ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ‘ಸಪ್ತವರ್ಣ’ ಸಭಾಭವನ ಉದ್ಘಾಟನೆ

ಮಂಗಳೂರು, ಸೆ.12: ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ಕಲಾಕುಂಜ ಸಮೀಪದ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ‘ಉನ್ನತಿ’ ಕಟ್ಟಡದಲ್ಲಿನ ‘ಸಪ್ತವರ್ಣ’ ಸಭಾಭವನವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘಗಳ ನೌಕರರ ಆರ್ಥಿಕ ಶಕ್ತಿಯಾಗಿ ಸಂಸ್ಥೆ ಹುಟ್ಟಿಕೊಂಡಿತು. ಮಂಗಳೂರು ನಗರ ಭಾಗದಲ್ಲಿ ತನ್ನ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಯಿತು ಎಂದರು.
ಇದೀಗ ಈ ಭಾಗದಲ್ಲಿ ಅವಶ್ಯಕತೆ ಇರುವ ಸುಸಜ್ಜಿತ ಸಭಾಭವನವನ್ನು ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಸಹಕಾರ ಸಂಘಗಳ ನೌಕರರು ಎಂದಾಗ ಅವರಲ್ಲಿ ಬದ್ಧತೆ ಇರುತ್ತದೆ. ಇಂತಹ ಬದ್ಧತೆಯ ಪ್ರತೀಕವಾಗಿ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ 89 ವರ್ಷಗಳನ್ನು ಪೂರೈಸಿರುವುದು ಮಹತ್ವದ ಸಾಧನೆ ಎಂದರು.
ದ.ಕ. ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಬಿ. ಹಾಗೂ ನೌಕರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಕರ್ಕೇರ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ. ಸಹಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ಚಂದ್ರ ಅಂಚನ್, ನಿರ್ದೇಶಕರಾದ ಪುಷ್ಪರಾಜ್ ಎಂ.ಎಸ್., ರಾಘವ ಆರ್. ಉಚ್ಚಿಲ್, ಶುಭಲಕ್ಷ್ಮೀ ವಿ. ರೈ, ಜಯಪ್ರಕಾಶ್ ರೈ ಸಿ., ವಿಶ್ವನಾಥ್ ಕೆ.ಟಿ., ಶಿವಾನಂದ ಪಿ., ವಿಶ್ವೇಶ್ವರ ಐತಾಳ್, ಅರುಣ್ ಕುಮಾರ್, ಗಿರಿಧರ್, ವಿಶ್ವನಾಥ್ ಎನ್. ಅಮೀನ್, ಮೋಹನ್ ಎನ್., ಚಂದ್ರಕಲಾ, ಗೀತಾಕ್ಷಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜಗದೀಶ್ಚಂದ್ರ ಅಂಚನ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಪೂಜಾರಿ ವಂದಿಸಿದರು.







