ಖಾಝಿ ಬೇಕಲ್ ಉಸ್ತಾದ್ ನಿಧನ : ಮೊಂಟೆಪದವಿನ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ
ಮಂಗಳೂರು, ಸೆ. 24: ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದು, ಮೃತದೇಹವನ್ನು ಮೊಂಟೆಪದವಿನ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ.
ಅಂತ್ಯಸಂಸ್ಕಾರವು ಮೊಂಟೆಪದವು ಸಮೀಪದ ಮರಿಕ್ಕಳ ಜುಮಾ ಮಸೀದಿಯ ವಠಾರದಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story