Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬ್ಲಾಕ್‍ ಚೈನ್ ತಂತ್ರಜ್ಞಾನ ಜೋಡಿಸಿದ...

ಬ್ಲಾಕ್‍ ಚೈನ್ ತಂತ್ರಜ್ಞಾನ ಜೋಡಿಸಿದ ಮುಂಚೂಣಿ ರಾಜ್ಯವಾಗಿ ಕರ್ನಾಟಕ

ವಾರ್ತಾಭಾರತಿವಾರ್ತಾಭಾರತಿ12 Sept 2020 10:10 PM IST
share

ಬೆಂಗಳೂರು,  ಸೆ.12: ಬ್ಲಾಕ್‍ಚೈನ್ ತಂತ್ರಜ್ಞಾನವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಪ್ರಥಮವಾಗಿ ಮುಂಚೂಣಿಯಲ್ಲಿದ್ದು, ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಸರಪಳಿಯಂತೆ ಜೋಡಿಸುವ ಮೂಲಕ ಪ್ರಮಾಣ ಪತ್ರ ಸರಪಳಿಯನ್ನು(ಸರ್ಟಿಫಿಕೇಟ್ ಚೈನ್) ರೂಪಿಸಲಾಗಿದೆ.

ಈ ನವೀನ ತಂತ್ರಜ್ಞಾನವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎನ್.ಐ.ಸಿ(ನ್ಯಾಷನಲ್ ಎನ್ ಫಾರ್ ಮೆಟ್ರಿಕ್ಸ್ ಸೆಂಟರ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಮಂಡಳಿಯ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತದೆ.

ಸರ್ಟಿಫಿಕೇಟ್ ಚೈನ್ ತಂತ್ರಾಂಶದಲ್ಲಿ ಪ್ರಮಾಣಪತ್ರಗಳನ್ನು ವಿವಿಧ ಸ್ಥಳಗಳಲ್ಲಿನ ಸರ್ವರ್‍ಗಳ ಪಾಲುದಾರರೊಂದಿಗೆ ದಾಖಲಿಸಲಾಗುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಎದುರಾಗಿರುವ ಒಂದು ಸವಾಲಿನ ಕೆಲಸವೆಂದರೆ ಅಭ್ಯರ್ಥಿಗಳ ಆಯ್ಕೆ ಮತ್ತು ಅಭ್ಯರ್ಥಿಗಳು ನೀಡಿದ ಪ್ರಮಾಣಪತ್ರಗಳ ಪರಿಶೀಲನೆ. ಈ ಪರಿಶೀಲನಾ ಕಾರ್ಯಕ್ಕೆ ಸಂಬಂಧಪಟ್ಟ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳು ಅತಿ ಹೆಚ್ಚು ಸಮಯ ಮತ್ತು ಸಂಸ್ಕರಣೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಸರ್ಟಿಫಿಕೇಟ್ ಚೈನ್ ತಂತ್ರಜ್ಞಾನವನ್ನು ನ್ಯಾಷನಲ್ ಇನ್ಸಾರ್‍ಮೆಟಿಕ್ಸ್ ಸೆಂಟರ್ ನ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಬ್ಲಾಕ್ ಜೈನ್‍ರವರು, ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019-2020 ನೇ ಸಾಲಿನ ಪ್ರಮಾಣಪತ್ರಗಳನ್ನು ಸರ್ಟಿಫಿಕೇಟ್ ಚೈನ್‍ನಲ್ಲಿ ದಾಖಲಿಸಲಾಗುತ್ತಿದೆ ಮತ್ತು ಕ್ರಮೇಣ ಹಿಂದಿನ ವರ್ಷಗಳ ಪ್ರಮಾಣಪತ್ರಗಳ ಮಾಹಿತಿಯನ್ನು ಅಳವಡಿಸಲಾಗುತ್ತದೆ.

ದತ್ತಾಂಶ ಸಂರಕ್ಷಿಸಲು ಸಾಧ್ಯ: ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಅಪ್‍ಡೇಟ್ ಮಾಡುವಾಗ ಹಳೆಯ ಮಾಹಿತಿಯನ್ನು ಅಳಿಸಲಾಗುವುದಿಲ್ಲ. ಹಳೆಯ ಮಾಹಿತಿಯ ಜೊತೆಗೆ ಹೊಸ ಮಾಹಿತಿಯು ಡೇಟಾ ಬ್ಲಾಕ್‍ಗಳ ಮೂಲಕ ಹಳೆಯ ಮಾಹಿತಿಯೊಡನೆ ಶೇಖರಣೆಯಾಗುತ್ತದೆ. ಹೊಸ ಮಾಹಿತಿಯನ್ನು ಅಳವಡಿಸುವ ಹಾಗೂ ದತ್ತಾಂಶವನ್ನು ಮಾರ್ಪಡಿಸುವಾಗ ದತ್ತಾಂಶದ ಅಧಿಕೃತ ಅಧಿಕಾರಿಯ ಡಿಜಿಟಲ್ ಸಹಿ ನೀಡಿ ಅಪ್‍ಡೇಟ್ ಮಾಡಬೇಕಾಗುತ್ತದೆ. ಈ ವಿಧಾನದಿಂದ ದತ್ತಾಂಶವನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದಾಗಿರುತ್ತದೆ.

ಪ್ರಯೋಜನಗಳೇನು: ಸರ್ಟಿಫಿಕೇಟ್ ಚೈನ್‍ನನ್ನು ವಿವಿಧ ಶಿಕ್ಷಣ ಸಂಸ್ಥೆಗಳು ಉನ್ನತ ವ್ಯಾಸಂಗ ಪ್ರವೇಶಕ್ಕಾಗಿ ಹಾಗೂ ವಿವಿಧ ಕಂಪನಿಗಳು ಉದ್ಯೋಗ ನೀಡುವ ಸಂದರ್ಭದಲ್ಲಿ ಉದ್ಯೋಗಿಗಳ ಅಂಕಪಟ್ಟಿಗಳನ್ನು ನೇರವಾಗಿ ಪರಿಶೀಲಿಸಲು ಬಳಸಬಹುದು. ದತ್ತಾಂಶಗಳನ್ನು ಬದಲಿಸಲಾಗದ ತಂತ್ರಜ್ಞಾನ, ಸಂಪೂರ್ಣ ಸ್ವಯಂಚಾಲಿತ-ಮಾನವ ಹಸ್ತಕ್ಷೇಪ ರಹಿತ, ದತ್ತಾಂಶದ ಸಂಪೂರ್ಣ ಮಾಹಿತಿ ಮತ್ತು ಪ್ರಮಾಣಪತ್ರ ಕಾಗದರಹಿತ ಬಳಕೆಗೆ ಕಾರಣವಾಗುತ್ತದೆ.

ಪ್ರಮಾಣ ಪತ್ರಗಳ ಪರಿಶೀಲನೆಗೆ ಮೂರನೇ ವ್ಯಕ್ತಿಯ ಅವಲಂಬನೆಯನ್ನು ನಿವಾರಿಸುತ್ತದೆ ಹಾಗೂ ಪರಿಶೀಲನಾ ಕಾರ್ಯದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಕಾಗದರಹಿತ ಆಡಳಿತವನ್ನು ಉತ್ತೇಜಿಸುತ್ತದೆ. ಮಂಡಳಿಯು ಉಚಿತವಾಗಿ ಡಿಜಿಲಾಕರ್ ಮೂಲಕ ನೀಡುತ್ತಿರುವ ಸೇವೆಯು ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಎನ್.ಐ.ಸಿ ಸರ್ವರ್ ಶೇಖರಿಸಲಾದ ದತ್ತಾಂಶಗಳನ್ನು ಬಳಸುವುದರಿಂದ ಉನ್ನತ ಮಟ್ಟದ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಈ ತಂತ್ರಾಂಶದ ಹೆಗ್ಗಳಿಕೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X