ಉಡುಪಿ: ಮುಂದುವರೆದ ಗಾಂಜಾ ವಿರುದ್ಧ ಕಾರ್ಯಾಚರಣೆ; 13 ಮಂದಿ ವಶಕ್ಕೆ
ಮಣಿಪಾಲ, ಸೆ.13: ಗಾಂಜಾ ಸೇವನೆ ಹಾಗೂ ಮಾರಾಟದ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಹಲವು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆ.12ರಂದು ಮಣಿಪಾಲ ವಿದ್ಯಾರತ್ನ ನಗರ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಿದ್ದಾರ್ಥ ಮಿದಾ(24) ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿ, 356 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ ಸೆ.5ರಂದು ಮೂಡಬಿದ್ರೆ ಅಲಂಗಾರ್ ನಿವಾಸಿ ಮಾರೂಕ್ ಅಬ್ಬಾಸ್(28), ಸೆ.4ರಂದು ಕಾರ್ಕಳ ಜರಿಗುಡ್ಡೆಯ ಶಿವಪ್ರಸಾದ್ ಕೇಶವ್(29), ಸೆ.3ರಂದು ಉದ್ಯಾವರ ಗುಡ್ಡೆಯಂಗಡಿಯ ಅಕ್ಷಯ್ ಭಟ್(24), ಸೆ.27ರಂದು ಪೆರಂಪಳ್ಳಿ ಶಿಂಬ್ರಾ ಬಳಿ ಕುಕ್ಕುಂದೂರಿನ ರಸೆಲ್ ವಿಯನ್ ಡಿಸೋಜ(25) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ಗೇಟ್ ಬಳಿ ಸೆ.11ರಂದು ಗಾಂಜಾ ಸೇವಿಸಿ ಕಾರಿನಲ್ಲಿ ಹೋಗುತ್ತಿದ್ದ ಮಂಗಳೂರು ಮುನ್ನೂರು ನಿವಾಸಿ ಅಕ್ಷಿತ್ ಕುಮಾರ್(23), ಮಂಜೇಶ್ವರ ಮಂಗಲ್ಪಾಡಿಯ ಪವನ್ ಕುಮಾರ್(21), ಬಂಟ್ವಾಳ ಬಾಳೆಪುಣಿಯ ಯಜ್ಞೇಶ್ ವಿ.(22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಸೆ.9ರಂದು ಹೆಮ್ಮಾಡಿ ಗ್ರಾಮದ ಸಂತೋಷ ನಗರ ಎಂಬಲ್ಲಿ ಸ್ಥಳೀಯ ನಿವಾಸಿ ಅಭಿಷೇಕ್(24), ಸೆ.11ರಂದು ಹೆಮ್ಮಾಡಿ ಜಂಕ್ಷನ್ ಎಂಬಲ್ಲಿ ಕಟ್‌ಬೆಲ್ತೂರಿನ ಸುನೀಲ್(23) ಮತ್ತು ಮೂಡುಗೋಪಾಡಿ ಎಂಬಲ್ಲಿ ಸ್ಥಳೀಯ ಮಹಮ್ಮದ್ ಮುಝಾಮಿಲ್(26) ಎಂಬವರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಸೆ.12ರಂದು ಹೇರೂರು ಗ್ರಾಮದ ಕೊಳಂಬೆ ಬಳಿ ಸನತ್(18) ಹಾಗೂ ಹೇರೂರು ಗ್ರಾಮದ ಕೆಇಬಿ ಬಳಿ ರೋಬನ್ ಡಿಅಲ್ಮೇಡಾ(18) ಎಂಬವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.







