Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೆ. 18ರಂದು ಅಳಿಕೆ ಬದ್ರಿಯಾ ಜುಮಾ ಮಸೀದಿ...

ಸೆ. 18ರಂದು ಅಳಿಕೆ ಬದ್ರಿಯಾ ಜುಮಾ ಮಸೀದಿ ಲೋಕಾರ್ಪಣೆ

'ನಾಲೆಟ್ಟ್ ಕಾರಣವನ್ಮಾರ್' ಮುನ್ನಡೆಸಿದ ಶತಮಾನದ ಮಸೀದಿಗೆ ಹೊಸ ಲುಕ್

ರಶೀದ್ ವಿಟ್ಲರಶೀದ್ ವಿಟ್ಲ16 Sept 2020 5:19 PM IST
share
ಸೆ. 18ರಂದು ಅಳಿಕೆ ಬದ್ರಿಯಾ ಜುಮಾ ಮಸೀದಿ ಲೋಕಾರ್ಪಣೆ

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಬದ್ರಿಯಾ ಜುಮಾ ಮಸೀದಿ ಶತಮಾನದ ಇತಿಹಾಸ ಹೊಂದಿರುವ ಪುರಾತನ ಕಾಲದ ಕಥೆ ನೆನಪಿಸುವ ಹಸಿರು ಮಕಮಲ್ಲಿನಿಂದಾವೃತವಾದ ಸುಂದರ ಭವನವಾಗಿ ಕಂಗೊಳಿಸುತ್ತಿದೆ. ಸೆ. 16ರಂದು ಸಾರ್ವಜನಿಕರಿಗೆ ತೆರೆದುಕೊಳ್ಳಲಿರುವ ಮಸೀದಿಯ ನೂತನ ಕಟ್ಟಡವು ಸೆ. 18ರ ಜುಮಾ ನಮಾಝ್ ಗೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಅಳಿಕೆ ಜಮಾಅತ್ ಮಸೀದಿ ಎಂದು ಶತಮಾನದ ಹಿಂದೆ ನಾಲ್ಕು ಕಂಬ ಹಾಕಿ ಮುಳಿಹುಲ್ಲಿನಿಂದ ನಿರ್ಮಾಣವಾದ ಕಟ್ಟಡ ಅಳಿಕೆ ಪ್ರದೇಶದ ಜನರಿಗಲ್ಲದೇ ಬೈರಿಕಟ್ಟೆ, ಕಾನತ್ತಡ್ಕ, ಮೈರ, ದರ್ಬೆ, ಕಲ್ಲಜೇರ ಪರಿಸರದ ಜನತೆಯ ಆರಾಧನಾ ಕೇಂದ್ರವಾಗಿತ್ತು. ಅಳಿಕೆಯ ಮಣ್ಣಾಪು ಎಂಬಲ್ಲಿ ಹಿರಿಯರು ಮಸೀದಿಗೆ ಜಾಗ ಗುರುತಿಸಿದ್ದರೂ ಈಗಿರುವ ಮಸೀದಿ ಬಳಿ ಉತ್ತಮ ವಾತಾವರಣ, ಬೆಳಕು ಕಂಡುಬಂದ ಹಿನ್ನೆಲೆಯಲ್ಲಿ ಅಂದು ಮಸೀದಿ ನಿರ್ಮಿಸಿದ್ದರು. ಮಸೀದಿಗೆ ವರುಷ ನೂರು ಕಳೆದರೂ ಅದೇ ಹಳೆಯ ವೈಭವದಿಂದ ಇತ್ತೀಚಿನ ತನಕ ತಲೆ ಎತ್ತಿ ನಿಂತಿತ್ತು. ಮುಳಿಹುಲ್ಲಿನ ಮಸೀದಿ ಹೋಗಿ ಕಾಲಕ್ರಮೇಣ ಹೆಂಚಿನ ಕಟ್ಟಡವಾಯಿತು. ಇದೀಗ ಆ ಕಟ್ಟಡವನ್ನೆಲ್ಲಾ ಕೆಡವಿ ನವೀಕೃತ ಹೊಸ ಮಸೀದಿಯ ನಿರ್ಮಾಣವಾಗಿದೆ.

ಶತಮಾನದ ಮಸೀದಿಗೆ ಪ್ರಾರಂಭದ ಹಂತದಲ್ಲಿ ಜಾಗ ಕೊಟ್ಟವರು ಕುದಿಕಂಡ ಸೇಕಾಲಿ ಬ್ಯಾರಿ ಹಾಗೂ ಕುದಿಕಂಡ ಮಹಮ್ಮದ್ ಬ್ಯಾರಿ ಸಹೋದರರು. 10 ಜನರೊಳಗೆ ಬೆರಳೆಣಿಕೆಯ ಹಿರಿಯರು ಪ್ರಾರಂಭಿಸಿದ 'ಅಳಿಕೆ ಜಮಾಅತ್ ಮಸೀದಿ' ಎಂಬ ಹೆಸರು 'ಅಳಿಕೆ ಬದ್ರಿಯಾ ಜುಮಾ ಮಸೀದಿ'ಯಾಗಿ ಮಾರ್ಪಾಡಾಯಿತು. ಮಸೀದಿ ಪ್ರಾರಂಭದಲ್ಲಿ ಕಮಿಟಿ ಅನ್ನುವುದು ಇರಲಿಲ್ಲ. ಆವಾಗ 'ನಾಲೆಟ್ಟ್ ಕಾರಣವನ್ಮಾರ್' (ನಾಲ್ಕೆಂಟು ಕಾರಣಕರ್ತರು) ಎಂಬ ಹೆಸರಿತ್ತು.

ಅಳಿಕೆ ಪರಿಸರದ ನಾಲ್ಕು ಹಿರಿ ಮನೆತನ ಇದರ ಉಸ್ತುವಾರಿ ವಹಿಸಿದ್ದರು. ಮೂಲತಃ ಮಂಜೇಶ್ವರದ ನಂತರ ಮೈರದಲ್ಲಿ ನೆಲೆಸಿದ್ದ ಮೈರ ಮೊಮ್ಮದ್ ಬ್ಯಾರಿ ಮಸೀದಿಯ ಮೊದಲ ಮೊಕ್ತೇಸರರಾಗಿದ್ದರು. ನಂತರ ಅಂದುಂಞಿ ಹಾಜಿ ದೇಲಂತಬೆಟ್ಟು ಮೊಕ್ತೇಸರರಾದದ್ದನ್ನು ಈಗಿನ ಹಿರಿಯರು ನೆನಪಿಸುತ್ತಾರೆ. ಕಾನತ್ತಡ್ಕ ಮೊಯ್ದುಕುಟ್ಟಿ ಬ್ಯಾರಿ, ಪುದಿಯಪೊರೆ ಮಮ್ಮದೆ ಬ್ಯಾರಿ, ಕುದಿಕಂಡ ಮಮ್ಮದೆ ಬ್ಯಾರಿ, ಕಾಡುಮನೆ ಅಂದು ಬ್ಯಾರಿ, ಬರೆಂಗೋಡಿ (ಸೇರಾಜೆ) ಮೂಸೆಬ್ಯಾರಿ, ಅಹ್ಮದ್ ಕುಂಞಿ ಸೇರಾಜೆ, ಪುಲಿಂಚಾರು ಸೇಕಾಲಿ ಬ್ಯಾರಿ, ಚೀರೆ (ಶಿರಿಯ) ಅಬ್ಬೊಕ್ಕೊರ್'ಚ್ಚ, ಬೈರಿಕಟ್ಟೆ ಸೂಪಿಚ್ಚ, ಡಿ.ಬಿ.ಬಾಪಕುಂಞಿ ಮೊದಲಾದ ಹಿರಿತಲೆಮಾರಿನವರು ಮಸೀದಿಯ ಮುಂದಾಳತ್ವ ವಹಿಸಿದ್ದರು.

ಆಗಿನ ಕಾಲದಲ್ಲಿ ಮದುವೆ, ಮುಂಜಿ, ಹರಕೆ ಏನೇ ನಡೆಸಬೇಕಾದರೂ ಮಸೀದಿಯ 'ನಾಲೆಟ್ಟ್ ಕಾರಣವನ್ಮಾರ್'ಗೆ ಮುಂಚಿತವಾಗಿ ತಿಳಿಸಬೇಕು. ಮಾಹಿತಿ ನೀಡುವಾಗ ನಾಲ್ಕೆಂಟು ಕಾರಣಕರ್ತರಿಗೆ ಎಲೆಯಡಿಕೆ ನೀಡಿ ಆಹ್ವಾನಿಸುವ ಸಂಪ್ರದಾಯವಿತ್ತು. 1975ರಲ್ಲಿ 'ನಾಲೆಟ್ಟ್ ಕಾರಣವನ್ಮಾರ್' ಹೋಗಿ ಕಮಿಟಿ ರಚನೆಗೊಂಡಿತು. ಪಡೀಲು ಪಕ್ರಬ್ಬ ಮೊದಲ ಅಧ್ಯಕ್ಷರಾದರು. ಕಾಡುಮನೆ ಅಬ್ದುರ್ರಹ್ಮಾನ್ ಉಪಾಧ್ಯಕ್ಷರಾಗಿ, ಕಾನತ್ತಡ್ಕ ಮಹಮ್ಮದ್ ವೈದ್ಯರ್ ಕಾರ್ಯದರ್ಶಿಯಾಗಿ, ಹೊಸಮನೆ ಮಹಮ್ಮದ್ ಕೋಶಾಧಿಕಾರಿಯಾಗಿ, ಡಿ.ಬಿ.ಬಾಪಕುಂಞಿ ಜೊತೆ ಕಾರ್ಯದರ್ಶಿಯಾಗಿ 21 ಸದಸ್ಯರ ಸಮಿತಿ ರಚನೆಗೊಂಡಿತು. 1976ರಲ್ಲಿ ನರ್ಕ್ ಡ್ರಾ ಮೂಲಕ ಡಿ.ಬಿ. ಅಬ್ದುಲ್ಲ ಕುಂಞಿ ಅಧ್ಯಕ್ಷರಾದರು. ಆವಾಗ 17 ಸದಸ್ಯರ ಸಮಿತಿ ಅಸ್ತಿತ್ವಕ್ಕೆ ಬಂತು.

ಸಯ್ಯದ್ ಹಸನ್ ಕೋಯ ತಂಙಳ್ ಮಸೀದಿ ಗೌರವಾಧ್ಯಕ್ಷರಾಗಿದ್ದರು. ಪ್ರಸ್ತುತ ಅವರ ಪುತ್ರ ಸಯ್ಯದ್ ಪೂಕುಂಞಿ ತಂಙಳ್ ಉದ್ಯಾವರ ಅವರು ಕಳೆದ 20 ವರ್ಷಗಳಿಂದ ಗೌರವಾಧ್ಯಕ್ಷರಾಗಿ ಮಸೀದಿ ಆಡಳಿತ ಮಂಡಳಿಯನ್ನು, ಜಮಾಅತನ್ನು ಮುನ್ನಡೆಸುತ್ತಿದ್ದಾರೆ. ಪಡೀಲು ಪಕ್ರಬ್ಬ, ಡಿ.ಬಿ.ಅಬ್ದುಲ್ಲ ಕುಂಞಿ, ಬರೆಂಗೋಡಿ ಮೂಸೆ ಹಾಜಿ, ಮುಳಿಯ ಮಹಮ್ಮದ್ ಬ್ಯಾರಿ, ಚೆಂಡುಕಳ ಇಬ್ರಾಹಿಂ ಹಾಜಿ, ಅಳಿಕೆ ಇಬ್ರಾಹಿಂ ಮುಸ್ಲಿಯಾರ್ ಮಸೀದಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಚೆಂಡುಕಳ ಸೇಕಾಲಿ ಅಧ್ಯಕ್ಷರಾಗಿ, ಎ.ಪಿ. ಇಬ್ರಾಹಿಂ ಪುಳಿಂಚಾರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈಗಿರುವ ಆರ್.ಟಿ.ಸಿ. ಬದಲಿಗೆ ಹಿಂದೆ ಪಟ್ಟೆಚಿಟ್ಟೆ (ಆಕಾರ ಬಂಧು) ಕಂದಾಯ ದಾಖಲೆ ಇತ್ತು. 1923ರಲ್ಲಿ ಅಳಿಕೆ ಜುಮಾ ಮಸೀದಿಯ ಸ್ಥಳವು ಕಂದಾಯ ಇಲಾಖೆಯ ಪಟ್ಟೆಚಿಟ್ಟೆಯಲ್ಲಿ ದಾಖಲಾಗಿದೆ. ಮಸೀದಿಗೆ ಮೊದಲ ಖತೀಬರಾಗಿ ಕನ್ಯಾನ ಮೂಲದ ಮೊಯ್ದುಕುಟ್ಟಿ ಮುಕ್ರಿಕ, ನಂತರ ಕೇರಳ ಮೂಲದ ಬೆಲ್ತೆ ಮುಕ್ರಿಕ ಸೇವೆ ಸಲ್ಲಿಸಿದ್ದರು. ಬಳಿಕ ಇಬ್ರಾಹಿಂ ಮುಕ್ರಿಕ, ಇಸ್ಮಾಯಿಲ್ ಮುಕ್ರಿಕ, ಅವರ ತಂದೆ ಅದ್ರಾಮ ಮುಕ್ರಿಕ, ವಿಟ್ಲ ಮಹಮೂದ್ ಹಾಜಿ ಮರಕ್ಕಿಣಿ, ಪುಣಚ ಇಬ್ರಾಹಿಂ ಮುಸ್ಲಿಯಾರ್, ಸಂಪ್ಯ ಮಹಮೂದ್ ಮುಸ್ಲಿಯಾರ್, ಅಳಕೆಮಜಲು ಇಬ್ರಾಹಿಂ ಮುಸ್ಲಿಯಾರ್, ಕೊಂಡಂಗೇರಿ ಅಬ್ದುಲ್ಲ ಸಖಾಫಿ, ಇರ್ದೆ ಮಹಮ್ಮದ್ ಮದನಿ ಮೊದಲಾದವರು ಖತೀಬರಾಗಿದ್ದರು. ಕಾಲಕ್ರಮೇಣ ಹಲವು ಮಂದಿ ಖತೀಬ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ತುರ್ಕಳಿಕೆ ಅಬ್ದುಲ್ ಖಾದರ್ ಸಖಾಫಿ ಸೇವೆಯಲ್ಲಿದ್ದಾರೆ.

ಪುರಾತನ ಅಳಿಕೆ ಮಸೀದಿಯ ರಾತೀಬು ಹರಕೆಗೆ ಜಾತಿ ಮತ ಬೇಧವಿಲ್ಲದೇ ಎಣ್ಣೆ, ಹಣ ನೀಡುವ ಸಂಪ್ರದಾಯ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಹಿಂದೆ ಪಿಡಿಯರಿ (ಹಿಡಿ ಅಕ್ಕಿ) ಮನೆಮನೆಗೆ ತೆರಳಿ ಮಸೀದಿಗೆ ಸಂಗ್ರಹಿಸುವ ಸಂಪ್ರದಾಯವಿತ್ತು. ಈಗ ಅದರ ಬದಲಿಗೆ ಹಣ ಸಂಗ್ರಹಿಸಲಾಗುತ್ತದೆ. ಅಳಿಕೆ ಮಸೀದಿಯಾದ ಬಳಿಕ ಬೈರಿಕಟ್ಟೆ, ಕಾನತ್ತಡ್ಕದಲ್ಲಿ ಜುಮಾ ಮಸೀದಿಗಳಾಗಿ ಜಮಾಅತ್ ಜನರು ಚದುರಿದರೂ ಮೂಲ ಮಸೀದಿಯ ಸಂಪರ್ಕ ನಿಂತಿಲ್ಲ. ಕಲ್ಲಜೇರ, ಮೈರ ಎಂಬಲ್ಲೂ ಮಸೀದಿ ಮದ್ರಸಗಳಾಗಿವೆ. ಅಳಿಕೆ ಮಸೀದಿಗೆ ಪ್ರಸ್ತುತ 80 ಜಮಾಅತ್ ಮನೆಗಳಿವೆ. 25 ತಾತ್ಕಾಲಿಕ ಮನೆಗಳಿವೆ. ಮಸೀದಿಗೆ 2.76 ಎಕ್ರೆ ಜಾಗವಿದ್ದು, ವಾಣಿಜ್ಯ ಸಂಕೀರ್ಣವನ್ನು ಹೊಂದಿದೆ. ಮದ್ರಸದಲ್ಲಿ 40 ವಿದ್ಯಾರ್ಥಿಗಳಿದ್ದಾರೆ.

ಪ್ರಸ್ತುತ ನೂತನವಾಗಿ ನಿರ್ಮಾಣಗೊಂಡ ಜುಮಾ ಮಸೀದಿಗೆ ಬಹುತೇಕ ಪ್ರಾಯೋಜಕತ್ವವನ್ನು ಶೈಖಾ ಮರಿಯಮ್ ಬಿನ್ತ್ ಜಾಸಿಮ್ ಅಬ್ದುಲ್ ಅಝೀಝ್ ಅಲ್ ತಾನಿ ಕತರ್ ಎಂಬ ಮಹಿಳೆ ಮತ್ತು ಶೈಖಾ ಮರಿಯಮ್ ಬಿನ್ತ್ ಜಾಬಿರ್ ಬಿನ್ ಮುಹಮ್ಮದ್ ಅಲ್ ತಾನಿ ಕತರ್ ಎಂಬವರು ಮಾಡಿದ್ದಾರೆ. ಅಬ್ದುಲ್ ರಝಾಕ್ ಕತರ್ ಹಾಗೂ ಬಿ.ಕೆ. ಅಬೂಬಕರ್ ಹಾಜಿ ಬೈರಿಕಟ್ಟೆ ನೇತೃತ್ವದಲ್ಲಿ ನೂತನ ಕಟ್ಟಡದ ಕೆಲಸ ಕಾರ್ಯ ನಡೆದಿದೆ.

''ಊರ ಜಮಾಅತಿನವರು ಹಾಗೂ ಕೊಡುಗೈ ದಾನಿಗಳೂ ತಮ್ಮ ಉದಾರತೆಯನ್ನು ತೋರಿದ್ದಾರೆ. ಬಿ.ಕೆ. ಅಬೂಬಕರ್ ಹಾಜಿ ನೂತನ ಮಸೀದಿ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಕ್ಷಿಪ್ರಾವಧಿಯಲ್ಲೇ ಸುಂದರ ಮಸೀದಿ ಸಜ್ಜುಗೊಂಡು ಆರಾಧನೆಗೆ ತೆರೆದಿದೆ. ಸೆ. 18ರಂದು ಉದ್ಯಾವರ ಪೂಕುಂಞಿ ತಂಙಳ್ ಉದ್ಘಾಟಿಸುವರು. ಸರಳ ಸಮಾರಂಭದಲ್ಲಿ ಜಮಾಅತಿಗರು, ಹಿತೈಷಿಗಳು ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ''.

-ರಶೀದ್ ವಿಟ್ಲ.

share
ರಶೀದ್ ವಿಟ್ಲ
ರಶೀದ್ ವಿಟ್ಲ
Next Story
X