ಬೈಕ್ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಉಡುಪಿ, ಸೆ.14: ಬುಲೆಟ್ ಬೈಕೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಪುತ್ತೂರು ಜಂಕ್ಷನ್ ಬಳಿ ಮಹಾಲಿಂಗೇಶ್ವರ ಸಿಮೆಂಟ್ ಡಿಸೈನ್ ವರ್ಕ್ಸ್ ಅಂಗಡಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.12ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ಪ್ರತಾಪ್ ಎಂದು ಗುರುತಿಸಲಾಗಿದೆ. ಬುಲೆಟ್ ಸವಾರ ಸವಿ ರಾಜ್ ಎಂಬವರು ಗಾಯಗೊಂಡಿದ್ದಾರೆ. ಅಂಬಾಗಿಲಿನಿಂದ ಕರಾವಳಿ ಕಡೆಗೆ ಹೋಗುತ್ತಿದ್ದ ಸೈಕಲ್‌ಗೆ ಹಿಂದಿನಿಂದ ಬಂದ ಬುಲೆಟ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸೈಕಲ್ ಸವಾರ ಪ್ರತಾಪ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





