ಉಡುಪಿ: ಪ್ರಾಕೃತಿಕ ವಿಕೋಪದ 5.76 ಲಕ್ಷ ರೂ. ಪರಿಹಾರ ಧನ ಚೆಕ್ ವಿತರಣೆ

ಉಡುಪಿ, ಸೆ.16: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕು ವ್ಯಾಪ್ತಿಯ 15 ಕುಟುಂಬಗಳಿಗೆ ಒಟ್ಟು 5.76ಲಕ್ಷ ರೂ. ಪರಿಹಾರ ಧನದ ಚೆಕ್‌ನ್ನು ಇಂದು ವಿತರಿಸಲಾಯಿತು.
ಉಡುಪಿಯ ಶಾಸಕರ ಕಚೇರಿಯಲ್ಲಿ ಶಾಸಕ ಕೆ.ರಘುಪತಿ ಭಟ್, ತೆಂಕನಿಡಿಯೂರು ಗ್ರಾಮದ ಸದಾಶಿವ, ಪುತ್ತೂರು ಗ್ರಾಮದ ವಾಲ್ಟರ್ ಡಿಸೋಜ, ಮೂಡನಿಡಂಬೂರು ಗ್ರಾಮದ ಅಮ್ಮು, ಪಡುತೋನ್ಸೆ ಗ್ರಾಮದ ಗುಲಾಬಿ, ಶಶಿಕಲಾ, ಬೇಬಿ, ರಾಶಿ, ಮೂಡುತೋನ್ಸೆ ಗ್ರಾಮದ ಗೋಪಿ ಪೂಜಾರ್ತಿ, ಸುಜಾತಾ, 76 ಬಡಗುಬೆಟ್ಟು ಗ್ರಾಮದಜಲಜ ಆಚಾರ್ತಿ, ಶಾಂತ ನಾಯ್ಕ, ಕೆಳಾರ್ಕಳಬೆಟ್ಟು ಗ್ರಾಮದ ಸೀತಾರಾಮ ಆಚಾರಿ, ರೋಬಿನ್ಸ್ ಸೋನ್ಸ್, ಕಿದಿಯೂರು ಗ್ರಾಮದ ಗಿರಿಜಾ ಆಚಾರ್ತಿ, ಕುತ್ಪಾಡಿ ಗ್ರಾಮದ ಸಂಕಿ ಪೂಜಾರ್ತಿ ಅವರಿಗೆ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಕಂದಾಯ ನಿರೀಕ್ಷಕ ವಿಶ್ವನಾಥ್ ಉಪಸ್ಥಿತರಿದ್ದರು.
Next Story





