಕವಲ್ಲ. ಆದರೆ ಇದು ವ್ಯಕ್ತಿಯನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದ್ದು,ಇದನ್ನು ಗುಣಪಡಿಸಲು ಯಾವುದೇ ಚಿಕಿತ್ಸೆಯಿಲ್ಲ.

ಸೂಕ್ತ ರೋಗನಿರ್ಣಯಕ್ಕಾಗಿ ಹಿಮೊಫಿಲಿಯಾದ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಸಣ್ಣಗಾಯವಾದರೂ ವಿಪರೀತ ರಕ್ತಸ್ರಾವ

 ಸಣ್ಣಪುಟ್ಟ ಗಾಯಗಳಾದರೂ ವಿಪರೀತ ರಕ್ತಸ್ರಾವವಾಗುತ್ತಿದ್ದರೆ ಅದಕ್ಕೆ ಹಿಮೊಫಿಲಿಯಾ ಸಂಭಾವ್ಯ ಕಾರಣವಾಗಿರಬಹುದು. ಹೊಸ ಪ್ರಕರಣಗಳ ಪೈಕಿ ಸುಮಾರು ಮೂರನೇ ಒಂದರಷ್ಟು ತಾಯಿ ಅಥವಾ ಮಗುವಿನಲ್ಲಿಯ ಜೀನ್ ಅಥವಾ ವಂಶವಾಹಿಯ ಹೊಸ ರೂಪಾಂತರದಿಂದ ಉಂಟಾಗುತ್ತವೆ. ಇಂತಹ ಪ್ರಕರಣಗಳಲ್ಲಿ ತಾಯಿಯು ವಾಹಕಳಾಗಿದ್ದಾಗ ಮತ್ತು ತಂದೆಗೆ ರೋಗವಿಲ್ಲದಿದ್ದಾಗ ಗಂಡುಮಕ್ಕಳು ಹಿಮೊಫಿಲಿಯಾಕ್ಕೆ ತುತ್ತಾಗುವ ಶೇ.50 ರಷ್ಟು ಅಪಾಯವಿರುತ್ತದೆ ಮತ್ತು ಹೆಣ್ಣುಮಕ್ಕಳು ವಾಹಕರಾಗುವ ಶೇ.50ರಷ್ಟು ಅಪಾಯವನ್ನು ಹೊಂದಿರುತ್ತಾರೆ. ಯಾವುದೇ ವ್ಯಕ್ತಿಗೆ ಆಗಾಗ್ಗೆ ಸಣ್ಣಪುಟ್ಟ ಗಾಯಗಳಿಗೂ ವಿಪರೀತ ರಕ್ತಸ್ರಾವವಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಕೂಡದು ಮತ್ತು ತಕ್ಷಣ ತಜ್ಞವೈದ್ಯರನ್ನು ಭೇಟಿಯಾಗಬೇಕು.

ಸಂದುಗಳಲ್ಲಿ ಬಿಗಿತ ಮತ್ತು ನೋವು:

ವಂಶವಾಹಿ ರೋಗಗಳ ಸಮಸ್ಯೆಯೆಂದರೆ ಹಲವರಲ್ಲಿ ಅದನ್ನು ಪತ್ತೆ ಹಚ್ಚಲು ವರ್ಷಗಳೇ ಬೇಕಾಗಬಹುದು. ಆದ್ದರಿಂದ ಹಿಮೊಫಿಲಿಯಾದಲ್ಲಿ ವ್ಯಕ್ತಿಗೆ ಸಂದುಗಳಲ್ಲಿ ಊತ ಮತ್ತು ನೋವಿನ ಅನುಭವವಾಗಬಹುದು. ಶರೀರದ ಯಾವುದೇ ಭಾಗದ ಕೀಲು ಅಥವಾ ಸಂದುಗಳಲ್ಲಿ ಬಿಗಿತ,ನೋವು,ಪೆಡಸುತನ ಇತ್ಯಾದಿಗಳು ಉಂಟಾಗಬಹುದು. ಆದರೆ ಈ ಸಮಸ್ಯೆಗಳಿಗೆ ಮನೆಮದ್ದುಗಳಿಂದ ಪರಿಹಾರ ಪಡೆಯಬಹುದು. ಆದರೆ ದೀರ್ಘಸಮಯದವರೆಗೆ ಸಮಸ್ಯೆ ಕಾಡುತ್ತಿದ್ದರೆ ಶಸ್ತ್ರಚಿಕಿತ್ಸೆ ಏಕೈಕ ಪರಿಹಾರ ಮಾರ್ಗವಾಗುತ್ತದೆ.

ದಿಢೀರ್ ಮೂಗಿನಿಂದ ರಕ್ತಸೋರಿಕೆ:

ಮೂಗಿನ ಒಳಗಿನ ಪದರದ ಬಳಿಕ ರಕ್ತನಾಳವು ಒಡೆದಾಗ ಮೂಗಿನಿಂದ ರಕ್ತಸ್ರಾವ ಉಂಟಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಎಪಿಸ್ಟಾಕ್ಸಿಸ್’ ಎಂದು ಕರೆಯಲಾಗುತ್ತದೆ. ಮೂಗಿನಿಂದ ರಕ್ತಸ್ರಾವ ಹಿಮೊಫಿಲಿಯಾದ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ಹಿಮೊಫೊಲಿಯಾವಲ್ಲದೆ ಚಳಿಯೂ ಮೂಗಿನ ಭಿತ್ತಿಯನ್ನು ಕೆರಳಿಸುವ ಮೂಲಕ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ.

  ಎರಡು ವಿಧಗಳು: ಕುಸುಮರೋಗವನ್ನು ಹಿಮೊಫಿಲಿಯಾ-1 ಮತ್ತು ಹಿಮೊಫಿಲಿಯಾ-2 ಎಂಬ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದೆ. ಮೊದಲ ವಿಧದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಫ್ಯಾಕ್ಟರ್-8 ಮಟ್ಟ ಅತ್ಯಂತ ಕಡಿಮೆ ಅಥವಾ ಶೂನ್ಯವಾಗಿದ್ದರೆ,ಫ್ಯಾಕ್ಟರ್ 9 ಕಡಿಮೆಯಿದ್ದರೆ ಹಿಮೊಫಿಲಿಯಾ-2 ಉಂಟಾಗುತ್ತದೆ. ಸುಮಾರು ಶೇ.80ರಷ್ಟು ರೋಗಿಗಳು ಹಿಮೊಫಿಲಿಯಾ-1ರಿಂದ ನರಳುತ್ತಾರೆ. ಸಾಮಾನ್ಯ ಹಿಮೊಫಿಲಿಯಾ ಪ್ರಕರಣದಲ್ಲಿ ರೋಗಿಗೆ ಎಲ್ಲಾದರೂ ಒಮ್ಮೊಮ್ಮೆ ರಕ್ತಸ್ರಾವವಾಗುತ್ತಿರುತ್ತದೆ. ಆದರೆ ಸ್ಥಿತಿ ಗಂಭೀರಗೊಂಡಾಗ ದಿಢೀರ್ ಮತ್ತು ನಿರಂತರ ರಕ್ತಸ್ರಾವವಾಗುತ್ತದೆ.

                    

share
ವಾರ್ತಾಭಾರತಿ
ವಾರ್ತಾಭಾರತಿ
Next Story
X