ಬದ್ರಿಯಾನಗರ ಮಸ್ಜಿದ್: ಸನ್ಮಾನ ಕಾರ್ಯಕ್ರಮ

ಮಂಗಳೂರು: ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಬದ್ರಿಯಾನಗರ ಮಲ್ಲೂರು ಇದರ ವತಿಯಿಂದ ಮಂಗಳೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲೂರು ದೆಮ್ಮಲೆ ಖತೀಬರಾದ ಸಲೀಂ ಅರ್ಶದಿ ಕಜೆಮಾರ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬದ್ರಿಯಾನಗರ ಖತೀಬರಾದ ಕೆ ಎಸ್ ಅಹ್ಮದ್ ದಾರಿಮಿ ಇವರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಬದ್ರಿಯಾ ನಗರ ಮಸ್ಜಿದ್ ನಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ದಬೆಟ್ಟು ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಬದ್ರಿಯಾನಗರ ಮಸ್ಜಿದ್ ಅಧ್ಯಕ್ಷರಾದ ಅಸ್ರಾರುದ್ದೀನ್ ವಹಿಸಿದ್ದರು.
ಈ ಸಂದರ್ಭ ಮಂಗಳೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸಲೀಂ ಅರ್ಶದಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ ಎಸ್ ಅಹ್ಮದ್ ದಾರಿಮಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಎಂ ಕೆ ಯೂಸುಫ್ ಬದ್ರಿಯಾನಗರ, ಸರ್ಜ್ ಟ್ರೇಡರ್ಸ್ ಮಂಗಳೂರು ಮಾಲಕರಾದ ಹೈದರಾಲಿ ಮಂಗಳೂರು, ಉದ್ದಬೆಟ್ಟು ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಎಂ ಇ ಮುಹಮ್ಮದ್, ಮಲ್ಲೂರು ದೆಮ್ಮಲೆ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್, ಮಲ್ನಾಡ್ ಟೀ ಟ್ರೇಡರ್ಸ್ ಮಂಗಳೂರು ಮಾಲಕರಾದ ನಿಜಾಮುದ್ದೀನ್ ಚಿಕ್ಕಮಗಳೂರು, ಎ.ಕೆ.ಉಸ್ಮಾನ್ ಬದ್ರಿಯಾ ನಗರ ಉದ್ಯಮಿ, ಸಿರಾಜುಲ್ ಹುದಾ ದಫ್ ಕಮಿಟಿ ಬದ್ರಿಯಾ ನಗರ ಅಧ್ಯಕ್ಷರಾದ ಎ.ಕೆ.ಶಾಲಿ ಮೊದಲಾದವರು ಉಪಸ್ಥಿತರಿದ್ದರು.
ನೂರುಲ್ ಹುದಾ ಮದರಸ ಬದ್ರಿಯಾನಗರ ಅಧ್ಯಾಪಕರಾದ ಯು.ಕೆ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ ಕೆ ಲತೀಫ್ ಬದ್ರಿಯಾನಗರ ಧನ್ಯವಾದ ಗೈದರು. ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.











