ಮಂಗಳೂರು : 'ನ್ಯೂ ಡ್ಯಾನಿಶ್ ಮಂದಿ ಹೌಸ್’ ಶುಭಾರಂಭ
ಮಂಗಳೂರು, ಸೆ.18: ನಗರದ ಜೆಪ್ಪು ಮಾರ್ನಮಿಕಟ್ಟೆಯ ಎಚ್ ಎಚ್ ಡೈಮಂಡ್ ಸಿಟಿ ಕಟ್ಟಡದಲ್ಲಿ ಅರೇಬಿಯನ್ ರೆಸ್ಟೋರೆಂಟ್ 'ನ್ಯೂ ಡ್ಯಾನಿಶ್ ಮಂದಿ ಹೌಸ್' ಶುಕ್ರವಾರ ಶುಭಾರಂಭಗೊಂಡಿತು.
ರಾಯಲ್ ಟ್ರೀಟ್ ಮಾಲಕ ಬರಕತ್ ಅಹ್ಮದ್ ಉದ್ಘಾಟಿಸಿದರು. ನಗರದ ಕಂಕನಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್ನ ಖತೀಬ್ ಅಬ್ದುರ್ರಹ್ಮಾನ್ ಸಅದಿ ದುಆಗೈದರು.
‘ನ್ಯೂ ಡ್ಯಾನಿಶ್ ಮಂದಿ ಹೌಸ್’ನ ಮಾಲಕ ಯೂಸುಫ್ ಖಲೀಲ್, ಸಹೋದರ ಹನೀಫ್, ಪುತ್ರ ಅಬ್ದುರ್ರಹ್ಮಾನ್ ಕೈಸ್, ಕುಟುಂಬಸ್ಥರಾದ ಸಿದ್ದೀಕ್, ರಶೀದ್, ಸತ್ತಾರ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ನ ಅಬ್ದುಲ್ ಖಾದರ್ ಮುಸ್ಲಿಯಾರ್ ಮತ್ತು ಅಕ್ಬರ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ನ್ಯೂ ಡ್ಯಾನಿಶ್ ಮಂದಿ ಹೌಸ್ನಲ್ಲಿ ಖುಝಿ ಮಂದಿ, ಅಲ್ಫಾಮ್ ಮಂದಿ, ಚಿಕನ್ ಮಂದಿ, ಮಟನ್ ಮಂದಿ, ಪುಟ್ಟು ಬಿರಿಯಾನಿ, ಖಿಝಿ ಬಿರಿಯಾನಿ, ಅರಬಿಕ್ ಮಲ್ಹೂತ್ ಬಿರಿಯಾನಿ, ಚಿಕನ್ ಚೀಸ್ ಜಂಬೊ ಶವರ್ಮ, ಚಿಕನ್ ಖಿಝಿ ಪರೋಟ, ಕೊತ್ತು ಪರೋಟ ಮತ್ತಿತರ ಬಗೆ ಬಗೆಯ ಸ್ವಾದಿಷ್ಟ ಖಾದ್ಯ ಲಭ್ಯವಿದೆ.