ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 4.49 ಲಕ್ಷಕ್ಕೆ ಏರಿಕೆ: 3.44 ಲಕ್ಷ ಮಂದಿ ಗುಣಮುಖ
24 ಗಂಟೆಗಳಲ್ಲಿ 94 ಮಂದಿ ಸೋಂಕಿಗೆ ಬಲಿ

ಬೆಂಗಳೂರು, ಸೆ.14: ರಾಜ್ಯದಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ ಐದು ಗಂಟೆಯ ತನಕ 9140 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 9557 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಹಾಗೂ 94 ಮಂದಿ ಬಲಿಯಾಗಿದ್ದಾರೆ.
ರಾಜ್ಯಾದ್ಯಂತ ಕೊರೋನ ಸೋಂಕಿತರ ಸಂಖ್ಯೆ 4,49,551 ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3,44,556 ಕ್ಕೆ ಹೆಚ್ಚಳವಾಗಿದೆ ಹಾಗೂ ಒಟ್ಟಾರೆ ಸೋಂಕಿಗೆ ಬಲಿಯಾದವರ ಸಂಖ್ಯೆ 7161 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 795 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
94 ಬಲಿ: ಬಳ್ಳಾರಿ 8, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 21, ಚಾಮರಾಜನಗರ 2, ಚಿಕ್ಕಮಗಳೂರು 1, ಚಿತ್ರದುರ್ಗ 4, ದಕ್ಷಿಣ ಕನ್ನಡ 5, ದಾವಣಗೆರೆ 1, ಧಾರವಾಡ 9, ಗದಗ 1, ಹಾವೇರಿ 1, ಕಲಬುರಗಿ 3, ಕೋಲಾರ 2, ಕೊಪ್ಪಳ 4, ಮೈಸೂರು 14, ರಾಯಚೂರು 2, ಶಿವಮೊಗ್ಗ 5, ತುಮಕೂರು 1, ಉಡುಪಿ 2, ಉತ್ತರ ಕನ್ನಡ 2, ವಿಜಯಪುರ 1 ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸೋಂಕಿತರ ವಿವರ: ಬಾಗಲಕೋಟೆ 175, ಬಳ್ಳಾರಿ 366, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 211, ಬೆಂಗಳೂರು ನಗರ 3552, ಬೀದರ್ 101, ಚಾಮರಾಜನಗರ 60, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 159, ಚಿತ್ರದುರ್ಗ 227, ದಕ್ಷಿಣ ಕನ್ನಡ 401, ದಾವಣಗೆರೆ 267, ಧಾರವಾಡ 239, ಗದಗ 49, ಹಾಸನ 324, ಹಾವೇರಿ 213, ಕಲಬುರಗಿ 222, ಕೊಡಗು 27, ಕೋಲಾರ 53, ಕೊಪ್ಪಳ 183, ಮಂಡ್ಯ 193, ಮೈಸೂರು 637, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ತುಮಕೂರು 304, ಉಡುಪಿ 169, ಉತ್ತರ ಕನ್ನಡ 130, ವಿಜಯಪುರ 58, ಯಾದಗಿರಿ 151 ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ.
ರಾಜ್ಯದ 611 ಜ್ವರ ಚಿಕಿತ್ಸಾಲಯಗಳಲ್ಲಿ ಶನಿವಾರ 9597 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಹಾಗೂ ಈವರೆಗೂ 25,33,158 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಇಂದು 3685 ವ್ಯಕ್ತಿಗಳನ್ನು ಹಾಗೂ 2,15,787 ವ್ಯಕ್ತಿಗಳನ್ನು ಹಾಗೂ ರಾಜ್ಯದ 69 ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 1324 ಸೇರಿದಂತೆ 1,67,378 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.







