Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: 73 ವರ್ಷ ಹಳೆಯ ಬಹುಮಹಡಿ ಕಟ್ಟಡ...

ಉಡುಪಿ: 73 ವರ್ಷ ಹಳೆಯ ಬಹುಮಹಡಿ ಕಟ್ಟಡ ಭಾಗಶಃ ಕುಸಿತ

ಕಟ್ಟಡದೊಳಗಿದ್ದವರು ಹೊರಗೋಡಿ ಅಪಾಯದಿಂದ ಪಾರು

ವಾರ್ತಾಭಾರತಿವಾರ್ತಾಭಾರತಿ18 Sept 2020 2:12 PM IST
share
ಉಡುಪಿ: 73 ವರ್ಷ ಹಳೆಯ ಬಹುಮಹಡಿ ಕಟ್ಟಡ ಭಾಗಶಃ ಕುಸಿತ

ಉಡುಪಿ, ಸೆ.18: ನಗರದ ಚಿತ್ತರಂಜನ್ ಸರ್ಕಲ್ ಬಳಿ ಇರುವ 73 ವರ್ಷ ಪೂರ್ವದ ಹಳೆಯ ಬಹು ಮಹಡಿ ಕಟ್ಟಡ ‘ರಾಯಲ್ ಮಹಲ್’ನ ಒಂದು ಪಾರ್ಶ್ವ ಇಂದು ಅಪರಾಹ್ನ 1:30ರ ಸುಮಾರಿಗೆ ಭಾಗಶ: ಕುಸಿದು ಬಿದ್ದಿದೆ. ಆದರೆ ಇದರಿಂದ ಯಾವುದೇ ಜೀವಹಾನಿ ಸಂಭವಿಸಲಿಲ್ಲ.
ಎರಡು ಮಹಡಿಗಳ ಈ ಹಳೆ ಕಟ್ಟಡದಲ್ಲಿ ಬೇಕರಿ, ಭಾರತೀಯ ಜನೌಷಧಿ ಕೇಂದ್ರ, ಹೊಟೇಲ್ ಸೇರಿದಂತೆ ಆರು ಅಂಗಡಿಗಳು ವ್ಯವಹಾರ ನಡೆಸುತಿದ್ದವು ಇದೀಗ ಕಟ್ಟಡದ ಉಳಿದ ಭಾಗಗಳೂ ಕುಸಿಯುವ ಹಂತದಲ್ಲಿವೆ. ಕೂಡಲೇ ಕಟ್ಟಡದ ಉಳಿದ ಭಾಗಗಳನ್ನೂ ಸಂಪೂರ್ಣವಾಗಿ ಕೆಡವುವಂತೆ ಕಟ್ಟಡದ ಮಾಲಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆಯಲ್ಲದೇ, ನಗರಸಭೆಯ ವತಿಯಿಂದ ನೋಟೀಸನ್ನು ಸಹ ನೀಡಲಾಗಿದೆ ಎಂದು ನಗರಸಭಾ ಆಯುಕ್ತ ಆನಂದ ಕಲ್ಲೊಳೀಕರ್ ತಿಳಿಸಿದ್ದಾರೆ.

ಅಪರಾಹ್ನದ ವೇಳೆ ಹಠಾತ್ತನೆ ಕಟ್ಟಡದ ಒಂದು ಭಾಗ ಕುಸಿಯಲಾರಂಭಿಸಿ ಮಣ್ಣು ಬೀಳುತಿದ್ದಂತೆ ತಳಮಹಡಿಯಲ್ಲಿದ್ದ ಹೊಟೇಲ್, ಬೇಕರಿ, ಔಷಧ ಅಂಗಡಿಗಳ ಸಿಬ್ಬಂದಿ, ಕೆಲಸಗಾರರು ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ಕ್ಷಣದಲ್ಲಿ ಕಟ್ಟಡದ ಒಂದು ಪಾರ್ಶ್ವ ಕುಸಿದು ಬಿತ್ತು. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.

ಕಟ್ಟಡದಲ್ಲಿದ್ದ ಹೊಟೇಲ್ ನ್ಯೂ ದ್ವಾರಕದ ಮಹಿಳಾ ಸಿಬಂದಿಯೊಬ್ಬರು ಶಬ್ದ ಕೇಳಿ ಹೊರಗೆ ಓಡಿ ಬರುವಾಗ ಕಾಲು ಜಾರಿ ಬಿದ್ದು, ಗಾಯ ಮಾಡಿಕೊಂಡರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದಲ್ಲೇ ಇದ್ದ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. ಇದರಿಂದ ಪರಿಸರದಲ್ಲಿ ಕೆಲ ಹೊತ್ತು ವಿದ್ಯುತ್ ಹಾಗೂ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಕೆಲಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿ ಕೊಂಡರು. ಕಟ್ಟಡ ಸದ್ಯ ಭಾಗಶಃ ಕುಸಿದಿದೆ. ಇದು ಸ್ವಾತಂತ್ರ ಪೂರ್ವ ಕಟ್ಟಡವಾಗಿದ್ದು, ಉಳಿದಿರುವ ಭಾಗವೂ ದುರ್ಬಲಗೊಂಡಿರುವುದರಿಂದ ಕೂಡಲೇ ಸಂಪೂರ್ಣ ತೆರವುಗೊಳಿಸುವಂತೆ ಮಾಲಕರಿಗೆ ಸೂಚಿಸಲಾಗಿದೆ.

ಸ್ವಾತಂತ್ರ ಪೂರ್ವ ಕಟ್ಟಡ

ಉಡುಪಿಯ ಕೇಂದ್ರಸ್ಥಾನದಲ್ಲಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪಕ್ಕದಲ್ಲೇ 1947ರಲ್ಲಿ ನಿರ್ಮಾಣಗೊಂಡ ರಾಯಲ್ ಮಹಲ್ ವಸತಿಗೃಹ ನಗರದ ಅಪರೂಪದ ಬಹುಮಹಡಿ ಕಟ್ಟಡವಾಗಿದೆ. ಇದು ಇಂಗ್ಲಿಷ್ ‘ಯು’ ಆಕಾರದಲ್ಲಿ ಇದೆ. ಸಾಯಿರಾಜ್ ಹೆಗ್ಡೆ ಎಂಬವರು ಈ ಕಟ್ಟಡದ ಮಾಲಕರಾಗಿದ್ದಾರೆ. ಇದೀಗ ನಿರ್ಮಾಣಗೊಂಡು 73 ವರ್ಷ ಪೂರೈಸಿರುವ ಈ ಕಟ್ಟಡದ ಎಲ್ಲಾ ಮಳಿಗೆಗಳಲ್ಲೂ ವ್ಯವಹಾರಗಳು ನಡೆಯುತಿದ್ದವು.

ಉಡುಪಿಯ ಕೇಂದ್ರಸ್ಥಾನದಲ್ಲಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪಕ್ಕದಲ್ಲೇ 1947ರಲ್ಲಿ ನಿರ್ಮಾಣಗೊಂಡ ರಾಯಲ್ ಮಹಲ್ ವಸತಿಗೃಹ ನಗರದ ಅಪರೂಪದ ಬಹುಮಹಡಿ ಕಟ್ಟಡವಾಗಿದೆ. ಇದು ಇಂಗ್ಲಿಷ್ ‘ಯು’ ಆಕಾರದಲ್ಲಿ ಇದೆ. ಸಾಯಿರಾಜ್ ಹೆಗ್ಡೆ ಎಂಬವರು ಈ ಕಟ್ಟಡದ ಮಾಲಕರಾಗಿದ್ದಾರೆ. ಇದೀಗ ನಿರ್ಮಾಣಗೊಂಡು 73 ವರ್ಷ ಪೂರೈಸಿರುವ ಈ ಕಟ್ಟಡದ ಎಲ್ಲಾ ಮಳಿಗೆಗಳಲ್ಲೂ ವ್ಯವಹಾರಗಳು ನಡೆಯುತಿದ್ದವು.

ನಗರಸಭೆಯಿಂದ ಮಾಲಕರಿಗೆ ನೋಟಿಸ್ 

ಇದು ನಗರದ ಹಳೆಯ ಕಟ್ಟಡಗಳಲ್ಲಿ ಒಂದಾಗಿದೆ. ಇದೀಗ ಕಟ್ಟಡದ ಒಂದು ಭಾಗ ಕುಸಿದಿದ್ದು, ಉಳಿದ ಭಾಗವೂ ಕುಸಿಯುವ ಸಂಭವವಿದೆ. ಹೀಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡುವಂತೆ ಕಟ್ಟಡದ ಮಾಲಕರಿಗೆ ಈಗಾಗಲೇ ವೌಖಿಕವಾಗಿ ತಿಳಿಸಿದ್ದು, ನಗರಸಭೆಯಿಂದ ನೋಟಿಸ್ ಸಹ ನೀಡಲಾಗುವುದು. ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸುವ ಹೊಣೆ ಮಾಲಕರದ್ದಾಗಿದೆ.

- ಆನಂದ ಸಿ.ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ ನಗರಸಭೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X