ಕುಟುಂಬ ಪಿಂಚಣಿಗೆ ಹೆಸರು ನೊಂದಾಯಿಸಲು ಸೂಚನೆ
ಉಡುಪಿ, ಸೆ.14: ಕೇಂದ್ರ ಸರಕಾರದ ಕುಟುಂಬ ಪಿಂಚಣಿಗೆ ಸಂಬಂಧಿಸಿದಂತೆ ಮಾಜಿ ಸೈನಿಕರು ಜೀವಂತವಿರುವಾಗಲೇ ಪತ್ನಿ ಹಾಗೂ ದಿವ್ಯಾಂಗ ಮಕ್ಕಳ ಹೆಸರನ್ನು ಮಿಲಿಟರಿ ದಾಖಲಾತಿಗಳಲ್ಲಿ ನೊಂದಾಯಿಸದೇ ಇರುವುದು ಕಂಡು ಬಂದಿದ್ದು, ಈ ರೀತಿ ನೊಂದಾಯಿಸದಿದ್ದಲ್ಲಿ ಕುಟುಂಬ ಪಿಂಚಣಿ ಪಾವತಿ ಆದೇಶಗಳಲ್ಲಿ ಅವರ ಹೆಸರುಗಳು ನಾಮನಿರ್ದೇಶನ ಮಾಡಿಲ್ಲದಿರುವುದರಿಂದ ಪಿಂಚಣಿ ಪಾವತಿ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು ಮಾಜಿ ಸೈನಿಕರು ಪೂರ್ತಿಗೊಳಿಸಿದ್ದಲ್ಲಿ ಅವರ ಕುಟುಂಬದವರು ಯಾವುದೇ ಅಡಚಣೆ ಇಲ್ಲದೇ ಕುಟುಂಬ ಪಿಂಚಣಿ ಪಡೆಯಬಹುದಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





