ಐಪಿಎಲ್‌ನಲ್ಲಿ ಆಡಲಿರುವ ಅಮೆರಿಕದ ಮೊದಲ ಆಟಗಾರ ಅಲಿ ಖಾನ್

ಅಬುಧಾಬಿ, ಸೆ.12: ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ಗೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡ ವೇಗದ ಬೌಲರ್ ಅಲಿ ಖಾನ್‌ರನ್ನು ಕಣಕ್ಕಿಳಿಸಲು ನಿರ್ಧರಿಸುವುದರೊಂದಿಗೆ ಇದೇ ಮೊದಲ ಬಾರಿ ಅಮೆರಿಕದ ಆಟಗಾರನೊಬ್ಬ ವಿಶ್ವದ ಶ್ರೀಮಂತ ಟ್ವೆಂಟಿ-20 ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಇಂಗ್ಲೆಂಡ್‌ನ ವೇಗದ ಬೌಲರ್ ಹ್ಯಾರಿ ಗುರ್ನೆ ಬದಲಿಗೆ 29ರ ಹರೆಯದ ವೇಗದ ಬೌಲರ್ ಅಲಿ ಖಾನ್‌ರನ್ನು ಆಯ್ಕೆ ಮಾಡಿದೆ. ಐಪಿಎಲ್‌ನ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋ ಡಾಟ್‌ಕಾಮ್ ವರದಿ ಮಾಡಿದೆ.
ಭುಜನೋವಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಗುರ್ನೆ ಐಪಿಎಲ್ ಹಾಗೂ ಇಂಗ್ಲೆಂಡ್‌ನ ವಿಟಾಲಿಟಿ ಬ್ಲಾಸ್ಟ್ ಟೂರ್ನಿಯಿಂದ ಹೊರಗುಳಿದಿದ್ದರು.
ಖಾನ್ ಗುರುವಾರ ಅಜೇಯ ಗೆಲುವಿನ ದಾಖಲೆಯೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ನಲ್ಲಿ ಪ್ರಶಸ್ತಿ ಜಯಿಸಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಸದಸ್ಯರಾಗಿದ್ದರು. ಸಿಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7.43ರ ಇಕಾನಮಿ ರೇಟ್‌ನಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದ್ದರು. ಖಾನ್ ಕಳೆದ ವರ್ಷವೂ ಕೆಕೆಆರ್ ಕಣ್ಣಿಗೆ ಬಿದ್ದಿದ್ದರೂ ತಂಡವನ್ನು ಸೇರಿಕೊಂಡಿರಲಿಲ್ಲ.
2018ರ ಗ್ಲೋಬಲ್ ಟಿ-20 ಕೆನಡಾ ಟೂರ್ನಿಯಲ್ಲಿ ಖಾನ್ ಎಲ್ಲರ ಗಮನ ಸೆಳೆದಿದ್ದರು. ವೆಸ್ ್ಟಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಡ್ವೇಯ್ನಾ ಬ್ರಾವೊ ಮೂಲಕ ಸಿಪಿಎಲ್‌ಗೆ ಪ್ರವೇಶಿಸಿದ್ದ ಖಾನ್ 2018ರಲ್ಲಿ ಗಯಾನ ಅಮಝಾನ್ ವಾರಿಯರ್ಸ್ ಪರ 12 ಪಂದ್ಯಗಳಲ್ಲಿ 16 ವಿಕೆಟ್‌ಗಳ ಗೊಂಚಲು ಪಡೆದಿದ್ದರು.







