ದಿಲ್ಲಿ: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ

ಹೊಸದಿಲ್ಲ್ಲಿ,ಸೆ.12:ದಿಲ್ಲಿಯ ಇಂದ್ರಲೋಕ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಶಹಝಾದ ಬಾಗ್‌ನಲ್ಲಿನ ಮೂರು ಮಹಡಿಯ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಈ ತನಕ ಯಾವುದೇ ಸಾವು-ನೋವಾಗಿರುವ ಕುರಿತು ವರದಿಯಾಗಿಲ್ಲ.
ಬೆಳಗ್ಗೆ 9:20ರ ಸುಮಾರಿಗೆ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬೆಂಕಿ ಹತ್ತಿಕೊಂಡಿರುವ ಕುರಿತು ನಮಗೆ ಕರೆ ಬಂತು. ಘಟನಾ ಸ್ಥಳಕ್ಕೆ 9 ಅಗ್ನಿಶಾಮಕ ದಳದ ವಾಹನಗಳು ಧಾವಿಸಿವೆ. ಬೆಂಕಿಯನ್ನು ತಹಬಂದಿಗೆ ತರಲಾಗಿದೆ. ಬೆಂಕಿ ಹತ್ತಿಕೊಳ್ಳಲು ಕಾರಣ ಏನೆಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ ಎಂದು ದಿಲ್ಲಿಯ ಅಗ್ನಿಶಾಮಕ ಕಚೇರಿಯ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.
Next Story





