Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚಿತ್ರೋದ್ಯಮದ ಅಪಹಾಸ್ಯ ಸಹಿಸಲು...

ಚಿತ್ರೋದ್ಯಮದ ಅಪಹಾಸ್ಯ ಸಹಿಸಲು ಸಾಧ್ಯವಿಲ್ಲ: ಹೇಮಾಮಾಲಿನಿ

ಜಯಾ ಬಚ್ಚನ್ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ಸಂಸದೆ

ವಾರ್ತಾಭಾರತಿವಾರ್ತಾಭಾರತಿ16 Sept 2020 10:41 AM IST
share
ಚಿತ್ರೋದ್ಯಮದ ಅಪಹಾಸ್ಯ ಸಹಿಸಲು ಸಾಧ್ಯವಿಲ್ಲ: ಹೇಮಾಮಾಲಿನಿ

 ಹೊಸದಿಲ್ಲಿ, ಸೆ.16: "ಬಾಲಿವುಡ್ ಯಾವಾಗಲೂ ಉನ್ನತ ಗೌರವದಲ್ಲಿ ಉಳಿಯುತ್ತದೆ ಹಾಗೂ ಡ್ರಗ್ಸ್ ಹಾಗೂ ಸ್ವಜನ ಪಕ್ಷಪಾತದಂತಹ ಆರೋಪಗಳ ಬಗ್ಗೆ ಯಾರೂ ಅದರ ಗೌರವ ಕಡಿಮೆ ಮಾಡಲು ಸಾಧ್ಯವಿಲ್ಲ. ಚಿತ್ರೋದ್ಯಮದ ಅಪಹಾಸ್ಯವನ್ನು ಸಹಿಸಲು ಸಾಧ್ಯವಿಲ್ಲ'' ಎಂದು ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ. ಈ ಮೂಲಕ ಹಿರಿಯ ನಟಿ ಜಯಾ ಬಚ್ಚನ್‌ರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

 ‘‘ನನಗೆ ಈ ಉದ್ಯಮದಿಂದ ಹೆಸರು, ಖ್ಯಾತಿ, ಗೌರವ ಎಲ್ಲವೂ ಸಿಕ್ಕಿದೆ... ಇಂತಹ ಆರೋಪವು ನನಗೆ ನಿಜವಾಗಿಯೂ ನೋವನ್ನುಂಟು ಮಾಡುತ್ತದೆ’’ ಎಂದು ಹೇಮಾ ಮಾಲಿನಿ ಹೇಳಿದರು.

"ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದ ಮಾದಕ ದ್ರವ್ಯ ಸೇವನೆಯ ಆರೋಪಗಳೊಂದಿಗೆ ಚಿತ್ರೋದ್ಯಮವನ್ನು ಕೆಣಕುವ ಪ್ರಯತ್ನ’’ಎಂದು ಕರೆದ 71ರ ವಯಸ್ಸಿನ ಹೇಮಾ ಮಾಲಿನಿ ಹಿಂದಿ ಚಲನ ಚಿತ್ರಗಳಲ್ಲಿ ತಮ್ಮ ಸಮಕಾಲೀನರಾದ ಮತ್ತೊಬ್ಬ ಹಿರಿಯ ನಟಿ ಜಯಾ ಬಚ್ಚನ್ ಸಂಸತ್ತಿನಲ್ಲಿ ಹೇಳಿರುವ ಹೇಳಿಕೆಗೆ ದನಿಗೂಡಿಸಿದರು.

ಬಾಲಿವುಡ್‌ನಲ್ಲಿ ಡ್ರಗ್ಸ್ ಕುರಿತು ಸಂಸತ್ತಿನಲ್ಲಿ ಮಾತನಾಡಿದ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್, ‘‘ಕೆಲವೇ ಜನರ ಕಾರಣದಿಂದಾಗಿ ನೀವು ಇಡೀ ಉದ್ಯಮವನ್ನು ಕೆಡಿಸಲು ಸಾಧ್ಯವಿಲ್ಲ...ಮನರಂಜನಾ ಕ್ಷೇತ್ರದ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಸಲಾಗುತ್ತಿದೆ. ಈ ಕ್ಷೇತ್ರದಿಂದ ಹೆಸರು ಗಳಿಸಿದವರು ಅದನ್ನು ಗಟಾರ ಎಂದು ಕರೆದಿದ್ದಾರೆ. ಇದನ್ನು ನಾನು ಸ್ವಲ್ಪವೂ ಒಪ್ಪುವುದಿಲ್ಲ. ಇಂತಹ ಭಾಷೆ ಬಳಸದಂತೆ ಸರಕಾರ ಜನರಿಗೆ ಹೇಳಬೇಕು’’ಎಂದು ಪರೋಕ್ಷವಾಗಿ ನಟಿ ಕಂಗನಾ ರಣಾವತ್ ಅವರನ್ನು ಟೀಕಿಸಿದ್ದರು.

ಚಿತ್ರರಂಗವನ್ನು ಗಟಾರ ಎಂದು ಕರೆದಿದ್ದ ಕಂಗನಾ ಅಲ್ಲಿ ಕೆಲಸ ಮಾಡುವ ಶೇ.99ರಷ್ಟು ಮಂದಿ ಡ್ರಗ್ಸ್ ಬಳಸಿದ್ದಾರೆ ಎಂದು ಹೇಳಿದ್ದರು.

ಹೇಮಾಮಾಲಿನಿ -ಜಯಾ ಬಚ್ಚನ್ ರಾಜಕೀಯದಲ್ಲಿ ಪ್ರತಿ ಸ್ಪರ್ಧಿಗಳಾಗಿದ್ದರೂ ಜಯಾ ಅವರ ಭಾವನೆಯನ್ನು ಹೇಮಾಮಾಲಿನಿ ಬೆಂಬಲಿಸಿದ್ದಾರೆ.

‘‘ಜನರಿಗೆ ನಾನು ಹೇಳಬಯಸುತ್ತೇನೆ, ಬಾಲಿವುಡ್ ಸುಂದರವಾದ ಸ್ಥಳ, ಸೃಜನಶೀಲ ಜಗತ್ತು . ಇದು ಕಲೆ ಹಾಗೂ ಸಂಸ್ಕೃತಿಯ ಉದ್ಯಮವಾಗಿದೆ...ಜನರು ಇದರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು, ಡ್ರಗ್ಸ್ ಔಷಧಗಳು ಹಾಗೂ ಅಂತಹ ವಿಷಯಗಳ ಬಗ್ಗೆ ಕೇಳಿದಾಗ ನನಗೆ ತುಂಬಾ ನೋವುಂಟಾಗುತ್ತದೆ. ಕಪ್ಪು ಕಲೆ ಇದ್ದರೆ ಅದನ್ನು ತೊಳೆಯಿರಿ. ಅದು ಹೋಗುತ್ತದೆ. ಬಾಲಿವುಡ್‌ನ ಕಲೆಯೂ ಹೋಗುತ್ತದೆ. ಚಿತ್ರೋದ್ಯಮ ಕಟ್ಟಲು ಅನೇಕ ಕಲಾವಿದರು ತುಂಬಾ ಶ್ರಮಿಸಿದ್ದರು. ಬಾಲಿವುಡ್ ಒಂದು ಭಾರತ. ಕೆಲವರು ನಮ್ಮ ಉದ್ಯಮವನ್ನು ಅಪಹಾಸ್ಯ ಮಾಡುವಾಗ ನಾನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ’’ಎಂದು ಹೇಮಾ ಮಾಲಿನಿ ಹೇಳಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X