ಕಾರು ಢಿಕ್ಕಿ: ವೃದ್ಧ ಮೃತ್ಯು
ಉಡುಪಿ, ಸೆ.13: ಅಂಬಲಪಾಡಿ ಜಂಕ್ಷನ್ ಬಳಿ ರಾ.ಹೆ.66ರಲ್ಲಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸೀತಾರಾಮ್ ರಾವ್(71) ಎಂದು ಗುರುತಿಸಲಾಗಿದೆ. ಸೆ.11 ರಂದು ಬೆಳಗ್ಗೆ ಇವರು ತನ್ನ ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದಿದ್ದು, ರಸ್ತೆ ದಾಟಲು ನಿಂತಿದ್ದ ಇವರಿಗೆ ಅಂಬಲಪಾಡಿ ಕಡೆಯಿಂದ ಕರಾವಳಿ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಾಯಗೊಂಡಿದ್ದ ಸೀತಾ ರಾಮ್ ರಾವ್, ಸೆ.13ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





