ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ
ಉಡುಪಿ, ಸೆ.12: ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕ ನೀಡಲಾದ ಫಲಾನುಭವಿಗಳಿಗೆ ಕೋವಿಡ್-19 ಪ್ರಯುಕ್ತ ಉಚಿತವಾಗಿ ಮೂರು ರಿಫಿಲ್ ಸಿಲಿಂಡರ್‌ಗಳನ್ನು ನೀಡಲು ಆದೇಶವಿದ್ದು, ಈಗಾಗಲೇ ಮೊದಲ ರಿಫಿಲ್ ಸಿಲಿಂಡರ್ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.
ಆದರೆ ಕೆಲವು ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳ ಬ್ಯಾಂಕ್ ವಿವರಗಳು ಸರಿಯಿಲ್ಲದಿರುವುದರಿಂದ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿಲ್ಲ. ರಿಫಿಲ್ ಮೊತ್ತವನ್ನು ಪಡೆಯದ ಫಲಾನುಭಗಳು ಸರಿಯಾದ ಬ್ಯಾಂಕ್ ಖಾತೆ ವಿವರವನ್ನು ಗ್ಯಾಸ್ ಏಜೆನ್ಸಿಗಳಿಗೆ ನೀಡಬೇಕು.
ಮೊದಲನೇ ರಿಫಿಲ್ ಸಿಲಿಂಡರ್‌ನ್ನು ಪಡೆದ ಫಲಾನುಭವಿಗಳು ಎರಡನೇ ರಿಫಿಲ್ ಸಿಲಿಂಡರ್‌ಗೆ ಬುಕ್ ಮಾಡುವಂತೆ ಹಾಗೂ ಮೊದಲನೇ ರಿಫಿಲ್ ಮೊತ್ತವನ್ನು ಪಡೆದ ಫಲಾನುಭವಿಗಳು ಅನಿಲ ಸಿಲಿಂಡರ್‌ಗೆ ಗ್ಯಾಸ್ ಏಜೆನ್ಸಿ ಮೂಲಕ ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





