ಹೆಲ್ಮೆಟ್ ಒಳಗಡೆ ಬ್ರೌನ್ ಶುಗರ್: ಯುವಕನ ಬಂಧನ
![ಹೆಲ್ಮೆಟ್ ಒಳಗಡೆ ಬ್ರೌನ್ ಶುಗರ್: ಯುವಕನ ಬಂಧನ ಹೆಲ್ಮೆಟ್ ಒಳಗಡೆ ಬ್ರೌನ್ ಶುಗರ್: ಯುವಕನ ಬಂಧನ](https://www.varthabharati.in/sites/default/files/images/articles/2020/09/17/259561-1600356653.jpg)
ಬೆಂಗಳೂರು, ಸೆ.17: ಪೊಲೀಸರ ಕಣ್ತಪ್ಪಿಸಿ ಹೆಲ್ಮೆಟ್ ಒಳಗಡೆ ಬ್ರೌನ್ ಶುಗರ್ ಇಟ್ಟು ಮಾರಾಟಕ್ಕೆ ಮುಂದಾಗಿದ್ದ ಓರ್ವನನ್ನು ಇಲ್ಲಿನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಪಟ್ನೊಲ್ ಪೇಟೆಯ ಮಹಾವೀರ ಹೌಸ್ ಹತ್ತಿರ ಅಪರಿಚಿತ ವ್ಯಕ್ತಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ.
ಸದ್ಯ ಬಂಧಿತ ಆರೋಪಿಯಿಂದ 90ಗ್ರಾಂ ಬ್ರೌನ್ ಶುಗರ್, ನಗದು, 2 ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story