ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಬೀಚ್ ಸ್ಚಚ್ಛತೆ

ಮಲ್ಪೆ, ಅ.2: ಗಾಂಧೀ ಜಯಂತಿ ಪ್ರಯುಕ್ತ, ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಪಡೆಯ ವತಿಯಿಂದ, ಕಡಲ್ ಸೆಂಟರ್ ಫಾರ್ ಸಪ್ ಸರ್ಫ್ ಯೋಗ ಮತ್ತು ನೇಶನ್ ನೆಸ್ಟ್ ತಂಡದ ಸಹಯೋಗದಲ್ಲಿ ಮಲ್ಪೆಯ ಲೈಟ್‌ಹೌಸ್ ದ್ವೀಪದಲ್ಲಿ ಮತ್ತು ದ್ವೀಪದ ಸಮುದ್ರ ತೀರ ಪ್ರದೇಶದಲ್ಲಿ ಸ್ಚಚ್ಛತಾ ಕಾರ್ಯಕ್ರಮ ನಡೆಯಿತು.
ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಆರ್.ಚೇತನ್ ಅವರ ನೇತೃತ್ವದಲ್ಲಿ ಶುಕ್ರವಾರ ಮುಂಜಾನೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಗ್ರಹಿಸಿದ ಕಸವನ್ನು ಮಣಿಪಾಲದ ಕಸ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಎಸ್ಪಿ ಆರ್.ಚೇತನ್ ಕೃತಜ್ಞತೆ ಸಲ್ಲಿಸಿದರು.
Next Story





