ಉಡುಪಿ: ಮುಂದುವರಿದೆ ಮಳೆ
ಉಡುಪಿ, ಸೆ.12: ಜಿಲ್ಲೆಯಲ್ಲಿ ಇಂದು ಸಹ ಮಳೆ ಮುಂದುವರಿದಿದ್ದು, ದಿನವಿಡಿ ಸಾಧಾರಣ ಮಳೆಯಾಗಿದೆ. ನಿನ್ನೆಯಂತೆ ಇಂದು ಸಹ ಇದರಿಂದ ಜನರಿಗೆ ಯಾವುದೇ ತೊಂದರೆ ಎದುರಾಗಲಿಲ್ಲ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 89ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 81.6ಮಿ.ಮೀ., ಕುಂದಾಪುರದಲ್ಲಿ 107.5ಮಿ.ಮೀ. ಹಾಗೂ ಕಾರ್ಕಳದಲ್ಲಿ 76.5ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಬೈಂದೂರು ತಾಲೂಕಿನ ಮರವಂತೆ ಗ್ರಾಮದ ನಾಗರಾಜ ಖಾರ್ವಿ ಎಂಬವರ ವಾಸ್ತವ್ಯದ ಮನೆಯ ಗೋಡೆ ಭಾಗಶ: ಕುಸಿದು 50,000 ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Next Story





