Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ28 Sept 2020 11:06 AM IST
share
ಓ ಮೆಣಸೇ...

ಕರ್ನಾಟಕವನ್ನು ಸುಗ್ರೀವಾಜ್ಞೆ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ- ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ
ವಾಲಿ, ಸುಗ್ರೀವರೆಲ್ಲ ಸೇರಿ ರಾಜ್ಯವನ್ನು ಕಿಷ್ಕಿಂದೆ ಮಾಡಲು ಹೊರಟಂತಿದೆ.


ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ವಿಧೇಯಕಗಳು ಅನಿವಾರ್ಯವಾಗಿದ್ದವು- ನರೇಂದ್ರ ಮೋದಿ, ಪ್ರಧಾನಿ
ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡಿಸಿ ಅಂಬಾನಿ, ಅದಾನಿ ಕಪಿಮುಷ್ಟಿಗೆ ಒಪ್ಪಿಸುವುದು ಅನಿವಾರ್ಯವಾಗಿರಬೇಕು.


ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ದೇಶದ ಪ್ರಧಾನಿಯಾಗುವ ಆಸೆ ಇತ್ತು ಅದು ಈಡೇರದಿರುವುದಕ್ಕೆ ನೋವೂ ಇತ್ತು- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆ ನೋವಿನಿಂದಲೇ ಅವರು ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿರಬೇಕು.


ನಮ್ಮಲ್ಲಿ ವಲಸಿಗರು-ಮೂಲ ನಿವಾಸಿಗಳು ಎಂಬ ಗೊಂದಲವಿಲ್ಲ - ನಾರಾಯಣಗೌಡ, ಸಚಿವ
ಗೊಂದಲವಿಲ್ಲ, ಅಸಮಾಧಾನವಷ್ಟೇ ಇದೆ.


ಕೃಷಿ ವಿಧೇಯಕವನ್ನು ವಿರೋಧಿಸುತ್ತಿರುವವರು ಪಟ್ಟಭದ್ರ ಹಿತಾಸಕ್ತಿಗಳೇ ವಿನಾ ರೈತರಲ್ಲ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಾಜಿ ಸಿಎಂ
ಬೆಂಬಲಿಸುತ್ತಿರುವ ಅದಾನಿ, ಅಂಬಾನಿಗಳೆಲ್ಲ ಇವರ ಪಾಲಿಗೆ ನಿಜವಾದ ರೈತರಿರಬೇಕು.


ವಿರೋಧ ಪಕ್ಷಗಳ ಸದ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ -ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ದೇಶದ ಸ್ಥಿತಿಯ ಬಗ್ಗೆಯೂ ಒಂದಿಷ್ಟು ಹೇಳಿ.


ಅಧಿಕಾರವೆಂಬ ನಶೆಯಲ್ಲಿ ತೇಲುತ್ತಿದ್ದುದರಿಂದಲೇ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು- ಎಚ್.ವಿಶ್ವನಾಥ್, ಸಚಿವ
ಅಧಿಕಾರವನ್ನು ಅನುಭವಿಸುತ್ತಿರುವವರ ಮೇಲೆ ಮಾದಕ ದ್ರವ್ಯ ಸೇವನೆಯ ಪ್ರಕರಣ ದಾಖಲಿಸಿದರೆ ಹೇಗೆ?


ಸಾವು ಬರಲಿ ಆದರೆ, ಕೊರೋನದಿಂದ ಮಾತ್ರ ಯಾರೂ ಸಾಯಬಾರದು - ಅರಗ ಜ್ಞಾನೇಂದ್ರ, ಶಾಸಕ
ವಲಸೆ ಕಾರ್ಮಿಕರ ಸಾವಿಗೆ ಸಮರ್ಥನೆಯೇ?


ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತಲ್ಲ - ಬಸವರಾಜ ಹೊರಟ್ಟಿ, ಮಾಜಿ ಸಚಿವ
 ಸದ್ಯಕ್ಕೆ ಹಾಲಿ ಮುಖ್ಯಮಂತ್ರಿಯ ಕತೆಯೇನು ಹೇಳಿ?


ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ- ರೇಣುಕಾಚಾರ್ಯ, ಸಿಎಂ ಕಾರ್ಯದರ್ಶಿ
ಮಾರ್ಜಾಲ ಸನ್ಯಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ.


ಕಾಂಗ್ರೆಸ್ ಬಿಟ್ಟು ಹೋಗಿರುವ 60 ಹಿರಿಯ ನಾಯಕರು ಮರಳಿ ಪಕ್ಷಕ್ಕೆ ಬರಲು ಅರ್ಜಿ ಹಾಕಿಕೊಂಡಿದ್ದಾರೆ - ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ವಾಪಸ್ ಬರುವುದಕ್ಕೆ ಅವರಿಗೆ ಎಷ್ಟು ಕೊಡಬೇಕಂತೆ?


ನನ್ನ ಗೆಳೆಯ ಉಮೇಶ್ ಕತ್ತಿ ಸಚಿವರಾದರೆ ನಾನು ತುಂಬಾ ಖುಷಿ ಪಡುತ್ತೇನೆ - ರಮೇಶ್ ಜಾರಕಿಹೊಳಿ, ಸಚಿವ
ಜೊತೆ ಸೇರಿ ಸರಕಾರಕ್ಕೆ ಕತ್ತಿ ಇಡುವ ಉದ್ದೇಶವಿದೆಯೇ?


ಪ್ರಧಾನಿ ಮೋದಿ ವ್ಯಕ್ತಿಯಲ್ಲ ದೇವಮಾನವ, ರಾಜರ್ಷಿ -ಯಡಿಯೂರಪ್ಪ, ಮುಖ್ಯಮಂತ್ರಿ
ಪ್ರಧಾನಿಯಾಗಲು ಇರುವ ಮೊದಲ ಅರ್ಹತೆಯೇ ಮನುಷ್ಯರಾಗಿರುವುದು.


ಒಂದು ನಿರ್ದಿಷ್ಟವಾದ ವಯಸ್ಸನ್ನು ದಾಟಿದ ನಂತರ ಅಹಂಕಾರವನ್ನು ಕೈ ಬಿಡಬೇಕು - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ
 ಆ ವಯಸ್ಸು ನಿಮಗೆ ಇನ್ನೂ ಬಂದಿಲ್ಲವೇ?


ಪಡಿತರ ಚೀಟಿದಾರರ ಆಹಾರಧಾನ್ಯ ಉಗ್ರಾಣದಿಂದ ನೇರವಾಗಿ ಎಲ್ಲೆಲ್ಲಿಗೋ ಹೋಗುವ ಕಾಲ ಇದಲ್ಲ - ಸಿ.ಟಿ.ರವಿ, ಸಚಿವ
ನೇರವಾಗಿ ಸ್ಯಾನಿಟೈಸರ್ ತಯಾರಿಕೆಗೆ ಹೋಗಿದೆಯಂತೆ.


ನಾನು ಇಂದು ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಕೊಡುಗೆ ಅಪಾರ - ಯಡಿಯೂರಪ್ಪ, ಮುಖ್ಯಮಂತ್ರಿ
ಅವರಿದ್ದಿದ್ದರೆ ಅಡ್ಡಿ ಪಡಿಸುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿರಬೇಕು.


ಹೆಣದ ಮೇಲಿನ ರಾಜಕಾರಣ ನಮ್ಮ ಸಂಸ್ಕೃತಿಯಲ್ಲ - ಯು.ಟಿ.ಖಾದರ್, ಮಾಜಿ ಸಚಿವ
ನಿಮ್ಮದೇನಿದ್ದರೂ ಹಣದ ಮೇಲಿನ ರಾಜಕಾರಣ.


ಮಧ್ಯಮ, ಕೆಳ ಮಧ್ಯಮ ಕುಟುಂಬಗಳಲ್ಲಿ ಸರಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮರುಕಳಿಸುತ್ತಿದೆ - ಸುರೇಶ್‌ಕುಮಾರ್, ಸಚಿವ
ಅದಕ್ಕೆ ಈ ಪರಿಯ ಆತಂಕವೇ?


ಒಂದು ವೇಳೆ ಚೀನಾ ನಮ್ಮ ಜೊತೆ ಯುದ್ಧ ಮಾಡಿದರೆ ನಾವು ಯುದ್ಧವನ್ನು ಮುಗಿಸುತ್ತೇವೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಜೊತೆಗೆ ದೇಶವನ್ನು ಕೂಡ.


ರಾಜಕಾರಣಿಗಳದ್ದು ಹಂಗಿನ ಬದುಕು - ರಮೇಶ್‌ಕುಮಾರ್ , ಮಾಜಿ ಸ್ಪೀಕರ್
ಇನ್ನೂ ಬಿಜೆಪಿಯ ಹಂಗಿನಲ್ಲಿದ್ದೀರಾ?


ಭ್ರಷ್ಟಾಚಾರಿಗಳನ್ನು ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಿಸಬಾರದು - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ರಾಜಕಾರಣಿಗಳು ಎಂದರೆ ಸಾಕಲ್ಲವೇ?


ಭಾರತ - ಚೀನಾ ಗಡಿ ವಿವಾದದಲ್ಲಿ ಸಹಾಯ ಮಾಡಲು ನಾವು ಸಿದ್ಧ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಶಸ್ತ್ರಾಸ್ತ್ರಗಳನ್ನು ಉಭಯ ದೇಶಗಳಿಗೆ ಮಾರಾಟ ಮಾಡುವ ಮೂಲಕ ಇರಬೇಕು.

share
ಪಿ.ಎ.ರೈ
ಪಿ.ಎ.ರೈ
Next Story
X