ಕುಂದಾಪುರ: ಜುಗಾರಿ ಆಡುತ್ತಿದ್ದ 11 ಮಂದಿಯ ಬಂಧನ
ಕುಂದಾಪುರ, ಸೆ.14: ಕೋಣಿ ಗ್ರಾಮದ ಕಟ್ಕೇರಿ ಹೇರಿಗುಡ್ಡಿಯ ಹಾಡಿಯಲ್ಲಿ ಸೆ.13ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಗೊಲ್ಲ(26), ವಿಜಯ ಶೆಟ್ಟಿ(31), ವಿಜೇಂದ್ರ ಶೆಟ್ಟಿ(29), ರಂಜಿತ್ ಪೂಜಾರಿ(20), ಶಂಕರ, ವಿನಯ, ಕಿರಣ್, ರಂಜಿತ್, ವಿಶ್ವನಾಥ, ಪ್ರಶಾಂತ, ಸತೀಶ ಬಂಧಿತ ಆರೋಪಿಗಳು. ಇವರಿಂದ 3360 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





