Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊರೋನ ಹಾಟ್‌ಸ್ಪಾಟ್‌ಗಳ ಸಿರೊ ಸಮೀಕ್ಷೆ...

ಕೊರೋನ ಹಾಟ್‌ಸ್ಪಾಟ್‌ಗಳ ಸಿರೊ ಸಮೀಕ್ಷೆ ದತ್ತಾಂಶಗಳನ್ನು ಐಸಿಎಂಆರ್ ಬಿಡುಗಡೆಗೊಳಿಸುವುದನ್ನು ತಡೆಯಲಾಗಿತ್ತು

ಸಂಶೋಧಕರ ಆರೋಪ

ವಾರ್ತಾಭಾರತಿವಾರ್ತಾಭಾರತಿ20 Sept 2020 7:22 PM IST
share
ಕೊರೋನ ಹಾಟ್‌ಸ್ಪಾಟ್‌ಗಳ ಸಿರೊ ಸಮೀಕ್ಷೆ ದತ್ತಾಂಶಗಳನ್ನು ಐಸಿಎಂಆರ್ ಬಿಡುಗಡೆಗೊಳಿಸುವುದನ್ನು ತಡೆಯಲಾಗಿತ್ತು

ಹೊಸದಿಲ್ಲಿ, ಸೆ.20: ಜನರಲ್ಲಿ ಕೊರೋನ ವೈರಸ್ ಸೋಂಕನ್ನು ಅಂದಾಜಿಸಲು ಮೇ ತಿಂಗಳಿನಲ್ಲಿ ನಡೆಸಲಾಗಿದ್ದ ರಾಷ್ಟ್ರೀಯ ಮಟ್ಟದ ಮೊದಲ ಸಿರೊಲಾಜಿಕಲ್ ಸಮೀಕ್ಷೆಯ ವರದಿಯಲ್ಲಿ 10 ಹಾಟ್‌ಸ್ಪಾಟ್‌ ಗಳ ದತ್ತಾಂಶಗಳನ್ನು ಸೇರಿಸಲು ತಮಗೆ ಅನುಮತಿ ನಿರಾಕರಿಸಲಾಗಿತ್ತು ಎಂದು ಸಮೀಕ್ಷೆಯನ್ನು ನಡೆಸಿದ್ದ ಮತ್ತು ದತ್ತಾಂಶಗಳನ್ನು ವಿಶ್ಲೇಷಿಸಿದ್ದ ಸಂಶೋಧಕರು ಆರೋಪಿಸಿದ್ದಾರೆ ಎಂದು Thewire.in ವರದಿ ಮಾಡಿದೆ.

ಸಮೀಕ್ಷೆಯ ಸಂದರ್ಭ ಜನರ ರಕ್ತವನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಹಾ ನಿರ್ದೇಶಕ ಬಲರಾಮ ಭಾರ್ಗವ ಅವರು ಮೇ 15ರಿಂದ ಜೂನ್ 4ರ ನಡುವೆ ಸಂಗ್ರಹಿಸಲಾಗಿದ್ದ ದತ್ತಾಂಶಗಳನ್ನು ವರದಿಯಿಂದ ಕೈಬಿಡುವಂತೆ ಸಂಶೋಧಕರಿಗೆ ಸೂಚಿಸಿದ್ದರು, ಏಕೆಂದರೆ ಅದನ್ನು ಪ್ರಕಟಿಸಲು ಐಸಿಎಂಆರ್‌ಗೆ ಅನುಮತಿ ಇರಲಿಲ್ಲ ಎಂದು ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ವರದಿಯು ಈ ತಿಂಗಳು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್‌ನಲ್ಲಿ ಪ್ರಕಟಗೊಂಡಿದೆ.

ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಭಾರ್ಗವ ಈ ದತ್ತಾಂಶಗಳನ್ನು ವರದಿಯಲ್ಲಿ ಸೇರಿಸದಂತೆ ತನಗೆ ಯಾರಿಂದ ಸೂಚನೆ ಲಭಿಸಿತ್ತು ಎನ್ನುವುದನ್ನು ಉಲ್ಲೇಖಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವೈದ್ಯರು ಪಾಲಿಸಬೇಕಾದ ನೀತಿ ಸಂಹಿತೆಗಳನ್ನು ರೂಪಿಸುವ ಐಸಿಎಂಆರ್ ತನ್ನದೇ ವೈದ್ಯಕೀಯ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ವರದಿಯಿಂದ ಈ ದತ್ತಾಂಶಗಳನ್ನು ಕೈಬಿಡುವಂತೆ ತಮಗೆ ಐಸಿಎಂಆರ್ ಸೂಚಿಸಿದ್ದನ್ನು ವರದಿಯ ಮೂವರು ಸಹಲೇಖಕರು ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.

ಸಂಶೋಧನೆಯ ಋಜುತ್ವ ಮತ್ತು ವರದಿ ಪ್ರಕಟಣೆ ಕುರಿತ ಐಸಿಎಂಆರ್‌ನ 2019ರ ನೀತಿಯಲ್ಲಿ ‘ಫಲಿತಾಂಶಗಳು ಏನೇ ಆಗಿರಲಿ,ಸಂಪೂರ್ಣಗೊಂಡ ಸಂಶೋಧನೆಯ ವರದಿಯನ್ನು ಕ್ಲಿನಿಕಲ್ ಟ್ರಯಲ್ಸ್ ರೀಸರ್ಚ್ ಇಂಡಿಯಾ,ಸಾಂಸ್ಥಿಕ ವೆಬ್‌ಸೈಟ್‌ಗಳು ಅಥವಾ ಇತರ ಲಭ್ಯ ಸುಸಂಗತ ವೇದಿಕೆಗಳಂತಹ ಸಾರ್ವಜನಿಕ ಡಾಟಾಬೇಸ್‌ಗಳಲ್ಲಿ ಹಂಚಿಕೊಳ್ಳಬೇಕು ’ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ.

 21 ಜಿಲ್ಲೆಗಳ 71 ಜಿಲ್ಲೆಗಳಲ್ಲಿ, ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಿಂದ ಪ್ರತಿ ಜಿಲ್ಲೆಗೆ 400 ಜನರು ಮತ್ತು ಹಾಟ್‌ಸ್ಪಾಟ್‌ಗಳಿಂದ 500 ಜನರ ಮಿತಿಗೊಳಪಟ್ಟು ಯಾದ್ರಚ್ಛಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಅಹ್ಮದಾಬಾದ್, ಭೋಪಾಲ, ಕೋಲ್ಕತಾ, ದಿಲ್ಲಿ, ಹೈದರಾಬಾದ್, ಇಂದೋರ, ಜೈಪುರ, ಮುಂಬೈ, ಪುಣೆ ಮತ್ತು ಸೂರತ್ ಇವು ಈ 10 ಹಾಟ್‌ಸ್ಪಾಟ್‌ ಗಳಾಗಿದ್ದವು.

 ಜೂ.12ರಂದು ಸುದ್ದಿಗೋಷ್ಠಿಯಲ್ಲಿ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸಿದ್ದ ಭಾರ್ಗವ ಅವರು ಐಸಿಎಂಆರ್ ಸಂಶೋಧಕರು 83 ಜಿಲ್ಲೆಗಳ 28,000 ವ್ಯಕ್ತಿಗಳಿಂದ ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ಪ್ರಕಟಿತ ವರದಿಯಲ್ಲಿ ಕೇವಲ 71 ಜಿಲ್ಲೆಗಳನ್ನು ಉಲ್ಲೇಖಿಸಲಾಗಿದೆ. ಯಾರ ದತ್ತಾಂಶಗಳನ್ನು ಕೈಬಿಡಲಾಗಿದೆ ಇತ್ಯಾದಿ ವಿವರಗಳು ಸ್ಪಷ್ಟವಾಗಿಲ್ಲ.

ಮುಂಬೈನಲ್ಲಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.36, ಅಹ್ಮದಾಬಾದ್‌ನಲ್ಲಿ ಶೇ.48 ಮತ್ತು ಕೋಲ್ಕತಾದಲ್ಲಿ ಶೇ.30ರಷ್ಟು ಜನರಲ್ಲಿ ಕೋವಿಡ್-19ಗೆ ಆ್ಯಂಟಿಬಾಡಿಗಳು ಪತ್ತೆಯಾಗಿದ್ದವು, ಅಂದರೆ ಅವರು ಈ ಮೊದಲು ಕೊರೋನ ವೈರಸ್ ಸೋಂಕಿಗೊಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಒಟ್ಟಾರೆ ವರದಿಯ ಫಲಿತಾಂಶವು ಎಪ್ರಿಲ್ ಕೊನೆಯಲ್ಲಿ ಮತ್ತು ಮೇ ಆರಂಭದಲ್ಲಿ ದೇಶದಲ್ಲಿ ಸೋಂಕಿನ ಸರಾಸರಿ ಪ್ರಮಾಣ ಕೇವಲ ಶೇ.0.73ರಷ್ಟಿತ್ತು ಎಂದು ಹೇಳಿದೆ.

ಹಾಟ್ ಸ್ಪಾಟ್‌ಗಳ ದತ್ತಾಂಶಗಳನ್ನು ವರದಿಯಿಂದ ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಮತ್ತು ವರದಿಯ ಸಹಲೇಖಕ ಸಮೀರನ್ ಪಾಂಡಾ ಅವರು,ಈ ಹತ್ತು ಹಾಟ್‌ಸ್ಪಾಟ್‌ಗಳ ಪೈಕಿ ಕೆಲವು ನಗರಗಳಲ್ಲಿನಡೆಸಲಾದ ನಗರ ಮಟ್ಟದ ಸಿರೊಲಾಜಿಕಲ್ ಸಮೀಕ್ಷೆಯಿಂದಾಗಿ ಈ ದತ್ತಾಂಶಗಳು ಅಸ್ತಿತ್ವ ಕಳೆದುಕೊಂಡಿದ್ದವು ಎಂದಿದ್ದಾರೆ.

ಹೆಚ್ಚಿನ ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೋಂಕು ಪ್ರಸರಣದ ಆಯಾಮಗಳನ್ನು ತಿಳಿದುಕೊಳ್ಳಲು ನಗರ ಹಾಟ್‌ಸ್ಪಾಟ್‌ಗಳ ಕಂಟೈನ್ಮೆಂಟ್ ರೆನ್‌ಗಳ ಡಾಟಾ ಮುಖ್ಯವಾಗುತ್ತದೆ ಎಂದಿರುವ ವರದಿಯ ಇನ್ನೋರ್ವ ಸಹಲೇಖಕ ಡಿ.ಸಿ.ಎಸ್.ರೆಡ್ಡಿ ಅವರು,‘ಸಮೀಕ್ಷೆ ನಡೆಸಿದ ತಂಡದ ಸದಸ್ಯರಾಗಿ ದತ್ತಾಂಶಗಳನ್ನು ಏಕೆ ತಡೆಹಿಡಿಯಲಾಗಿದೆ ಎನ್ನುವುದನ್ನು ನಾವು ಹೇಳುವಂತಿಲ್ಲ. ಇದಕ್ಕೆ ಐಸಿಎಂಆರ್ ಉತ್ತರಿಸಬೇಕು’ ಎಂದು ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ನಿಜವನ್ನು ಕಂಡು ಹಿಡಿಯುವುದು ವಿಜ್ಞಾನದ ಉದ್ದೇಶವಾಗಿದೆ ಮತ್ತು ಸಂಶೋಧನೆಯನ್ನು ದಮನಿಸುವುದು ಅಕ್ರಮವಾಗುತ್ತದೆ ಎಂದು ಇನ್ನೋರ್ವ ಸಹಲೇಖಕ ಜಯಪ್ರಕಾಶ ಮುಳಿಯಿಲ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X