ಚಿನ್ನದ ಗಣಿ ಕುಸಿದು 50 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಕಿನ್ಶಾಸ (ಕಾಂಗೊ), ಸೆ. 12: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಚಿನ್ನದ ಗಣಿಯೊಂದು ಕುಸಿದ ಅಪಘಾತದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸ್ವಯಂಸೇವಕ ಸಂಘಟನೆಯೊಂದು ತಿಳಿಸಿದೆ.
ಕಮಿಟುಗ ಎಂಬ ನಗರದ ಸಮೀಪದಲ್ಲಿರುವ ಗಣಿಯು ಅಪರಾಹ್ನ 3 ಗಂಟೆಯ ಸುಮಾರಿಗೆ ಭಾರೀ ಮಳೆಯಿಂದಾಗಿ ಕುಸಿಯಿತು ಎಂದು ‘ಇನಿಶಿಯೇಟಿವ್ ಆಫ್ ಸಪೋರ್ಟ್ ಆ್ಯಂಡ್ ಸೋಶಿಯಲ್ ಸುಪರ್ವಿಶನ್ ಆಫ್ ವಿಮೆನ್’ನ ಅಧ್ಯಕ್ಷೆ ಎಮಿಲಿಯಾನ್ ಇಟೊಂಗ್ವ ಹೇಳಿರುವುದಾಗಿ ‘ಸ್ಕೈ ನ್ಯೂಸ್’ ವರದಿ ಮಾಡಿದೆ.
ಕಳಪೆ ಸುರಕ್ಷತಾ ಮಾನದಂಡಗಳಿಂದಾಗಿ ದೇಶದಲ್ಲಿ ಗಣಿ ಅಪಘಾತಗಳು ನಡೆಯುವುದು ಸಾಮಾನ್ಯವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
Next Story





