ಉಡುಪಿ: ಶ್ರೇಷ್ಠ ಪುಸ್ತಕ ಪ್ರಶಸ್ತಿ ವಿತರಣೆ
ಉಡುಪಿ, ಸೆ.14: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿಯನ್ನು ಆಹ್ವಾನಿಸಿದ್ದು, ಅಕಾಡೆಮಿಗೆ ಸಲ್ಲಿಕೆಯಾದ ಪುಸ್ತಕಗಳನ್ನು ವೌಲ್ಯಮಾಪನ ಮಾಡಿಸಿ, 2018-19ನೇ ಸಾಲಿನ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ವಿಜೇತ ಲೇಖಕರ ವಿವರ: ವಿಜ್ಞಾನ ಕ್ಷೇತ್ರದಲ್ಲಿ ಡಾ. ಟಿ.ಎಸ್. ಚನ್ನೇಶ್ (ಅನುರಣನ- ವಿಜ್ಞಾನ ಪ್ರಬಂಧಗಳು), ತಂತ್ರಜ್ಞಾನ ಕ್ಷೇತ್ರದಲ್ಲಿ ಡಾ. ಉದಯ ಶಂಕರ ಪುರಾಣಿಕ (ಆರ್ಟಿಫಿಸಿಯಲ್ ಇಂಟೆಲಿಜೆನ್ಸ್- ಹೊಸ ತಂತ್ರಜ್ಞಾನ ಹೊಸ ಅವಕಾಶಗಳು) ಮತ್ತು ಪ್ರೊ.ಮಹದೇವಯ್ಯ (ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ), ಕೃಷಿ ಕ್ಷೇತ್ರದಲ್ಲಿ ತ್ರಿವೇಣಿ ಸಿ. (ಮಣ್ಣು-ಉಸಿರಾಡುವ ಜೀವವಸ್ತು), ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಣಜಿತ ಬೀರಣ್ಣ ನಾಯಕ (ವೈದ್ಯ-ವಿಜ್ಞಾನ) ಮತ್ತು ಡಾ. ಮುರಲೀಮೋಹನ್ ಚೂಂತಾರು (ಸಂಜೀವಿನಿ ಭಾಗ 2- ಆರೋಗ್ಯ ಮಾರ್ಗರ್ಶಿ) ಇವರಿಗೆ ಪ್ರಶಸ್ತಿ ನೀಡಲಾಗಿದೆ.





