ವಿಕ್ಕಿ ಡೋನರ್ ಖ್ಯಾತಿಯ ನಟ ಭೂಪೇಶ್ ಪಾಂಡ್ಯ ನಿಧನ
ಫೋಟೊ: ಟ್ವಿಟರ್
ಹೊಸದಿಲ್ಲಿ, ಸೆ.24: ವಿಕ್ಕಿ ಡೋನರ್ ಹಾಗೂ ಪರ್ಮಾನು ಸಹಿತ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ನಟ ಭೂಪೇಶ್ ಕುಮಾರ್ ಪಾಂಡ್ಯ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದಾಗಿ ಬುಧವಾರ ರಾತ್ರಿ ನಿಧನರಾದರು.
ನಟನ ಸಾವಿನ ಸುದ್ದಿಯನ್ನು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ(ಎನ್ಎಸ್ ಡಿ)ಬುಧವಾರ ಟ್ವೀಟ್ ಮೂಲಕ ತಿಳಿಸಿದೆ.
ಭೂಪೇಶ್ ಕುಮಾರ್ ಪಾಂಡ್ಯ ಅವರು(2001ರ ಬ್ಯಾಚಿನ ಹಳೆ ವಿದ್ಯಾರ್ಥಿ)ಸಾವಿನ ಸುದ್ದಿ ದುಃಖಕರವಾಗಿದೆ. ಎನ ಎಸ್ ಡಿ ಕುಟುಂಬವು ಹೃ ತ್ಪೂರ್ವಕ ಗೌರವ ಸಲ್ಲಿಸುತ್ತದೆ ಎಂದು ಟ್ವೀಟ್ ನಲ್ಲಿ ಪ್ರಕಟಿಸಿದೆ.
ನಟರಾದ ಮನೋಜ್ ವಾಜಪೇಯಿ, ಗಜರಾಜ್ ರಾವ್, ಚಲನಚಿತ್ರ ನಿರ್ಮಾಪಕ ಮುಖೇಶ್ ಚಾಬ್ರಾ, ಇತರ ಗಣ್ಯರು ದಿವಂಗತ ನಟನಿಗೆ ಟ್ವಿಟರ್ ನಲ್ಲಿ ಗೌರವ ಸಲ್ಲಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಭೂಪೇಶ್ ಪಾಂಡ್ಯ ಸಾಕಷ್ಟು ಪ್ರಸಿದ್ದಿ ಪಡೆದಿದ್ದಾರೆ.
Next Story