Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಸ್ವಂತ್ ಸಿಂಗ್: ಸಂವಹನಕಾರ, ಬಿಕ್ಕಟ್ಟು...

ಜಸ್ವಂತ್ ಸಿಂಗ್: ಸಂವಹನಕಾರ, ಬಿಕ್ಕಟ್ಟು ನಿವಾರಕ ಮತ್ತು ಲೇಖಕ

ವಾರ್ತಾಭಾರತಿವಾರ್ತಾಭಾರತಿ27 Sept 2020 10:28 PM IST
share
ಜಸ್ವಂತ್ ಸಿಂಗ್: ಸಂವಹನಕಾರ, ಬಿಕ್ಕಟ್ಟು ನಿವಾರಕ ಮತ್ತು ಲೇಖಕ

ಹೊಸದಿಲ್ಲಿ, ಸೆ.27: ಸಮಕಾಲೀನ ಇತಿಹಾಸದಲ್ಲಿಯ ಭಾರತದ ಅತ್ಯಂತ ವರ್ಣರಂಜಿತ ರಾಜಕಾರಣಿ ಜಸ್ವಂತ್ ಸಿಂಗ್(72) ಇನ್ನಿಲ್ಲ. ಕಳೆದ ಆರು ವರ್ಷಗಳಿಂದಲೂ ಕೋಮಾದಲ್ಲಿದ್ದ ಅವರು ರವಿವಾರ ಬೆಳಿಗ್ಗೆ ಚಿರನಿದ್ರೆಗೆ ಜಾರಿದ್ದಾರೆ. ಇದರೊಂದಿಗೆ ಬಿಜೆಪಿ ಹಾಗೂ ವಿತ್ತ,ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳಲ್ಲಿಯ ಯುಗವೊಂದು ಅಂತ್ಯಗೊಂಡಿದೆ. 1998ರಿಂದ 2004ರ ನಡುವೆ ವಿವಿಧ ಅವಧಿಗಳಲ್ಲಿ ಅವರು ಈ ಸಚಿವಾಲಯಗಳ ಹೊಣೆ ಹೊತ್ತಿದ್ದರು.

ಅದ್ವಿತೀಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ದೇಶೀಯ ರಾಜಕಾರಣದಲ್ಲಿ ಬದಲಾವಣೆಯ ಉತ್ತುಂಗದ ವೇಳೆ ಸಿಂಗ್ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಿರಂತರ ಓದುವಿಕೆ,ಸೇನೆಯಲ್ಲಿನ ತನ್ನ ಸೇವಾ ಅನುಭವ ಮತ್ತು ಹುಟ್ಟೂರು ರಾಜಸ್ಥಾನದ ಜಸೋಲ್‌ನಲ್ಲಿ ತನ್ನ ಸ್ಥಾನ ಇವುಗಳಿಂದಾಗಿ ಅವರು ಜೀವನದ ಬಗ್ಗೆ ಅತಿಯಾದ ಕುತೂಹಲವನ್ನು ಹೊಂದಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಅವರು ಸೌಜನ್ಯವೇ ಮೈವೆತ್ತಿದಂತಿದ್ದರು.

ಭಯೋತ್ಪಾದಕರು, ಹೈಜಾಕರ್‌ಗಳು ಮತ್ತು ಪಾಕಿಸ್ತಾನದ ಜೊತೆ ವ್ಯವಹಾರ

ಅಪಹರಣಕ್ಕೊಳಗಾಗಿದ್ದ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರಲು ಹೊಸವರ್ಷದ ಮುನ್ನಾ ದಿನವಾಗಿದ್ದ 1999 ಡಿಸೆಂಬರ್ 31ರಂದು ಕಂದಹಾರ್‌ಗಾಗಿ ವಿಮಾನವನ್ನೇರಿದ್ದ ಸಿಂಗ್ ತನ್ನನ್ನು ತಾಲಿಬಾನ್ ವಿದೇಶಾಂಗ ಸಚಿವ ವಕೀಲ್ ಅಹ್ಮದ್ ಮುತ್ತಾವಕೀಲ್ ರಟ್ಟೆ ಹಿಡಿದು ಕರೆದೊಯ್ದು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಮತ್ತು ಅವರೊಂದಿಗೆ ಮಾತುಕತೆಗೆ ಕುಳಿತಿದ್ದರು. ನೇಪಾಳದ ಕಠ್ಮಂಡುವಿನಿಂದ ದಿಲ್ಲಿಗೆ ಬರುತ್ತಿದ್ದ ಏರ್‌ಇಂಡಿಯಾದ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕರು ಅದನ್ನು ಆಗ ತಾಲಿಬಾನಿಗಳ ಆಡಳಿತವಿದ್ದ ಅಪಘಾನಿಸ್ತಾನದ ಕಂದಹಾರ್‌ಗೆ ಒಯ್ದಿದ್ದರು ಮತ್ತು ಅದರಲ್ಲಿದ್ದ 178 ಪ್ರಯಾಣಿಕರು ಮತ್ತು 11 ಸಿಬ್ಬಂದಿಗಳು ಒಂದು ವಾರದಿಂದಲೂ ನಿಲ್ದಾಣದ ಟರ್ಮಾಕ್‌ನಲ್ಲಿ ವಿಮಾನದಲ್ಲಿಯೇ ಕೊಳೆದಿದ್ದರು.

ಇದಾದ ಬಳಿಕ ತಾಲಿಬಾನಿಗಳೊಂದಿಗೆ ಮಾತುಕತೆಗಾಗಿ ಟಿವಿ ವಾಹಿನಿಗಳು ಸಿಂಗ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದವು,ಆದರೆ ಸಿಂಗ್ ಮಾತ್ರ ವಿಚಲಿತರಾಗಿರಲಿಲ್ಲ. ‘ನಾನು ನಮ್ಮ ಎಲ್ಲ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕಿತ್ತು. ತಾಲಿಬಾನಿಗಳೊಂದಿಗೆ ಮಾತುಕತೆ ಆ ಪ್ರಕ್ರಿಯೆಯ ಭಾಗವಾಗಿತ್ತು. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ ’ಎಂದು ಸಿಂಗ್ ಬಳಿಕ ಹೇಳಿದ್ದರು.

ಭಾರತದ ರಾಷ್ಟ್ರೀಯ ಹಿತಾಸಕ್ತಿಗಾಗಿ ಎಲ್ಲ ಬಗೆಯ,ತನಗೆ ಹಿಡಿಸದ ವ್ಯಕ್ತಿಗಳೊಂದಿಗೂ,ಅದೂ ಅಹಿತಕರ ಸಂದರ್ಭಗಳಲ್ಲಿ ಮಾತಿಗೆ ಸಿಂಗ್ ಸನ್ನದ್ಧರಾಗಿರುತ್ತಿದ್ದರು ಮತ್ತು ಇದು ಅವರನ್ನು ಅಷ್ಟೊಂದು ವಿಭಿನ್ನ ನಾಯಕನನ್ನಾಗಿಸಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷ, ಸೇನಾ ಮುಖ್ಯಸ್ಥ ಮತ್ತು ಕಾರ್ಗಿಲ್ ಯುದ್ಧದ ರೂವಾರಿ ಪರ್ವೇಝ್ ಮುಷರಫ್ ಕೂಡ ಸಿಂಗ್‌ಗೆ ಹಿಡಿಸದ ವ್ಯಕ್ತಿಗಳಲ್ಲೊಬ್ಬರಾಗಿದ್ದರು.

ಕಾರ್ಗಿಲ್ ಯುದ್ಧದ ಬಳಿಕ ಎರಡೇ ವರ್ಷಗಳಲ್ಲಿ ಶಾಂತಿ ಮಾತುಕತೆಗಳಿಗಾಗಿ 2001 ಜುಲೈನಲ್ಲಿ ಮುಷರಫ್ ಅವರನ್ನು ದಿಲ್ಲಿ ಮತ್ತು ಆಗ್ರಾಕ್ಕೆ ಆಹ್ವಾನಿಸಲು ಸರಕಾರವು ನಿರ್ಧರಿಸಿದಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿಯ ಅಧಿಕಾರಿಗಳು ತಮ್ಮ ರಾಜಕೀಯ ಧಣಿಗಳ ಬಗ್ಗೆ ಆಕ್ರೋಶಿತರಾಗಿದ್ದರು. ವಾಜಪೇಯಿ ಅವರು 1999,ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಬಸ್ ಯಾತ್ರೆಯನ್ನು ಕೈಗೊಂಡಾಗಲೂ ಈ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

 ಆದರೆ 2001ರಲ್ಲಿ ವಾಜಪೇಯಿಯವರ ಬೆಂಬಲ ಹೊಂದಿದ್ದ ಸಿಂಗ್ ಮುಷರಫ್‌ರನ್ನು ಭಾರತಕ್ಕೆ ಆಹ್ವಾನಿಸಲು ಅಚಲ ನಿಲುವು ಹೊಂದಿದ್ದರು. ‘ಭಾರತೀಯ ಉಪಖಂಡದಲ್ಲಿ ಈಗ ನಕಾಶೆಗಳ ರಚನೆ ಅಂತ್ಯಗೊಂಡಿದೆ ’ಎಂದು ಕಾರ್ಗಿಲ್ ಸಂಘರ್ಷದ ಬಳಿಕ ಅವರು ಪದೇ ಪದೇ ಹೇಳುತ್ತಿದ್ದರು. ಕಾರ್ಗಿಲ್‌ನಲ್ಲಿ ಮಾಡಿದಂತೆ ಭಾರತವು ಯಾವುದೇ ಬೆಲೆ ತೆತ್ತಾದರೂ ತನ್ನ ಇಂಚಿಂಚೂ ಭೂಪ್ರದೇಶವನ್ನು ರಕ್ಷಿಸಿಕೊಳ್ಳಲಿದೆ ಎಂಬ ಸ್ಪಷ್ಟ ಸಂದೇಶವನ್ನು ಅವರು ಪಾಕಿಸ್ತಾನಕ್ಕೆ ರವಾನಿಸುತ್ತಲೇ ಇದ್ದರು. ಇದೇ ವೇಳೆ ಛಾಯಾ ಯುದ್ಧಗಳು ಮತ್ತು ಗಡಿಯಾಚೆಯ ಭಯೋತ್ಪಾದನೆಯನ್ನು ಪಾಕಿಸ್ತಾನವು ನಿಲ್ಲಿಸಿದರೆ ಭಾರತವು ಅದರತ್ತ ಸ್ನೇಹಹಸ್ತ ಚಾಚಲು ಸಿದ್ಧವಿದೆ ಎಂಬ ಸುಳಿವನ್ನೂ ಸಿಂಗ್ ನೀಡಿದ್ದರು.

ಆಗ್ರಾ ಶಾಂತಿ ಮಾತುಕತೆಗಳಿಗಾಗಿ ವಾಜಪೇಯಿ ಮತ್ತು ಸಿಂಗ್ ಇಬ್ಬರೂ ತೀವ್ರ ಆಸಕ್ತಿ ಹೊಂದಿದ್ದರು. ಆದರೆ ಮುಷರಫ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಮಾತುಕತೆ ವಿಫಲಗೊಂಡಿತ್ತು. ನಂತರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಸಿಂಗ್,‘ತಲುಪಬೇಕಾದ ಗಮ್ಯ ಇನ್ನೂ ಬಹಳ ದೂರವಿದೆ,ಆದರೆ ಕಾರವಾನ್ ಮುಂದೆ ಸಾಗಲಿದೆ ’ಎಂದು ಕಾವ್ಯಮಯವಾಗಿ ಹೇಳಿದ್ದರು.

ವಾಜಪೇಯಿ ಸರಕಾರ ವಿಫಲಗೊಂಡಿದೆ ಎನ್ನುವುದು ಆಗ್ರಾ ಮಾತುಕತೆಗಳ ವೈಫಲ್ಯದ ಪಾಠವಾಗಿರಲಿಲ್ಲ,ಆದರೆ ಭಾರತವು ತನ್ನ ಅತ್ಯಂತ ತೊಂದರೆದಾಯಕ ನೆರೆರಾಷ್ಟ್ರವನ್ನು ತಲುಪಲು ಪ್ರಯತ್ನಿಸಿತ್ತು ಎನ್ನುವುದನ್ನು ಅದು ಬೆಟ್ಟು ಮಾಡಿತ್ತು.

ಪರಮಾಣು ಪರೀಕ್ಷೆಗಳು ಹಾಗೂ ಸಿಂಗ್-ಟಾಲ್ಬಾಟ್ ಮಾತುಕತೆಗಳು

2001ರ ವೇಳೆಗೆ ಜವಾಬ್ದಾರಿಯುತ ಮತ್ತು ಅಣ್ವಸ್ತ್ರ ದೇಶವಾಗಿ ಭಾರತದ ಜಾಗತಿಕ ವರ್ಚಸ್ಸು ಭಾರತ-ಪಾಕಿಸ್ತಾನ ನಡುವಿನ ದ್ವೇಷವು ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ವಿಶ್ವ ಸಮುದಾಯದ ಭೀತಿಯನ್ನು ತೊಡೆದುಹಾಕಿತ್ತು. 1998ರ ಪರಮಾಣು ಪರೀಕ್ಷೆಗಳ ನಂತರ ಅಮೆರಿಕವು ಕಠಿಣ ನಿರ್ಬಂಧಗಳನ್ನು ಹೇರಿದ ಎರಡು ವರ್ಷಗಳ ಬಳಿಕ 2001ರಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು.

1998 ಮೇ 11 ಮತ್ತು 13ರಂದು ಪರಮಾಣು ಪರೀಕ್ಷೆಗಳು ನಡೆಯಲಿವೆ ಎಂಬ ಅತ್ಯುನ್ನತ ರಹಸ್ಯ ಗೊತ್ತಿದ್ದ ಡಝನ್ ಜನರಲ್ಲಿ ಸಿಂಗ್ ಒಬ್ಬರಾಗಿದ್ದರು. ಅದರೆ ಪರೀಕ್ಷೆಗಳ ಒಂದು ತಿಂಗಳಲ್ಲೇ ಅಮೆರಿಕ ನಿರ್ಬಂಧಗಳನ್ನು ಹೇರಿದ್ದು,ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಮ್ಮೇಳನದ ನೇಪಥ್ಯದಲ್ಲಿ ಸಿಂಗ್ ಅಮೆರಿಕದ ಉಪ ವಿದೇಶಾಂಗ ಸಚಿವ ಸ್ಟ್ರೋಬ್ ಟಾಲ್ಬಾಟ್‌ರನ್ನು ಭೇಟಿಯಾಗಿದ್ದರು ಮತ್ತು ಸಿಂಗ್-ಟಾಲ್ಬಾಟ್ ಮಾತುಕತೆಗಳಿಗೆ ಚಾಲನೆ ನೀಡಿದ್ದರು. ಇದರಿಂದ ಏಷ್ಯಾದಲ್ಲಿ ಪರಮಾಣು ಸಂಗಾತಿಯನ್ನಾಗಿ ತಾನು ಭಾರತವನ್ನೇಕೆ ಪರಿಗಣಿಸಬೇಕು ಎನ್ನುವುದರ ಮಹತ್ವವನ್ನು ಅಮೆರಿಕವು ತಿಳಿದುಕೊಳ್ಳುವಂತಾಗಿತ್ತು.

ಟಾಲ್ಬಾಟ್ ಮತ್ತು ಸಿಂಗ್ ನಡುವೆ ಸ್ನೇಹ ಬೆಳೆದಿತ್ತು ಮತ್ತು ಭಾರತದ ಬಗ್ಗೆ ಅಮೆರಿಕದ ಹೊಸ ತಿಳುವಳಿಕೆಗೆ ಬುನಾದಿ ಹಾಕಲು ಮೂರು ಖಂಡಗಳಲ್ಲಿಯ ಏಳು ರಾಷ್ಟ್ರಗಳಲ್ಲಿ ಅವರಿಬ್ಬರೂ 14 ಸಲ ಭೇಟಿಯಾಗಿದ್ದರು.

ನಂತರದ ವರ್ಷಗಳಲ್ಲಿ ಬಿಜೆಪಿಯಲ್ಲಿ ವಿರೋಧ

2004ರಲ್ಲಿ ಬಿಜೆಪಿ ಕೇಂದ್ರದಲ್ಲಿ ತನ್ನ ಅಧಿಕಾರಾವಧಿಯನ್ನು ಪೂರೈಸುವ ವೇಳೆಗಾಗಲೇ ಸಿಂಗ್‌ಗೆ ಬಿಜೆಪಿಯಲ್ಲಿ ತೊಂದರೆಗಳು ಎದುರಾಗತೊಡಗಿದ್ದವು. ರಾಜಸ್ಥಾನದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಅವರಿಗೆ ಅವಕಾಶ ನೀಡಿರಲಿಲ್ಲ,ಬದಲಿಗೆ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಸೋತರೆ ಸಿಂಗ್ ಗೆದ್ದಿದ್ದರು. ಆದರೆ ತನ್ನ ಮುಕ್ತಮಾತುಗಳಿಗೆ ಕಡಿವಾಣ ಹಾಕಲು ಅವರು ಒಪ್ಪಿರಲಿಲ್ಲ. ತನ್ನ ಪುಸ್ತಕಗಳು ಮತ್ತು ಪ್ರವಾಸಗಳಿಂದ ಬಿಜೆಪಿಯಲ್ಲಿ ಅಸಮಾಧಾನದ ಅಲೆಗಳನ್ನು ಎಬ್ಬಿಸುತ್ತಲೇ ಸಾಗಿದ್ದರು.

2006ರಲ್ಲಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ, ಹಿಂದೂಗಳು ಅತ್ಯಂತ ಪವಿತ್ರ ಎಂದು ಪರಿಗಣಿಸುವ ಹಿಂಗ್ಲಜ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಿಂಗ್ ಕರಾಚಿಯಲ್ಲಿನ ಜಿನ್ನಾರ ಗೋರಿಗೂ ಭೇಟಿ ನೀಡಿದ್ದರು. ಇದು ಭಾರತದಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಮೂರು ವರ್ಷಗಳ ಬಳಿಕ ‘ಜಿನ್ನಾ: ಭಾರತ, ವಿಭಜನೆ, ಸ್ವಾತಂತ್ರ್ಯ’ ಪುಸ್ತಕದಲ್ಲಿ ಜಿನ್ನಾರನ್ನು ಹೊಗಳಿದ್ದಕ್ಕಾಗಿ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು. ಹತ್ತು ತಿಂಗಳ ಬಳಿಕ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಸಿಂಗ್‌ಗಾಗಿ ಪಕ್ಷದ ಬಾಗಿಲುಗಳು ಮತ್ತೆ ತೆರೆದುಕೊಳ್ಳುವಂತೆ ಮಾಡಿದ್ದರು. ಆದರೆ ಪಕ್ಷದಲ್ಲಿ ಸಿಂಗ್ ವಿರುದ್ಧದ ಮುನಿಸು ಅಂತ್ಯ ಕಂಡಿರಲಿಲ್ಲ. 2014ರ ಚುನಾವಣೆಯಲ್ಲಿ ತನ್ನ ಹುಟ್ಟೂರು ಜಸೋಲ್ ಅನ್ನು ಒಳಗೊಂಡಿರುವ ಬಾರ್ಮೇರ್ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಬಯಸಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಸಿಂಗ್ 70,000ಕ್ಕೂ ಅಧಿಕ ಮತಗಳಿಂದ ಪರಾಜಿತರಾಗಿದ್ದರು.

’‘ನಾನು ಸೋತಿದ್ದೇನೆ,ಆದರೆ ನಾನು ಸೋತಿದ್ದೇನೆಂದು ನನ್ನಿಂದ ನಂಬಲಾಗುತ್ತಿಲ್ಲ ’ಎಂದು ಸಿಂಗ್ ತನ್ನ ಎಂದಿನ ಬಿಚ್ಚುಮನಸ್ಸಿನೊಂದಿಗೆ ಸುದ್ದಿಗಾರರ ಎದುರು ಒಪ್ಪಿಕೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X