Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ಸರಕಾರಿ ಹುದ್ದೆ ಸೇರಲು ಹಿಂಜರಿಕೆ ಬೇಡ’

‘ಸರಕಾರಿ ಹುದ್ದೆ ಸೇರಲು ಹಿಂಜರಿಕೆ ಬೇಡ’

ಪೊಲೀಸ್ ಇಲಾಖೆಗೆ ಸೇರಿ ತಂಗಿಯನ್ನೂ ಎಸ್ಸೈ ಆಗಿಸಿದ ಲಾಲೂಸಾಬ್ ಜಂಗ್ಲಿ

ಸಂದರ್ಶನ: ಕೆ.ಎಲ್.ಶಿವುಸಂದರ್ಶನ: ಕೆ.ಎಲ್.ಶಿವು21 Sept 2020 11:33 AM IST
share
‘ಸರಕಾರಿ ಹುದ್ದೆ ಸೇರಲು ಹಿಂಜರಿಕೆ ಬೇಡ’

► ಪೊಲೀಸ್ ಇಲಾಖೆಯಲ್ಲಿ ಎಸ್ಸೈಆಗಿ ಗಮನ ಸೆಳೆದ ರುಬೀನಾ ಬಾನು

ಚಿಕ್ಕಮಗಳೂರು, ಸೆ.21: ಒಂದೇ ಕುಟುಂಬದವರು ಸರಕಾರಿ ಕೆಲಸಗಳಲ್ಲಿರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಒಂದೇ ಕುಟುಂಬದವರು ಅದರಲ್ಲೂ ಅಣ್ಣ-ತಂಗಿ ಒಂದೇ ಇಲಾಖೆಯ ಒಂದೇ ಗ್ರೇಡ್‌ನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅಪರೂಪ. ಆದರೆ, ಹೀಗೆ ಒಂದೇ ಕುಟುಂಬದ ಅಣ್ಣ ತಂಗಿ ಇಬ್ಬರೂ ಒಂದೇ ಇಲಾಖೆ ಒಂದೇ ಗ್ರೇಡ್‌ನ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣ್ಣ-ತಂಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದಾರೆ.

ಅಣ್ಣ ಮುಹಮ್ಮದ್ ಪೈಗಂಬರ್ ಲಾಲೂಸಾಬ್ ಜಂಗ್ಲಿ ಚಿಕ್ಕಮಗಳೂರು ನಗರದ ರಿಸರ್ವ ಎಸ್ಸೈಆಗಿದ್ದರೆ, ತಂಗಿ ರುಬೀನಾ ಬಾನು. ಚಿಕ್ಕಮಗಳೂರು ನಗರಠಾಣೆಯಲ್ಲಿ ಎಸ್ಸೈಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅಪರೂಪ ಅಧಿಕಾರಿಗಳ ಬಗ್ಗೆ ಎಲ್ಲರಿಗೂ ಕುತೂಹಲ ಇರುವುದು ಸಾಮಾನ್ಯ. ಅಣ್ಣ-ತಂಗಿ ಒಂದೇ ಇಲಾಖೆಯಲ್ಲಿ ಕೆಲಸ ಮಾಡಲು ಕಾರಣ, ಪ್ರೇರಣೆ ಮತ್ತಿತರ ಸಂಗತಿಗಳ ಬಗ್ಗೆ ಮುಹಮ್ಮದ್ ಪೈಗಂಬರ್ ಲಾಲೂಸಾಬ್ ಜಂಗ್ಲಿ ಅವರು ವಾರ್ತಾಭಾರತಿಯೊಂದಿಗೆ ಮಾತನಾಡಿದ್ದಾರೆ.

ವಾ.ಭಾ: ನಿಮ್ಮ ಹುಟ್ಟೂರು, ಶೈಕ್ಷಣಿಕ ಹಿನ್ನೆಲೆ, ಕುಟುಂಬದ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಳ್ಳುತ್ತೀರಾ?

► ನಮ್ಮ ಹುಟ್ಟೂರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹಿಪ್ಪರಗಿ ಗ್ರಾಮ. ಅತ್ಯಂತ ಕಡುಬಡತನದ ಕುಟುಂಬ ನಮ್ಮದು. 6 ವರ್ಷಗಳ ಕಾಲ ಧಾರವಾಡದಲ್ಲಿ ಶಿಕ್ಷಣ ಪಡೆದಿದ್ದೇನೆ. ನಾನು ಹಾಗೂ ನನ್ನ ಸಹೋದರಿ ರುಬೀನಾ ಬಾನು ಇಬ್ಬರು ಪದವಿ ಶಿಕ್ಷಣ ಪೂರೈಸಿದ ಬಳಿಕ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆ ಬರೆದು ನೇಮಕಗೊಂಡಿದ್ದೇವೆ. ಕಂಡಕ್ಟರ್ ಆದರೆ, ಸಾಕೆಂಬುದು ಹೆತ್ತವರ ಬಯಕೆಯಾಗಿತ್ತು. ಪದವಿ ಶಿಕ್ಷಣದ ಬಳಿಕ ನಾನು ಎದುರಿಸಿದ ಮೊದಲ ಪರೀಕ್ಷೆಯಲ್ಲೇ ನೇಮಕಗೊಂಡಿದ್ದೇನೆ. ಪರೀಕ್ಷಾ ಸಿದ್ಧತೆಗಾಗಿ ಯಾವುದೇ ಕೋಚಿಂಗ್ ಕ್ಲಾಸ್‌ಗಳಿಗೂ ಹೋಗಿಲ್ಲ. ನನ್ನ ಸಹೋದರಿ ರುಬೀನಾ ಪದವಿ ಮುಗಿಸಿ ಒಂದೇ ವರ್ಷಕ್ಕೆ ಎಸ್ಸೈ ಹುದ್ದೆಗೆ ನೇಮಕವಾಗಿದ್ದಾರೆ. ತಂಗಿ ರುಬೀನಾ ಬಾನು ಕೂಡ ಕೋಚಿಂಗ್ ಪಡೆದಿಲ್ಲ. ಆಕೆಗೆ ನಾನೇ ಕೋಚ್.

ವಾ.ಭಾ: ನಿಮ್ಮ ಮೊದಲ ಪೋಸ್ಟಿಂಗ್ ಎಲ್ಲಿ?

► ನೇಮಕಾತಿ ಬಳಿಕ ನನ್ನನ್ನು ಮಂಗಳೂರು ಪೊಲೀಸ್ ವಲಯಕ್ಕೆ ಕರ್ತವ್ಯಕ್ಕೆ ನೇಮಿಸಲಾಯಿತು. ನನ್ನ ಸಹೋದರಿಯನ್ನು ಬೆಂಗಳೂರು ವಲಯಕ್ಕೆ ನೇಮಿಸಲಾಯಿತು. ಎರಡನೇ ಪೋಸ್ಟಿಂಗ್‌ನಲ್ಲಿ ನನಗೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಲಾಯಿತು. ಇಲ್ಲಿ ರಿಸರ್ವ ಸಬ್‌ಇನ್‌ಸ್ಪೆಕ್ಟರ್‌ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೇ ವೇಳೆ ನನ್ನ ತಂಗಿಗೂ ಚಿಕ್ಕಮಗಳೂರು ಜಿಲ್ಲೆಗೆ ಎರಡನೇ ಪೋಸ್ಟಿಂಗ್ ಮಾಡಲಾಯಿತು. ಆಕೆ ನಗರಠಾಣೆಯ ಸಿವಿಲ್ ಎಸ್ಸೈ ಆಗಿ ಸೇವೆಯಲ್ಲಿದ್ದಾರೆ.

ವಾ.ಭಾ: ಪೊಲೀಸ್ ಇಲಾಖೆ ಬಗ್ಗೆ ನಿಮಗೆ ಒಲವು ಮೂಡಿದ್ದು ಹೇಗೆ?

ಉತ್ತರ ಕರ್ನಾಟಕ ಭಾಗದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಜನರು ಅತ್ಯಂತ ಗೌರವದ ಭಾವನೆ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರನ್ನೂ ಅಲ್ಲಿನ ಜನರು ಗೌರವದಿಂದ ಕಾಣುತ್ತಾರೆ. ಪೊಲೀಸ್ ಪೇದೆಗೂ ಎಸ್ಪಿಗೆ ನೀಡುವ ಗೌರವ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ನನಗೆ ಪಿಯುಸಿ ಓದುತ್ತಿದ್ದಾಗಲೇ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸಿತ್ತು. ಅದರಲ್ಲೂ ಡಬಲ್ ಸ್ಟಾರ್ ಇರುವ ಯೂನಿಫಾರ್ಮ್ ತೊಡಬೇಕೆಂಬುದು ನನ್ನ ಮನದ ಬಯಕೆಯಾಗಿತ್ತು.

ವಾ.ಭಾ: ಪೊಲೀಸ್ ಇಲಾಖೆಗೆ ಸೇರಲು ಮುಖ್ಯ ಕಾರಣ ಏನಾದರೂ ಇದೆಯೇ?

► ಸಾಮಾಜದ ಸ್ವಾಸ್ಥ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮಹತ್ತರವಾದ ಜವಬ್ದಾರಿ ಇದೆ. ಈ ಇಲಾಖೆ ಇಡೀ ಸಾಮಾಜವನ್ನು ಕಂಟ್ರೋಲ್ ಮಾಡುತ್ತದೆ. ಮುಖ್ಯವಾಗಿ ನೊಂದವರ, ದೀನ ದಲಿತರಿಗೆ ಉತ್ತಮ ಸೇವೆ ನೀಡಲು, ನ್ಯಾಯ ಒದಗಿಸಲು ಇಲಾಖೆಯಲ್ಲಿ ಅಪಾರ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಸಮಾಜ ಸೇವೆ ಮಾಡಲು ವಿಪುಲ ಅವಕಾಶಗಳಿರುವ ಪೊಲೀಸ್ ಇಲಾಖೆಗೆ ಸೇರುವುದು ನನ್ನ ಕನಸಾಗಿತ್ತು.

ವಾ.ಭಾ: ನಿಮ್ಮ ಸಹೋದರಿಯೂ ಎಸ್ಸೈ ಆಗಿದ್ದಾರೆ. ಇಬ್ಬರೂ ಒಂದೇ ಇಲಾಖೆಗೆ ಸೇರಿಕೊಳ್ಳಲು ಏನಾದರೂ ಪ್ರಮುಖ ಕಾರಣ ಇದೆಯಾ?

► ನನ್ನ ಓರ್ವ ಸಹೋದರಿಯನ್ನು ಬೇಗನೆ ವಿವಾಹ ಮಾಡಿಕೊಟ್ಟಿದ್ದರಿಂದ ನನಗೆ ಬೇಸರವಾಗಿತ್ತು. ಸಮುದಾಯದಲ್ಲಿ ಸುಧಾರಣೆಯ ಅಗತ್ಯವಿದೆ. ಇದನ್ನು ನಾನು ಇನ್ನೊಬ್ಬರಿಗೆ ಹೇಳುವುದಕ್ಕಿಂತ ನನ್ನ ಕುಟುಂಬದಲ್ಲೇ ಸುಧಾರಣೆ ಮಾಡಲು ಯೋಚಿಸಿದ್ದೆ. ನನ್ನ ಕಿರಿಯ ಸಹೋದರಿಯ ಮೂಲಕ ನಮ್ಮ ಸಮಾಜದ ಮನಃಪರಿವರ್ತನೆ ಮಾಡುವ, ಆಕೆಯನ್ನು ಮತ್ತೋರ್ವ ಹೆಣ್ಣು ಮಕ್ಕಳಿಗೆ ಮಾದರಿಯನ್ನಾಗಿಸುವ ಬಗ್ಗೆ ಯೋಚಿಸಿದ್ದೆ. ಆಕೆಗೆ ಪೊಲೀಸ್ ಇಲಾಖೆಗೆ ಸೇರಲು ಪ್ರೇರೇಪಿಸಿದ್ದೆ. ಪೊಲೀಸ್ ಇಲಾಖೆ ಬಗ್ಗೆ ಅರಿವು ಮೂಡಿಸಿದೆ. ಪರೀಕ್ಷೆ ಬರೆದ ಮೊದಲ ಪ್ರಯತ್ನದಲ್ಲೇ ಆಕೆಯೂ ಎಸ್ಸೈ ಆದಳು. 

ವಾ.ಭಾ: ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಇದೆಯೇ?

► ರಾಜ್ಯದ ದಕ್ಷಿಣ ಭಾಗದಲ್ಲಿನ ಮುಸ್ಲಿಮರಲ್ಲಿ ಶಿಕ್ಷಣದ ಮಹತ್ವ ಇತ್ತೀಚೆಗೆ ಹೆಚ್ಚುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮುಸ್ಲಿಮರು ಹೆಚ್ಚು ಸುಶಿಕ್ಷಿತವಾಗಿದ್ದಾರೆ. ಆದರೆ, ಉ.ಕ. ಭಾಗದ ಮುಸ್ಲಿಮರಲ್ಲಿ ಶಿಕ್ಷಣ ಕೊರತೆ ಹೆಚ್ಚಿದೆ. ಅದರಲ್ಲೂ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ನಮ್ಮೂರಿನಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚೆಂದರೆ ಪಿಯುಸಿವರೆಗೆ ಓದಿಸಲಾಗುತ್ತಿದೆ. ಪಿಯುಸಿ ಓದು ಮುಗಿಯುತ್ತಿದ್ದಂತೆ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವಂತಹ ಮನೋಭಾವನೆ ಮುಸ್ಲಿಮರಲ್ಲಿದೆ. ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಸಾಧನೆ ಮಾಡುವ ಸಾಮರ್ಥ್ಯ, ಅವಕಾಶ ಇದ್ದಾಗ್ಯೂ ಅದಕ್ಕೆ ಕೌಂಟುಂಬಿಕ ವ್ಯವಸ್ಥೆಯೊಳಗೆ ಪ್ರೋತ್ಸಾಹ ಸಿಗುತ್ತಿಲ್ಲ. ಹೆಣ್ಣು ಮಕ್ಕಳ ಸಾಧನೆ, ಶಿಕ್ಷಣಕ್ಕೆ ಕಟ್ಟುಪಾಡುಗಳು ತೊಡಕಾಗಿವೆ. ಮಹಿಳೆಯರ ಆಸೆ, ಆಕಾಂಕ್ಷೆಗಳನ್ನು ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸುವಂತಹ ಮನೋಭಾವ ಮುಸ್ಲಿಮರಲ್ಲೂ ಇದೆ. 

ವಾ.ಭಾ: ಪೊಲೀಸ್ ಇಲಾಖೆಗೆ ಸೇರಲು ಲಂಚ, ಶಿಫಾರಸು ಬೇಕೆನ್ನುತ್ತಾರಲ್ಲಾ?

► ನಾನು 25ನೇ ವಯಸ್ಸಿಗೆ ಎಸ್ಸೈಆಗಿದ್ದೇನೆ. ನನ್ನ ಸಹೋದರಿ ಪದವಿ ಶಿಕ್ಷಣ ಪೂರೈಸಿದ 1 ವರ್ಷದ ಬಳಿಕ ಎಸ್ಸೈ ಆಗಿದ್ದಾಳೆ. ಪರೀಕ್ಷೆ ಎದುರಿಸುವಲ್ಲಿ ಆಕೆಯೂ ಯಾವುದೇ ಕೋಚಿಂಗ್ ಹೋಗದೆ ಕಷ್ಟಪಟ್ಟು ಓದಿದ್ದೇವೆ. ಯಾರಿಂದಲೂ ಶಿಫಾರಸು ಮಾಡಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಗುರಿ ಹಾಗೂ ಪರಿಶ್ರಮ ಇದ್ದರೇ ಇವುಗಳ ಅಗತ್ಯವೂ ಇಲ್ಲ. ಇಲಾಖೆಯಲ್ಲಿ ಲಂಚ ನೀಡಿದರೆ, ಶಿಫಾರಸು ಮಾಡಿಸಿದರೆ ಮಾತ್ರ ಕೆಲಸ ಎಂಬ ಬಗ್ಗೆ ಸಾರ್ವಜನಿಕವಾಗಿ ಒಂದು ತಪ್ಪು ಕಲ್ಪನೆ ಇದೆ.

ವಾ.ಭಾ: ಇಲಾಖೆಯಲ್ಲಿ ನಿಮ್ಮನ್ನು ಹೇಗೆ ಕಾಣಲಾಗುತ್ತಿದೆ?

► ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ಇಲಾಖೆಗೆ ಸೇರಿ ನನಗೆ 4 ವರ್ಷಗಳ ಅನುಭವ, ನನ್ನ ತಂಗಿಗೆ ಮೂರು ವರ್ಷಗಳ ಅನುಭವ ಆಗಿದೆ. ಈ ಅವಧಿಯಲ್ಲಿ ಜಾತಿ, ಧರ್ಮದ ಕಾರಣಕ್ಕೆ ತಾತ್ಸಾರ, ತಾರತಮ್ಯದಂತಹ ಘಟನೆಗಳು ಒಮ್ಮೆಯೂ ಸಂಭವಿಸಿಲ್ಲ. ಇಲಾಖೆಯಲ್ಲಿ ಇಂತಹದ್ದಕ್ಕೆಲ್ಲ ಅವಕಾಶವೂ ಇಲ್ಲ. ಇಲಾಖೆಯ ಬಗ್ಗೆ ಸಮಾಜದಲ್ಲೇ ಪೂರ್ವಗ್ರಹವಿದೆ. ಹೆಣ್ಣು ಮಕ್ಕಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ ಮೂಗುಮುರಿಯುವವರಿದ್ದಾರೆ. 

ವಾ.ಭಾ: ಇಲಾಖೆಗೆ ಸೇರ ಬಯಸುವವರಿಗೆ, ಯುವಜನರಿಗೆ ನಿಮ್ಮ ಸಲಹೆ ಏನು?

► ಸಮಾಜದಲ್ಲಿ ಪ್ರಬಲ ಸಮುದಾಯಗಳಿಗೆ ಮಾತ್ರ ಅವಕಾಶ, ಸರಕಾರಿ ಕೆಲಸ, ಉನ್ನತ ಹುದ್ದೆ ಸಿಗುತ್ತದೆ ಎಂಬ ಮನೋಭಾವನೆ ಇದೆ. ಹಿಂದಿನಿಂದಲೂ ಈ ಪೂರ್ವಗ್ರಹ ಬೆಳೆದು ಬಂದಿದೆ. ಮುಸ್ಲಿಮರಲ್ಲಿಯೂ ಈ ಪೂರ್ವಗ್ರಹವಿದೆ. ಈ ಮನೋಭಾವನೆಯಿಂದಾಗಿ ಮುಸ್ಲಿಮರು ವ್ಯಾಪಾರ, ವಹಿವಾಟಿನತ್ತ ಹೆಚ್ಚು ಮುಖಮಾಡಿದ್ದಾರೆ. ನಾನು ಎಸ್ಸೈ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ನನಗೂ ಕೆಲವರು ಕಾಲೆಳೆದಿದ್ದಾರೆ. ಆದರೆ, ನಾನು ಮಾತ್ರ ಉನ್ನತ ವಿಚಾರಗಳು, ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತವೆ ಎಂಬ ಮಾತಿನಂತೆ ನಡೆದುಕೊಂಡೆ. ಯುವಜನತೆ ಇಂತಹ ಕೀಳರಿಮೆಯಿಂದ ಮೊದಲು ಹೊರಬರಬೇಕು. ಅವಕಾಶಗಳು ಕೇವಲ ಪ್ರಬಲ ಸಮುದಾಯಗಳಿಗೆ ಮಾತ್ರವಲ್ಲ, ದುರ್ಬಲ ಸವುುದಾಯಗಳಿಗೂ ಹೆಚ್ಚು ಅವಕಾಶವಿದೆ.

share
ಸಂದರ್ಶನ: ಕೆ.ಎಲ್.ಶಿವು
ಸಂದರ್ಶನ: ಕೆ.ಎಲ್.ಶಿವು
Next Story
X