ಗಾಂಜಾ ಮಾರಾಟ ಆರೋಪ: ಓರ್ವನ ಬಂಧನ
![ಗಾಂಜಾ ಮಾರಾಟ ಆರೋಪ: ಓರ್ವನ ಬಂಧನ ಗಾಂಜಾ ಮಾರಾಟ ಆರೋಪ: ಓರ್ವನ ಬಂಧನ](https://www.varthabharati.in/sites/default/files/images/articles/2020/09/12/258842-1599911452.jpg)
ಬೆಂಗಳೂರು, ಸೆ.12: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಕಲಾಸಿಪಾಳ್ಯ ಠಾಣಾ ಪೊಲೀಸರು 750ಗ್ರಾಂ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಿನ್ನೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜಾವೀದ್ ಅಹ್ಮದ್ (43) ಎಂಬಾತನನ್ನು ಬಂಧಿಸಿದ್ದಾರೆ.
ಈತನ ಬಳಿ ಇದ್ದ 30 ಸಾವಿರ ಮೌಲ್ಯದ ಮುಕ್ಕಾಲು ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story