ಯಲ್ಲಾಪುರ : ಗ್ಯಾಸ್ ಟ್ಯಾಂಕರ್ - ಬೈಕ್ ನಡುವೆ ಢಿಕ್ಕಿ ; ತಂದೆ, ಮಗಳು ಸ್ಥಳದಲ್ಲೇ ಮೃತ್ಯು
ಯಲ್ಲಾಪುರ : ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ತಂದೆ- ಮಗಳು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯ ಸಿಬ್ಬಂದಿ ವಿನೋದ ಕಿಂದಳಕರ್ (56) ಹಾಗೂ ಸುನೇಹಾ ಕಿಂದಳಕರ್ (12) ಅಪಘಾತದಲ್ಲಿ ಮೃತರು.
ವಿನೋದ ಅವರು ಮಗಳನ್ನು ಯಲ್ಲಾಪುರದಿಂದ ಅಂಕೋಲಾ ತಾಲೂಕಿನ ಹಾರವಾಡಾಕ್ಕೆ ತೆರಳಿದ್ದರು. ಈ ಸಂದರ್ಭ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಮೃತಪಟ್ಟಿದ್ದಾರೆ.
ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಾಗಿದೆ.
Next Story