Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಲಪ್ರಳಯಕ್ಕೆ ಉಡುಪಿ ಜನತೆ ತತ್ತರ: ಬದುಕು...

ಜಲಪ್ರಳಯಕ್ಕೆ ಉಡುಪಿ ಜನತೆ ತತ್ತರ: ಬದುಕು ಕಟ್ಟಿಕೊಳ್ಳಲು ಸಂತ್ರಸ್ತರ ಪರದಾಟ

ಕೋಟ್ಯಂತರ ರೂ. ನಷ್ಟದ ಅಂದಾಜು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ21 Sept 2020 8:44 PM IST
share
ಜಲಪ್ರಳಯಕ್ಕೆ ಉಡುಪಿ ಜನತೆ ತತ್ತರ: ಬದುಕು ಕಟ್ಟಿಕೊಳ್ಳಲು ಸಂತ್ರಸ್ತರ ಪರದಾಟ

ಉಡುಪಿ, ಸೆ.21: ಭಾರೀ ಮಳೆಯ ಪರಿಣಾಮ ಜಿಲ್ಲೆಯ ನಾಲ್ಕು ತಾಲೂಕು ಗಳಲ್ಲಿ ಉಂಟಾಗಿದ್ದ ಜಲಪ್ರಳಯದಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಇಂದು ನೆರೆ ಇಳಿದ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರದಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದ ನೆರೆ ಸಂತ್ರಸ್ತರು ತಮ್ಮ ಮನೆಗಳಿಗೆ ಮರಳಿದ್ದಾರೆ.

ಪ್ರವಾಹದಿಂದ ಸಾವಿರಾರು ಮನೆಗಳು ಜಲಾವೃತಗೊಂಡ ಪರಿಣಾಮ ಮನೆಯೊಳಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಇದೀಗ ತಮ್ಮ ಮನೆಗಳಿಗೆ ಮರಳಿರುವ ಜನರು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ದೃಶ್ಯಗಳು ಹಲವು ಕಡೆಗಳಲ್ಲಿ ಕಂಡು ಬರುತ್ತಿವೆ. ಅದೇ ರೀತಿ ಪ್ರವಾಹ ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿ ಜಿಲ್ಲಾಡಳಿತ ವಿರುದ್ಧವೂ ಸಂತ್ರಸ್ತರು ತಮ್ಮ ಆಕ್ರೋಶ ಹೊರಹಾಕಿದರು.

ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಬೆಳಗ್ಗೆಯಿಂದ ಮಳೆ ಅಬ್ಬರ ಇಳಿ ಮುಖವಾಗಿದ್ದು, ಇದರಿಂದ ನೆರೆ ಇಳಿಕೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ನೇತೃತ್ವದ ಅಧಿಕಾರಿಗಳ ತಂಡ ನೆರೆ ಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಪರಿಶೀಲನೆ ನಡೆಸಿದರು.

ಮಧ್ಯರಾತ್ರಿ ಇಳಿದ ನೆರೆ: ಉದ್ಯಾವರ ಪಾಪನಾಶಿನಿ, ಸ್ವರ್ಣ, ಸೀತಾನದಿ ತುಂಬಿ ಹರಿಯುತ್ತಿದ್ದರೂ ತೀರದಲ್ಲಿ ನೆರೆ ಪ್ರಮಾಣ ಇಳಿಕೆ ಕಂಡಿದೆ. ಇದರಿಂದ ಉದ್ಯಾವರ ಸುತ್ತಮುತ್ತ, ಹಿರಿಯಡ್ಕ, ಪೆರಂಪಳ್ಳಿ, ಹೂಡೆ, ಕೆಮ್ಮಣ್ಣು ಪ್ರದೇಶ ಗಳಲ್ಲಿ ನೆರೆಯ ಪ್ರಮಾಣ ಮಧ್ಯರಾತ್ರಿ ವೇಳೆ ತಗ್ಗಿದೆ.
ಅದೇ ರೀತಿ ನಗರದ ಕಲ್ಸಂಕ ತೋಡು ಉಕ್ಕಿ ಹರಿದು ಉಂಟಾದ ನೆರೆಯಿಂದ ತತ್ತರಿಸಿ ಹೋದ ಬೈಲಕೆರೆ, ರಾಜಾಂಗಣ ಪಾರ್ಕಿಂಗ್ ಪ್ರದೇಶ, ಕಲ್ಸಂಕ, ಬಡಗುಪೇಟೆ, ಮಠದಬೆಟ್ಟು, ಮೂಡನಿಡಂಬೂರು, ಕಲ್ಮಾಡಿ ಸೇರಿದಂತೆ ಹಲವು ಪ್ರದೇಶಗಳು ಇಂದು ಸಹಜ ಸ್ಥಿತಿಗೆ ಮರಳಿರುವುದು ಕಂಡು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿ ಯಾಗಿದ್ದ ನೀರು ಕೂಡ ಹರಿದುಹೋಗಿದೆ. ಸುಮಾರು 24 ಗಂಟೆಯ ಬಳಿಕ ಉಡುಪಿ ಸಹಜ ಸ್ಥಿತಿಗೆ ಮರಳುತ್ತಿದೆ.

ಮನೆ, ಅಂಗಡಿಗಳಿಗೆ ಹಾನಿ: ನೆರೆ ನೀರು ನುಗ್ಗಿದ ಪರಿಣಾಮ ಉಡುಪಿ ನಗರದ 500ಕ್ಕೂ ಅಧಿಕ ಮನೆಗಳಿಗೆ ಹಾಗೂ 100ಕ್ಕೂ ಹೆಚ್ಚು ಅಂಗಡಿ ಗಳಿಗೆ ಅಪಾರ ಹಾನಿ ಉಂಟಾಗಿದ್ದು, ಸುಮಾರು 35 ಕೋಟಿ ರೂ. ನಷ್ಟ ಅಂದಾಜಿಸ ಲಾಗಿದೆ.

ಬಡಗುಪೇಟೆ ರಸ್ತೆಯಲ್ಲಿರುವ ಎಣ್ಣೆ ಮಿಲ್, ಹೊಟೇಲು, ಬಟ್ಟೆ ಅಂಗಡಿ ಸೇರಿದಂತೆ ಎಲ್ಲ ಅಂಗಡಿಗಳು ಹಾಗೂ ಗೋದಾಮುಗಳಿಗೆ ನೀರು ನುಗ್ಗಿವೆ. ಅದೇ ರೀತಿ ಇದೇ ರಸ್ತೆಯಲ್ಲಿರುವ ಗೋಪಾಲಕೃಷ್ಣ ರಾವ್ ಅವರ ಮನೆಗೆ ಸಂಪೂರ್ಣ ಧರಾಶಾಹಿಯಾಗಿದೆ.

ಕಲ್ಸಂಕ ರಸ್ತೆಯಲ್ಲಿರುವ ಬೇಕರಿ, ಹೊಟೇಲು, ವೈನ್ ಶಾಪ್, ಸಂಗೀತ ಪರಿಕರಗಳ ಅಂಗಡಿಗಳಿಗೂ ನೀರು ನುಗ್ಗಿ ಹಾನಿ ಉಂಟಾಗಿದ್ದು, ಇದ ರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮೂಡನಿಡಂಬೂರು ಗರಡಿ ಕೂಡ ಜಲಾ ವೃತಗೊಂಡಿದ್ದು, ಇಂದು ಕೂಡ ನೀರು ಇಳಿದಿಲ್ಲ. ಅಲ್ಲಿನ ಸುತ್ತಮುತ್ತ ಲಿನ ಮನೆಯವರು ಕೂಡ ನೆರೆಯಿಂದ ಸಾಕಷ್ಟು ಸೊತ್ತುಗಳನ್ನು ಕಳೆದುಕೊಂಡಿದ್ದಾರೆ.

ನೆರೆಯಲ್ಲಿ ಕೊಚ್ಚಿ ಬಂದ ಬೆಡ್, ಟ್ಯಾಂಕ್ !

ದಶಕಗಳ ನಂತರ ಕಂಡುಬಂದ ಭೀಕರ ಜಲಪ್ರಳಯಕ್ಕೆ ಸಾಕ್ಷಿಯಾಗಿ ನೆರೆ ಪೀಡಿತ ಪ್ರದೇಶಗಳ ತೋಡಿನಲ್ಲಿ ಬೆಡ್, ನೀರಿನ ಟ್ಯಾಂಕ್ ಹಾಗೂ ಮನೆ ಬಳಕೆ ವಸ್ತುಗಳು ಕಂಡುಬಂದವು.

ಮನೆಯ ಹಲವು ಸಾಮಗ್ರಿಗಳು ಕೊಳಚೆ ನೀರಿನಲ್ಲಿ ಸೇರಿಕೊಂಡಿದೆ. ಮನೆಗಳ ಗೂಡಿನಲ್ಲಿ ಕೂಡಿ ಹಾಕಿದ್ದ ಕೋಳಿ ಹಾಗೂ ಸಾಕಾಣಿಕೆಯ ಮೀನು ಗಳು ಕೂಡ ನೀರು ಪಾಲಾಗಿದೆ. ಮನೆ ಒಳಭಾಗದಲ್ಲಿ ಇಡಲಾದ ಪ್ರತಿಯೊಂದು ಪರಿಕರಗಳಿಗೆ ಹಾನಿಯಾಗಿವೆ. ಮನೆಯ ಆವರಣದಲ್ಲಿ ನಿಲ್ಲಿಸ ಲಾದ ಬೈಕ್ ಹಾಗೂ ಕಾರುಗಳು ನೀರಿನಲ್ಲಿ ಮುಳುಗಿದ ಪರಿಣಾಮ ಹಾನಿ ಸಂಭವಿಸಿದೆ.

ಎರ್ಲಪಾಡಿ-ಕಡ್ತಲ ರಸ್ತೆ ಸಂಪರ್ಕ ಕಡಿತ

ಕಾರ್ಕಳ ತಾಲೂಕಿನ ಎರ್ಲಪಾಡಿ-ಕಡ್ತಲ ಗ್ರಾಮವನ್ನು ಸಂಪರ್ಕಿಸುವ ಪಟ್ಟಿ ಬಾಹು ಸಮೀಪ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂಗೆ ಹಾನಿಯಾಗಿ ರುವ ಬಗ್ಗೆ ವರದಿಯಾಗಿದೆ.

ನೀರಿನ ಸೆಳೆತಕ್ಕೆ ಡ್ಯಾಂನ ಕೆಲವು ಭಾಗ ತುಂಡಾಗಿದ್ದು, ಇದರಿಂದ ಎರಡು ಬದಿಯ ರಸ್ತೆಯು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಕಡ್ತಲ, ಎರ್ಲಪಾಡಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಹೆಬ್ರಿ, ಕಾರ್ಕಳ, ಬೈಲೂರು ಕಡೆ ತೆರಳಲು ತೊಂದರೆಯಾಗಿದೆ ಎಂದು ದೂರಲಾಗಿದೆ.

ಮೂಡನಿಡಂಬೂರು ಗರಡಿ ವರಾಠದಲ್ಲಿ ರವಿವಾರ ನಸುಕಿನ ವೇಳೆ ನೆರೆ ಏರಿಕೆಯಾಗಿ ಬಂದು, ಬಹುತೇಕ ಮನೆಗಳು ಜಲಾವೃತಗೊಂಡವು. ಈ ವೇಳೆ ಅಗ್ನಿಶಾಮಕದಳಕ್ಕೆ ಕರೆ ಮಾಡಿದರೂ ದಾರಿ ಹಾಗೂ ಕತ್ತಲಿನ ನೆಪ ಹೇಳಿ ಅಧಿ ಕಾರಿಗಳು ಜಾರಿಕೊಂಡರು. ರವಿವಾರ ಬೆಳಗ್ಗೆ ಒಂದೇ ಬೋಟನ್ನು ಸ್ಥಳಕ್ಕೆ ತರಲಾಯಿತು. ಸೆ.18ಕ್ಕೆ ರೆಡ್ ‌ಆರ್ಲಟ್ ಎಂಬುದಾಗಿ ಘೋಷಣೆ ಮಾಡಿ ದರೂ ಜಿಲ್ಲಾಡಳಿತ ಯಾವುದೇ ಪೂರ್ವಸಿದ್ಧತೆ ಮಾಡಿರಲಿಲ್ಲ. ನಾವೇ ವೈಯಕ್ತಿಕ ವಾಗಿ ಮಲ್ಪೆಯವರಿಗೆ ಕರೆ ಮಾಡಿ ಬೋಟು ತರಿಸಿಕೊಂಡೆವು. - ಸಂತೋಷ್ ಪೂಜಾರಿ ಮೂಡನಿಡಂಬೂರು.

ಜಿಲ್ಲೆಯಲ್ಲಿ ಹಲವು ಮನೆಗಳು ಸಂಪೂರ್ಣ ಕುಸಿತ ಕಂಡಿದ್ದು, ಅಂತಹ ಮನೆಗಳಿಗೆ 5ಲಕ್ಷ ರೂ. ಪರಿಹಾರ ನೀಡಲಾಗುವುದು. ಅದೇ ರೀತಿ ಹಾನಿ ಯಾಗಿರುವ ಅಂಗಡಿಗಳಿಗೂ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು. ನಾಳೆ ಅಧಿವೇಶನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಜಿಲ್ಲೆಯ ನೆರೆ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಲಾಗುವುದು.

-ರಘುಪತಿ ಭಟ್, ಶಾಸಕರು, ಉಡುಪಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X