ಪತಿ ಸರಕಾರದ ಸೊತ್ತುಗಳನ್ನು ಮಾರಾಟ ಮಾಡಿದ್ದಾರೆ: ಪತ್ನಿಯಿಂದ ದೂರು
ಮಂಗಳೂರು: ಸರ್ಕಾರಿ ನೌಕರನೊಬ್ಬನ ಕೌಟುಂಬಿಕ ಕಲಹದ ವಿಚಾರವಾಗಿ ಪೋಲಿಸ್ ಠಾಣೆಗೇರಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮುಲ್ಕಿ ಹಾಸ್ಟೆಲ್ನಲ್ಲಿ ಅಡುಗೆ ಕೆಲಸದಲ್ಲಿದ್ದ ವ್ಯಕ್ತಿ ಸರ್ಕಾರಿ ಸೊತ್ತುಗಳನ್ನು ಹೊತ್ತೊಯ್ದು ಮಾರಾಟಕ್ಕೆ ಯತ್ನಿಸಿರುವ ಪ್ರಕರಣ ಬಯಲಾಗಿದೆ.
ಪಡು ಪಣಂಬೂರು ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡ ಕೊರಗಪ್ಪ ಪೂಜಾರಿ ವಿರುದ್ಧ ಕಿರುಕುಳ, ಜೀವ ಬೆದರಿಕೆ ಹಾಗೂ ಅಕ್ರಮ ಸಂಬಂಧದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಂಡ ಇನ್ನೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕೆಲಸ ಮಾಡುವ ಹಾಸ್ಟೆಲ್‌ಗೆ ಆ ಮಹಿಳೆ ತಹಶೀಲ್ದಾರ್ ಸೋಗಿನಲ್ಲಿ ತೆರಳಿ, ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಗಂಡ ಕದ್ದೊಯ್ದು ಆ ಮಹಿಳೆಗೆ ನೀಡಿದ್ದಾನೆ. ಕೆಲವನ್ನು ಮಾರಾಟ ಮಾಡಿದ್ದು, ಮನೆಗೂ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಹಾಸ್ಟೆಲ್ಗೆ ತರುವ ಅಡುಗೆ ಸಾಮಗ್ರಿಗಳನ್ನೂ ಕೂಡ ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮುಲ್ಕಿ ಪೋಲಿಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಅನೈತಿಕ ಸಂಬಂಧ, ಸರ್ಕಾರಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.







