ಇರಾನ್ ನಲ್ಲಿ ಚಾಂಪಿಯನ್ ಕುಸ್ತಿಪಟುವಿಗೆ ಗಲ್ಲು: ಆಘಾತ ವ್ಯಕ್ತಪಡಿಸಿದ ಒಲಿಂಪಿಕ್ ಸಮಿತಿ

ಟೆಹರಾನ್ (ಇರಾನ್), ಸೆ. 12: 2018ರಲ್ಲಿ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳ ವೇಳೆ ಭದ್ರತಾ ಸಿಬ್ಬಂದಿಯೊಬ್ಬರನ್ನು ಇರಿದು ಕೊಂದಿರುವ ಆರೋಪದಲ್ಲಿ ಇರಾನ್‌ನ ಚಾಂಪಿಯನ್ ಕುಸ್ತಿ ಪಟು ನವೀದ್ ಅಫ್ಕಾರನ್ನು ಗಲ್ಲಿಗೇರಿಸಲಾಗಿದೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.
‘‘ದೋಷಿಯ ಹೆತ್ತವರು ಮತ್ತು ಕುಟುಂಬ ಸದಸ್ಯರ ಕೋರಿಕೆಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅಫ್ಕಾರಿಯ ಮರಣದಂಡನೆಯನ್ನು ಇಂದು ಬೆಳಗ್ಗೆ ಜಾರಿಗೊಳಿಸಲಾಯಿತು’’ ಎಂದು ದಕ್ಷಿಣದ ಫಾರ್ಸ್ ರಾಜ್ಯದ ಕಾನೂನು ಇಲಾಖೆಯ ಮುಖ್ಯಸ್ಥರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ಈ ಮರಣ ದಂಡನೆಗೆ ಭಾರೀ ಜಾಗತಿಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಘಾತ ವ್ಯಕ್ತಪಡಿಸಿದೆ. ಸುಳ್ಳು ತಪ್ಪೊಪ್ಪಿಗೆ ನೀಡುವಂತೆ ನನಗೆ ಹಿಂಸೆ ನೀಡಲಾಗಿತ್ತು ಎಂಬುದಾಗಿ ಅಫ್ಕಾರಿ ಹೇಳಿದ್ದರು.
Next Story





